ದನದ ಮಾಂಸ ತಿನ್ತೀನಿ, ಕೇಳೋಕೆ ನೀನ್ಯಾರು : ಸಿದ್ದರಾಮಯ್ಯ
ಬೆಂಗಳೂರು : ಗೋ ಹತ್ಯೆ ವಿಚಾರವಾಗಿ ದೇಶ ಮತ್ತು ರಾಜ್ಯದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿರೋ ಸಂದರ್ಭದಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಇಂದು ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಠಿಮಾಡಿದೆ.
ನಾನು ದನದ್ ಮಾಂಸ ತಿಂತೀನಿ, ನೀನ್ಯಾವನಯ್ಯ ಅದನ್ನ ಕೇಳಕ್ಕೆ. ಇಟ್ ಇಸ್ ಮೈ ರೈಟ್. ಫುಡ್ ಹ್ಯಾಬಿಟ್ ನಂದು. ನಾನ್ ತಿಂತೀನಪ್ಪಾ. ವ್ಹು ಆರ್ ಯು ಟು ಕ್ವಷನ್ ಇಟ್..? ನೀ ತಿನ್ನಲಂದ್ರೆ ಬಿಟ್ಬುಡು.. ನಾನ್ ಐ ಆಯಮ್ ನಾಟ್ ಗೋಯಿಂಗ್ ಟು ಫೋರ್ಸ್ ಯು. ನಾ ತಿಂತೀನಿ, ನನಗಿಷ್ಟ ತಿನ್ನೋಕ್ಕೆ ಇದು ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ನಡೆಯಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಅವರು, ಸಿದ್ದಾಂತದ ಪಾಠ ಮಾಡಿದರು.
ಮೊದಲು ನಮ್ಮ ಸಿದ್ದಾಂತದ ಬಗ್ಗೆ ಸ್ಪಷ್ಟತೆ ಇರಬೇಕು. ನಮ್ಮವರು ಬಹಳ ಜನ ಹಿಂಗೆ ಹೇಳಿದ್ರೆ ಹೆಂಗಾಗ್ಬಿಡುತ್ತೋ.. ಹಂಗೇಳಿದ್ರೆ ಹೆಂಗಾಗ್ಬಿಡುತ್ತೋ ಅಂತ ಭಯ ಪಟ್ಕೊಳ್ತಾರೆ.. ನಾನು ಒಂದ್ಸಾರಿ ಅಸೆಂಬ್ಲಿನಲ್ಲಿ ಹೇಳ್ದೆ..
“ನಾನು ದನದ್ ಮಾಂಸ ತಿಂತೀನಿ, ನೀನ್ಯಾವನಯ್ಯ ಅದನ್ನ ಕೇಳಕ್ಕೆ. ಇಟ್ ಇಸ್ ಮೈ ರೈಟ್. ಫುಡ್ ಹ್ಯಾಬಿಟ್ ನಂದು. ನಾನ್ ತಿಂತೀನಪ್ಪಾ. ವ್ಹು ಆರ್ ಯು ಟು ಕ್ವಷನ್ ಇಟ್..? ನೀ ತಿನ್ನಲಂದ್ರೆ ಬಿಟ್ಬುಡು.. ನಾನ್ ಐ ಆಯಮ್ ನಾಟ್ ಗೋಯಿಂಗ್ ಟು ಫೋರ್ಸ್ ಯು.
ನಾ ತಿಂತೀನಿ, ನನಗಿಷ್ಟ ತಿನ್ನೋಕ್ಕೆ. ನೀ ಯಾವೋನ್ ಕೇಳೋಕ್ಕೆ..? ಅದು ಹೇಳೋಕೆ ಧೈರ್ಯ ಬೇಕಾ..? ಅವ್ರು ಹೇಳಿದ್ದೇ ಸರಿಯಾಗಿದೆ ಅಂತ ಸುಮ್ಮನೆ ಇದ್ಬಿಡೋದು ನಮ್ಮೋರು. ಈ ಥರದ ಗೊಂದಲಗಳಿವೆ ಅಲ್ವಾ, ಈ ಗೊಂದಲಗಳಿಂದ ನೀವು ಹೊರಗೆ ಬರ್ಬೇಕು.
ಪ್ಲೀಸ್”. ಈ ವಿಚಾರಗಳಲ್ಲಿ ನಮಗೆ ಸ್ಪಷ್ಟತೆ ಇದ್ದರಷ್ಟೇ ಬಿಜೆಪಿ ಎದುರಿಸೋಕೆ ಸಾಧ್ಯವಾಗುತ್ತದೆ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಪಾಠ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









