ಪಂಜಾಬ್: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ಸೋಂಕಿತರ ಸಂಖ್ಯೆ 1000ದ ಗಡಿ ದಾಟಿದೆ. ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದೆ. ಆದ್ರೆ ಜನರು ಮಾತ್ರ ಇದ್ರ ಗಂಭೀರತೆಯನ್ನು ಇನ್ನೂ ಅರಿತಿಲ್ಲ ಅನಿಸುತ್ತಿದೆ. ಮೊನ್ನೆಯಷ್ಟೇ ಲಾಕ್‌ಡೌನ್ ಮಧ್ಯೆಯೂ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ದೆಹಲಿ ಬಸ್ ಟರ್ಮಿನಲ್‌ನಲ್ಲಿ ಸೇರಿ ಆತಂಕ ಸೃಷ್ಟಿಸಿದ್ರು. ಇವತ್ತು ಅಂಥಾದ್ದೇ ದೃಶ್ಯ ಪಂಜಾಬ್‌ನ ಲುಧಿಯಾನದಲ್ಲಿ ಕಂಡುಬಂದಿದೆ.
ಹೌದು..! ಲುಧಿಯಾನದಲ್ಲಿ ಜನರು ಲಾಕ್ ಡೌನ್ ನಿಯಮಗಳನ್ನು ಗಾಳಿ ತೂರಿದ್ದು, ಹೋಲ್‌ಸೇಲ್ ವೆಜಿಟೇಬಲ್ ಮಾರ್ಕೆಟ್‌ನಲ್ಲಿ ಇವತ್ತು ಮುಂಜಾನೆ ಸಾವಿರಾರು ರೈತರು, ವ್ಯಾಪಾರಿಗಳು ಕಂಡುಬಂದ್ರು. ವ್ಯಾಪಾರ ಜೋರಾಗಿಯೇ ನಡೆದಿತ್ತು. ಆದ್ರೆ ಈ ಸಂದರ್ಭದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಹಾಗೆಯೇ ಓಡಾಡ್ತಿದ್ದಿದ್ದು ಆತಂಕ ಸೃಷ್ಟಿಮಾಡಿದೆ.








