ADVERTISEMENT
Wednesday, August 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬೆಂಗಳೂರಿಗೆ ವಕ್ಕರಿಸಿದ ಬ್ರಿಟನ್ ರೂಪಾಂತರಿ ಕೊರೊನಾ: ಮೂವರಿಗೆ ಸೋಂಕು ದೃಢ..?

Kariyappa N by Kariyappa N
December 29, 2020
in Newsbeat, Politics, Samagra karnataka, ರಾಜ್ಯ
UK coronavirus India
Share on FacebookShare on TwitterShare on WhatsappShare on Telegram

ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ಕರ್ನಾಟಕದ ಜನತೆ ತತ್ತರಿಸಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ರಾಜ್ಯಕ್ಕೆ ಬ್ರಿಟನ್ ರೂಪಾಂತರಿ ಕೊರೊನಾ ಮತ್ತೆ ಕಂಟಕವಾಗುವ ಸಾಧ್ಯತೆ ಇದೆ.
ಬ್ರಿಟನ್‍ನಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಉತ್ತರಹಳ್ಳಿಯ 6 ವರ್ಷದ ಮಗಳು, 34 ವರ್ಷದ ಮಹಿಳೆ ಹಾಗೂ ರಾಜಾಜಿನಗರದ 73 ವರ್ಷದ ಮಹಿಳೆಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿದೆ ಎನ್ನಲಾಗಿದೆ.

ಇಂದು ಸಂಜೆ ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಣೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಡಿಸೆಂಬರ್ 19ರಂದು ಬ್ರಿಟನ್‍ನಿಂದ ತಾಯಿ ಮಗಳು ಬಂದಿದ್ದರು. ಬೆಂಗಳೂರಿಗೆ ಬಂದ ನಂತರ ಉತ್ತರಹಳ್ಳಿಯಲ್ಲಿ ನೆಲೆಸಿದ್ದರು. ಬಂದ ಕೆಲ ದಿನಗಳಲ್ಲಿ ಶೀತ-ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳ ಅವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ದೃಢಪಟ್ಟಿತ್ತು.
ಇದೇ ವೇಳೆ ಬ್ರಿಟನ್‍ನಿಂದ ಬಂದು ರಾಜಾಜಿನಗರದಲ್ಲಿ ನೆಲೆಸಿದ್ದ ಮಹಿಳೆಯ ತಾಯಿಗೆ ರೂಪಾಂತರಿ ಕೊರೊನಾ ದೃಢಪಟ್ಟಿದೆ. ಬ್ರಿಟನ್‍ನಿಂದ ಬಂದ ಮಗಳ ಸಂಪರ್ಕದಿಂದ ತಾಯಿಗೆ ಬ್ರಿಟನ್ ಕೊರೊನಾ ಸೋಂಕು ಹರಡಿದೆ.

Related posts

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

August 26, 2026
ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

August 26, 2026

report
ರಾಜಾಜಿನಗರದ ವೃದ್ಧೆ ಹಾಗೂ ಉತ್ತರಹಳ್ಳಿಯ ಇಬ್ಬರನ್ನೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಅವರ ಸ್ವ್ಯಾಬ್ ಮಾದರಿಯನ್ನು ತೆಗೆದು ಪುಣೆಯ ಲ್ಯಾಬೋರೇಟರಿಗೆ ಕಳಿಸಲಾಗಿತ್ತು. ಈಗ ಮೂವರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪುಣೆಯ ಲ್ಯಾಬೋರೇಟರಿ ನೀಡಿದ ವರದಿಯಲ್ಲಿ ಮೂವರು ಮಹಿಳೆಯರಿಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

ರಾಜಧಾನಿ ಬೆಂಗಳೂರಿಗೆ ಬ್ರಿಟನ್ ಭೂತ ಡೇಂಜರ್..ಡೇಂಜರ್..!
ಹೊಸ ವರ್ಷಾಚರಣೆಗೆ ಎರಡೇ ದಿನಗಳು ಬಾಕಿ ಇರುವಾಗಲೇ ಬೆಂಗಳೂರಿನ ಮೂವರಿಗೆ ಬ್ರಿಟನ್ ಮ್ಯೂಟೆಡ್ ಕೊರೊನಾ ದೃಢಪಟ್ಟಿರುವುದು ಎಚ್ಚರಿಕೆಯ ಗಂಟೆ ಬಾರಿಸಿದೆ.
ಡಿಸೆಂಬರ್ 19ರಂದು ಬ್ರಿಟನ್ ಏರ್‍ವೇಸ್ ಮೂಲಕ ಬೆಂಗಳೂರಿಗೆ ಬಂದಿದ್ದ ತಾಯಿ-ಮಗಳು ವಿಮಾನ ಹತ್ತುವ ಮೊದಲು ಕರೊನಾ ಟೆಸ್ಟ್ ಮಾಡಿಸಿಕೊಳ್ಳದೇ ಬಂದಿದ್ದರಂತೆ. ಹೀಗಾಗಿ ಇವರು ಎಷ್ಟು ಜನರಿಗೆ ಬ್ರಿಟನ್ ಕೊರೊನಾ ಹರಡಿಸಿದ್ದಾರೋ ಎಂಬ ಆತಂಕ ಶುರುವಾಗಿದೆ.


ಹೊಸ ವರ್ಷಾಚರಣೆಗೆ ಹೋಟೆಲ್, ಬಾರ್, ರೆಸಾರ್ಟ್‍ಗಳಲ್ಲಿ ಭರ್ಜರಿ ಸಿದ್ದತೆ ಮಾಡಿಕೊಂಡಿರುವಾಗಲೇ ಬ್ರಿಟನ್ ಹೆಮ್ಮಾರಿ ಡೇಂಜರ್ ಸಿಗ್ನಲ್ ಕೊಟ್ಟಿದೆ. ಈಗಾಗಲೇ ಬ್ರಿಟನ್‍ನಿಂದ 200ಕ್ಕೂ ಹೆಚ್ಚು ಮಂದಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಸರ್ಕಾರ ಹಾಗೂ ಬಿಬಿಎಂಪಿ, ಪೊಲೀಸರು ಇವರ ಪತ್ತೆಗೆ ನಡೆಸುತ್ತಿರುವ ಯಾವ ಪ್ರಯತ್ನಗಳೂ ಸಫಲವಾಗಿಲ್ಲ. ಹೀಗಾಗಿ ನಾಪತ್ತೆಯಾಗಿರುವವರು ಬೆಂಗಳೂರು ಹಾಗೂ ಕರ್ನಾಟಕಕ್ಕೆ ಬ್ರಿಟನ್ ಕೊರೊನಾ ಹಬ್ಬಿಸುವವರಾಗಿದ್ದಾರಾ ಎಂದ ಆತಂಕ ಎದುರಾಗಿದೆ.

ಪುಣೆ-1, ಹೈದ್ರಾಬಾದ್‍ನ ಇಬ್ಬರಿಗೆ ಕೊರೊನಾ
ಬ್ರಿಟನ್‍ನಿಂದ ಭಾರತ್ಕೆ ಬಂದವರಲ್ಲಿ ಬೆಂಗಳೂರಿನ ಮೂವರು ಸೇರಿ 6 ಜನರಿಗೆ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ದೃಢಪಟ್ಟಿದೆ. ಹೈದರಾಬಾದ್‍ನ ಇಬ್ಬರು ಹಾಗೂ ಪುಣೆಯ ಒಬ್ಬರಿಗೆ ರೂಪಾಂತರಿ ಕೊರೊನಾ ಕನ್ಫರ್ಮ್ ಆಗಿದ್ದು, ಸಂಜೆ ಅಧಿಕೃತ ಘೋಷಣೆ ಆಗಲಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bangaloreBritain's mutant coronabritan retunshydarabadnimhansPune
ShareTweetSendShare
Join us on:

Related Posts

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

ಸಾವಿನಲ್ಲೂ ಸತ್ಯ ಹೇಳಿದ ಡೆತ್ ನೋಟ್- ಇಸ್ಲಾಂ ಧರ್ಮಕ್ಕೆಮತಾಂತರವಾಗದಿದ್ದರೆ ಕೊಲೆ ಮಾಡುವುದಾಗಿ ಹೆದರಿಸಿದ್ದ ಶೂಟಿಂಗ್ ಕೋಚ್ ಈಗ ಕಂಬಿ ಹಿಂದೆ

by Shwetha
August 26, 2026
0

ಆಂಧ್ರಪ್ರದೇಶದ ಗೋದಾವರಿ ನದಿಗೆ ಹಾರಿ ಎಂಜಿನಿಯರ್ ಕುಟುಂಬವೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಈಗ ಸ್ಫೋಟಕ ಸತ್ಯವೊಂದು ಹೊರಬಂದಿದೆ. ಮೃತ ಎಂಜಿನಿಯರ್ ಬರೆದಿಟ್ಟಿರುವ ಡೆತ್ ನೋಟ್ ಇಡೀ ಪ್ರಕರಣಕ್ಕೆ...

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಅರ್ಜಿ ವಜಾ: ಅಲಹಾಬಾದ್ ಹೈಕೋರ್ಟ್

by Shwetha
August 26, 2026
0

ಶಾಲಾ ಸಮವಸ್ತ್ರದೊಂದಿಗೆ ಹಿಜಾಬ್ ಅಥವಾ ತಲೆಗೆ ಸ್ಕಾರ್ಫ್ ಧರಿಸಲು ಅನುಮತಿ ನೀಡಬೇಕು ಎಂದು ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ತರಗತಿಯಲ್ಲಿ ಹಿಜಾಬ್...

ಕರ್ನಾಟಕಕ್ಕೆ ಮತ್ತೆ ಶಾಕ್; CWRC ಶಿಫಾರಸು ಎತ್ತಿಹಿಡಿದ CWMA

ಕರ್ನಾಟಕಕ್ಕೆ ಮತ್ತೆ ಶಾಕ್; CWRC ಶಿಫಾರಸು ಎತ್ತಿಹಿಡಿದ CWMA

by Shwetha
August 26, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಾಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...

ಕೈ ಪಾಳಯದಲ್ಲಿ ಮುಗಿಯದ ಸಂಪುಟ ಪುನಾರಚನೆ ಸರ್ಕಸ್!: ಹಿರಿಯ ಸಚಿವರಿಗೆ ಕೊಕ್ ಹೊಸ ಮುಖಗಳಿಗೆ ಚಾನ್ಸ್ ದೆಹಲಿ ಪ್ರವಾಸದಲ್ಲಿ ನಿರ್ಧಾರವಾಗಲಿದೆ ಕೈ ನಾಯಕರ ಭವಿಷ್ಯ

ಕೈ ಪಾಳಯದಲ್ಲಿ ಮುಗಿಯದ ಸಂಪುಟ ಪುನಾರಚನೆ ಸರ್ಕಸ್!: ಹಿರಿಯ ಸಚಿವರಿಗೆ ಕೊಕ್ ಹೊಸ ಮುಖಗಳಿಗೆ ಚಾನ್ಸ್ ದೆಹಲಿ ಪ್ರವಾಸದಲ್ಲಿ ನಿರ್ಧಾರವಾಗಲಿದೆ ಕೈ ನಾಯಕರ ಭವಿಷ್ಯ

by Shwetha
August 26, 2026
0

ಬೆಂಗಳೂರು ಶಾಸಕರ ಬಂಡಾಯದ ಕಿಚ್ಚು ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ರಾಜ್ಯ ಸಚಿವ ಸಂಪುಟ ಪುನಾರಚನೆಯ ಗುಸುಗುಸು ಈಗ ಜೋರಾಗಿ ಕೇಳಿಬರುತ್ತಿದೆ. ಹಿರಿಯ ಶಾಸಕರು ಸಚಿವ ಸ್ಥಾನಕ್ಕಾಗಿ ಪಟ್ಟು...

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

ಕುಂಭಮೇಳಕ್ಕೆ ಕೋಟಿ ಕೋಟಿ ಶಾಲೆ ಉಳಿಸಲು ನಯಾಪೈಸೆ ಇಲ್ಲವೇ ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಕಳವಳ

by Shwetha
August 26, 2026
0

ದೇಶದಲ್ಲಿ ಶಿಕ್ಷಣದ ಸ್ಥಿತಿಗತಿ ಮತ್ತು ಸರ್ಕಾರದ ಆದ್ಯತೆಗಳ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪಿ ಬಿ ವರಾಳೆ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಿಗೆ ಸಾವಿರಾರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram