ADVERTISEMENT
Friday, September 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೆ ಇದ್ದರೆ ಉಪವಾಸ ಸತ್ಯಾಗ್ರಹ – ಅಣ್ಣಾ ಹಜಾರೆ ಎಚ್ಚರಿಕೆ

Shwetha by Shwetha
December 29, 2020
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
Anna Hazare hunger strike
Share on FacebookShare on TwitterShare on WhatsappShare on Telegram

ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೆ ಇದ್ದರೆ ಉಪವಾಸ ಸತ್ಯಾಗ್ರಹ – ಅಣ್ಣಾ ಹಜಾರೆ ಎಚ್ಚರಿಕೆ Anna Hazare hunger strike

ಹೊಸದಿಲ್ಲಿ, ಡಿಸೆಂಬರ್29: ರೈತರ ಪರವಾಗಿ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೆ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಎಚ್ಚರಿಕೆ ನೀಡಿದ್ದಾರೆ. Anna Hazare hunger strike
Anna Hazare hunger strike

Related posts

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

September 18, 2026
ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

September 18, 2026

ಭ್ರಷ್ಟಾಚಾರ ವಿರುದ್ದ ಸಾರ್ವಜನಿಕ ಚಳವಳಿಯ ನೇತೃತ್ವ ವಹಿಸಿ ಯುಪಿಎ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಈಗ ರೈತರ ಬೆಂಬಲಕ್ಕೆ ನಿಂತಿದ್ದಾರೆ. ‌ ಮೂರು ಕೃಷಿ ಕಾಯ್ದೆಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ತಾವು ನಡೆಸುವ ಸತ್ಯಾಗ್ರಹ ತಮ್ಮ ಅಂತಿಮ ಹೋರಾಟವಾಗಲಿದೆ ಎಂದು 83 ವರ್ಷದ ಅಣ್ಣಾ ಹಜಾರೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

1992ರಲ್ಲಿ ‌ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾದ ಭಾರತೀಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ 1991ರಲ್ಲಿ ಭ್ರಷ್ಟಾಚಾರದ ವಿರೋಧಿಸಿ ಭ್ರಷ್ಟಾಚಾರ ವಿರೋಧಿ ಜನ ಆಂದೋಲನ ಎಂಬ ಸಾರ್ವಜನಿಕ ಚಳವಳಿ ಆರಂಭಿಸಿದರು.
ಸಾರ್ವಜನಿಕ ಕಛೇರಿಗಳಲ್ಲಿನ ‌ಭ್ರಷ್ಟಾಚಾರ ವಿರೋಧಿಸಿ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಡ ಹೇರಿದ್ದ ಅವರು 2011ರ ಎಪ್ರಿಲ್ 5ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು.

ಮೋಟಾರು ವಾಹನ ದಾಖಲೆಗಳ ಸಿಂಧುತ್ವ ಮಾರ್ಚ್ 31, 2021 ರವರೆಗೆ ಮಾನ್ಯ

ಸರ್ಕಾರಿ ಸಂಸ್ಥೆಯಲ್ಲಿನ ಭ್ರಷ್ಟಾಚಾರದಿಂದ ರಾಜ್ಯ ಸರ್ಕಾರಗಳಿಗೆ ಕೋಟ್ಯಂತರ ರೂಪಾಯಿ ವಂಚನೆಯಾಗಿರುವುದನ್ನು ಅಣ್ಣಾ ಹಜಾರೆ ಪುರಾವೆಗಳ ಸಮೇತ ಸರ್ಕಾರಕ್ಕೆ ಮನದಟ್ಟು ಮಾಡಿದರು. ‌ಆದರೆ ಅಂದು ಕೇಂದ್ರದಲ್ಲಿದ್ದ ಯುಪಿಎ ಸರ್ಕಾರದ ಮಂತ್ರಿಯೂ ಹಗರಣದಲ್ಲಿ ಭಾಗಿಯಾಗಿದ್ದ ಕಾರಣ, ಕೇಂದ್ರವು ಕ್ರಮ ಕೈಗೊಳ್ಳಲು ಹಿಂದೇಟು ಹಾಕಿತ್ತು. ಆಗ ಆಮರಣಾಂತ ಉಪವಾಸ ಕೈಗೊಂಡ ಅಣ್ಣಾ ಹಜಾರೆ ತಾವು ಪಡೆದಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ಹಿಂದಿರುಗಿಸಿದರು. ಇದರಿಂದ ಎಚ್ಚೆತ್ತ ಯುಪಿಎ ಸರ್ಕಾರ ಕೊನೆಗೆ ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡಿತ್ತು.

ಇದೀಗ ರೈತರ‌ ಶಕ್ತಿಯಾಗಿ ನಿಂತಿರುವ ಅಣ್ಣಾ ಹಜಾರೆ ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿಯೂ ಮತ್ತು ಇದು ತಮ್ಮ ಅಂತಿಮ ಹೋರಾಟವಾಗಲಿದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ತನ್ನ ಹುಟ್ಟೂರಾದ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ರಾಳೆಗಣಸಿದ್ಧಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ತಾನು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇನೆ. ಆದರೆ ಕೇಂದ್ರ ಸರ್ಕಾರ ಸ್ವಲ್ಪವೂ ಲಕ್ಷ್ಯ ವಹಿಸಿಲ್ಲ.
Anna Hazare hunger strike

ಸುಳ್ಳು ಭರವಸೆಗಳನ್ನು ನೀಡುತ್ತಿರುವ ಸರ್ಕಾರದ ಮೇಲೆ ನನಗೆ ನಂಬಿಕೆ ಸಂಪೂರ್ಣ ಹೊರಟು ಹೋಗಿದೆ. ಈಗ ತನ್ನ ಬೇಡಿಕೆ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳು ಗಡುವು ಕೊಟ್ಟಿದ್ದೇನೆ. ಜನವರಿ ಅಂತ್ಯದ ಒಳಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾನು ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಇದು ತನ್ನ ಕೊನೆಯ ಪ್ರತಿಭಟನಾ ಅಸ್ತ್ರವಾಗಲಿದೆ ಎಂದು ಹೇಳಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1343586719208071168?s=19

https://twitter.com/SaakshaTv/status/1343587039950721026?s=19

 

Tags: Anna Hazarehunger strike
ShareTweetSendShare
Join us on:

Related Posts

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

ನಾನೀಗ ಮುಖ್ಯಮಂತ್ರಿಯಲ್ಲ ನನ್ನ ಮಾತು ಎಷ್ಟು ನಡೆಯುತ್ತೆ ಅಂತ ನನಗೇ ಗೊತ್ತು: ಸಿದ್ದರಾಮಯ್ಯ ಅವರ ಅಂತರಾಳದ ಮಾತುಗಳ ಹಿಂದಿರುವ ಮರ್ಮವೇನು?

by Shwetha
September 18, 2026
0

ಬೆಂಗಳೂರು: ರಾಜಕೀಯ ಅಖಾಡದಲ್ಲಿ ಯಾವಾಗಲೂ ಖಡಕ್ ಮಾತುಗಳಿಗೆ ಹೆಸರಾದ ಸಿದ್ದರಾಮಯ್ಯನವರು ಇಂದು ಅತ್ಯಂತ ಭಾವುಕವಾಗಿ ಮತ್ತು ಮಾರ್ಮಿಕವಾಗಿ ಮಾತನಾಡಿದ್ದಾರೆ. ನಾನೀಗ ಮುಖ್ಯಮಂತ್ರಿಯಲ್ಲ, ನನ್ನ ಮಾತು ಈಗ ಎಷ್ಟು...

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

ಅಜಿತ್ ಅಗರ್ಕರ್ ಸಾರಥ್ಯಕ್ಕೆ ಎಳ್ಳುನೀರು: ರೋಹಿತ್ ಕೊಹ್ಲಿ ಜೊತೆಗಿನ ಕಿತ್ತಾಟವೇ ಅಗರ್ಕರ್ ಪಾಲಿಗೆ ಮುಳುವಾಯಿತೇ-ಅಗರ್ಕರ್ ನಿರ್ಗಮನದ ಹಿಂದೆ ಅಡಗಿದೆಯೇ ರಹಸ್ಯ!

by Shwetha
September 18, 2026
0

ಭಾರತೀಯ ಕ್ರಿಕೆಟ್ ರಂಗದಲ್ಲಿ ಈಗ ಮಹತ್ವದ ಬದಲಾವಣೆಯೊಂದು ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಟೀಮ್ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರ ಅಧಿಕಾರಾವಧಿ ಮುಕ್ತಾಯದ ಹಂತಕ್ಕೆ ತಲುಪಿದ್ದು,...

ತಳವಾರ್ ST ಪ್ರಮಾಣಪತ್ರಕ್ಕೆ ಆಗ್ರಹ: ಸಿಎಂ ಶಿವಕುಮಾರ್‌ಗೆ ಕಪ್ಪು ಬಾವುಟ ತೋರಿಸಲು ಮುಂದಾದ ಹೋರಾಟಗಾರರು ವಶಕ್ಕೆ

ತಳವಾರ್ ST ಪ್ರಮಾಣಪತ್ರಕ್ಕೆ ಆಗ್ರಹ: ಸಿಎಂ ಶಿವಕುಮಾರ್‌ಗೆ ಕಪ್ಪು ಬಾವುಟ ತೋರಿಸಲು ಮುಂದಾದ ಹೋರಾಟಗಾರರು ವಶಕ್ಕೆ

by Shwetha
September 18, 2026
0

ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ನಡುವೆಯೇ ಕಲಬುರಗಿಯಲ್ಲಿ ತಳವಾರ್ ಸಮುದಾಯದ ಎಸ್‌ಟಿ ಪ್ರಮಾಣಪತ್ರದ ಬೇಡಿಕೆ ಮತ್ತೆ ತೀವ್ರಗೊಂಡಿದೆ. ಸಮುದಾಯದ ಹಕ್ಕುಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ...

ಉಮರ್ ಖಾಲಿದ್ ಹೇಳಿಕೆ ವಿವಾದ: ಬಿ.ಕೆ. ಹರಿಪ್ರಸಾದ್ ವಿರುದ್ಧ ವಿಧಾನಸೌಧ ಠಾಣೆಗೆ ದೂರು

‘ಉಮರ್ ಖಾಲಿದ್‌ನನ್ನು ದೇಶದ್ರೋಹಿ ಎನ್ನುವವರೇ ನಿಜವಾದ ರಾಷ್ಟ್ರದ್ರೋಹಿಗಳು’: ಬಿ.ಕೆ. ಹರಿಪ್ರಸಾದ್

by Shwetha
September 18, 2026
0

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನದ ಸುತ್ತ ಆರಂಭವಾಗಿರುವ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಖಾಲಿದ್ ಅವರನ್ನು “ರಾಷ್ಟ್ರವಾದಿ”...

ಡಿಕೆಶಿ ಸರ್ಕಾರದ 100 ದಿನದ ಸಂಭ್ರಮಕ್ಕೆ ಕಿಚ್ಚನ ಶುಭಾಶಯ: ನೈಜ ಅಭಿಮಾನವೋ ಅಥವಾ ರೌಡಿಸಂಗೆ ಹೆದರಿ ಮಾಡಿದ ಘೋಷಣೆಯೋ? ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂದಿದ್ದಕ್ಕೆ ಹೆದರಿದ್ರಾ ಸುದೀಪ್ ಎಂದು ಟ್ರೋಲ್

ಡಿಕೆಶಿ ಸರ್ಕಾರದ 100 ದಿನದ ಸಂಭ್ರಮಕ್ಕೆ ಕಿಚ್ಚನ ಶುಭಾಶಯ: ನೈಜ ಅಭಿಮಾನವೋ ಅಥವಾ ರೌಡಿಸಂಗೆ ಹೆದರಿ ಮಾಡಿದ ಘೋಷಣೆಯೋ? ನಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂದಿದ್ದಕ್ಕೆ ಹೆದರಿದ್ರಾ ಸುದೀಪ್ ಎಂದು ಟ್ರೋಲ್

by Shwetha
September 18, 2026
0

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯನವರಿಂದ ಅಧಿಕಾರ ಹಸ್ತಾಂತರ ಪಡೆದು ಮುಖ್ಯಮಂತ್ರಿ ಗದ್ದುಗೆ ಏರಿ ಯಶಸ್ವಿಯಾಗಿ ನೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram