2020 ರಲ್ಲಿ ಅಂತ್ಯಗೊಂಡ ಕನ್ನಡ ಸಿನಿತಾರೆಯರ ಬದುಕು : ಕಲಾವಿಧರಿಗೆ ಗೌರವ ನಮನ..!
2020… ಈ ವರ್ಷ ಇತಿಹಾಸದ ಪುಟದಲ್ಲಿ ಸದಾ ಕಾಲ ಕರಾಳತೆಯ ಕಪ್ಪು ಚುಕ್ಕೆಯಾಗಿ ಶತಶತಮಾನಗಳ ಕಾಲ ಉಳಿಯಲಿದೆ. ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಎಲ್ಲಾ ಸಿನಿಮಾರಂಗದಲ್ಲೂ ಸಾಲು ಸಾಲು ಕಲಾವಿಧರು, ದಿಗ್ಗಜರು ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಕೊರೊನಾ ಹಾವಳಿ, ಲಾಕ್ ಡೌನ್ ನಿಂದ ಚಿತ್ರರಂಗ ನೆಲಕಚ್ಚಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಇನ್ನೇನು 2021 ಕ್ಕೆ ದಿನಗಣನೆ ಆರಂಭವಾಗಿದೆ. 2021ನ್ನ ವೆಲ್ ಕಮ್ ಮಾಡಲು ಹೊಸ ಆಶಯದೊಂದಿಗೆ ಜನ ಕಾಯ್ತಿದ್ದಾರೆ.
ಇದೀಗ ಈ ವರ್ಷದಲ್ಲಿ ಯಾರೆಲ್ಲಾ ಸಿನಿ ತಾರೆಯರು, ಕಲಾವಿಧರು, ಧಾರಾವಾಹಿ ನಟ – ನಟಿಯರ ಬದುಕು ಅಂತ್ಯವಾಗಿದೆ ಎಂಬುವ ಕಹಿ ನೆನಪನ್ನ ಒಮ್ಮೆ ನೆನೆಯೋಣ. ನಮ್ಮನ್ನ ಈ ವರ್ಷ ಅಗಲಿದ ಗಣ್ಯರಿಗೆ ಗೌರಮ ನಮನ ಸಲ್ಲಿಸೋಣ..
ಸ್ಯಾಂಡಲ್ ವುಡ್
ಫೆಬ್ರವರಿ -18-2020:
ಹಿರಿಯ ನಟಿ ಕಿಶೋರಿ ಬಲ್ಲಾಳ್ – ವಯೋಸಹಜ ಕಾಯಿಲೆಯಿಂದ 82ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ರು. ಸುಮಾರು 75 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಇವರು ಬಾಲಿವುಡ್, ಕನ್ನಡ ಮರಾಠಿ ಸೇರಿ ಹಲವಾರು ಭಾಷೆಗಳಲ್ಲಿ ನಟಿಸಿದ್ದರು. ಶಾರುಖ್ ಅವರ ಸ್ವದೆಶಿ ಸಿನಿಮಾ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.
ಏಪ್ರಿಲ್ -06-2020:
ಹಾಸ್ಯ ನಟ ಬುಲೆಟ್ ಪ್ರಕಾಶ್ – 44 ನೇ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದ ಬುಲೆಟ್ ಪ್ರಕಾಶ್ ಅವರು ಹಲವಾರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಜನರನ್ನ ಸಾಕಷ್ಟು ನಕ್ಕು ನಲಿಸಿದ್ರು. ಓಂಕಾರ , ಅಂಬಿ, ಐರಾವತ, ಜಾಕಿ, ಪುಂಗಿ ದಾಸ, ತಿರುಪತಿ ಎಕ್ಸ್ ಪ್ರೆಸ್ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮೇ -13 -2020:
ಮೈಕಲ್ ಬಸು – ಹಲವು ಸಿನಿಮಾಗಳಲ್ಲಿ ಹಾಸ್ಯನಟನಾಗಿ ನಟಿಸಿದ್ದ ಮೈಕಲ್ ಅವರು 51ನೇ ವರ್ಷದಲ್ಲಿ ನಮ್ಮನ್ನೆಲ್ಲ ಅಗಲಿದರು. ಹೃದಯಾಘಾತದಿಂದ ಕೊನೆಯುಸಿರೆಳೆದರು. ಶ್.. , ಆಪರೇಶನ್ ಅಂತ.. ಓಂ.. ಗಾಜನೂರು ಗಂಡು, ಮಿನುಗು ತಾರೆ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಕೊನೆಯದಾಗಿ ನಟಿಸಿದ ಸಿನಿಮಾ 2020ರಲ್ಲಿ ತೆರರೆಕಂಡ ಫ್ರೆಂಚ್ ಬಿರಿಯಾನಿ.
ಜೂನ್ -7- 2020 :
ಚಿರಂಜೀವಿ ಸರ್ಜಾ – ಸಿನಿಮಾರಂಗವಷ್ಟೇ ಅಲ್ದೇ ಇಡೀ ಕರುನಾಡೇ ಕಣ್ಣೀರಿಟ್ಟು ದೇವರಿಗೆ ಹಿಡಿ ಶಾಪ ಹಾಕಿದ್ದ ದಿನ.. ಅಂದು ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ ಚಿರಂಜೀವಿ ಸರ್ಜಾ ಕಡೆಯ ಉಸಿರೆಳೆದ ಕರಾಳ ದಿನ. 39ನೇ ವಯಸ್ಸಿನಲ್ಲಿ ಚಿರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆಂಬ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಅಭಿಮಾನಿಗಳು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ತುಂಬು ಗರ್ಭಿಣಿಯಾಗಿದ್ದ ಪತ್ನಿ ಮೇಘನಾ ಪತಿಯ ಪಾರ್ಥೀವ ಶರೀರ ತಬ್ಬಿ ಕಣ್ಣೀರಿಟ್ಟಿದ್ದ ದೃಶ್ಯ ಇಂದಿಗೂ ಮರೆಯಲು ಸಾಧ್ಯವಿಲ್ಲ. ಮೊದಲ ಸಿನಿಮಾ ಚಿರು ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಚಿರು ಬಳಿಕ ಆಟಗಾರ, ವರಧನಾಯಕ, ಅಮ್ಮ, ಸಿಂಗ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದರು. ಕೊನೆಯ ಸಿನಿಮಾ ಶಿವಾರ್ಜುನ. ಶಿವಾರ್ಜುನ ರಿಲೀಸ್ ಮುನ್ನ ವಿಧಿವಶರಾದ್ರು.
2024ರಲ್ಲಿ ಆಂಧ್ರದ ಸಿಎಂ ಆಗ್ತಾರಂತೆ ‘ಕೊಮರಂ ಭೀಮ್’
ಜುಲೈ – 01 -2020:
ಮಿಮಿಕ್ರಿ ರಾಜಗೋಪಾಲ್ – ಹಾಸ್ಯನಟನಾಗಿ , ವಿಭಿನ್ನ ನಟನಾ ಶಯಲಿಯಿಂದಲೇ ಗುರುತಿಸಿಕೊಂಡಿದ್ದ ಮೇರು ನಟ ರಾಜಗೋಪಾಲ್ ಅವರು ಅನಾರೋಗ್ಯದಿಂದಾಗಿ 69ನೇ ವಯಸ್ಸಿನಲ್ಲಿ ನಿಧನರಾಗಿದ್ದರು. 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಲಾದಾನ ಮಾಡಿದ್ದ ಮೇರು ಕಲಾವಿಧ ರಾಜಗೋಪಾಲ್ ಅವರು. ಚಿನ್ನಾರಿ ಮುತ್ತ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸೆಪ್ಟೆಂಬರ್ -24-2020 :
ರಾಕ್ ಲೈನ್ ಸುಧಾಕರ್ – 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುಧಾಕರ್ ಅವರು ತಮ್ಮದ್ದೇ ಆದ ವಿಭಿನ್ನ ನಟನಾ ಶಯಲಿ ಹೊಂದಿದ್ದರು. ವಿಭಿನ್ನ ನಟನಾ ಶಯಲಿಯಿಂದಲೇ ಪ್ರೇಕ್ಷಕರ ಗಮನ ಸೆಳೆದಿದ್ದ ಇವರು ಹಾಸ್ಯ ನಟನಾಗಿ ಹಾಗೂ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ವಿಪರ್ಯಾಸವೆಂದರೇ ಶೂಟಿಂಗ್ ಸೆಟ್ ನಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಡಿಸೆಂಬರ್ -25 -2020:
ನಿರ್ದೇಶಕ ಭರತ್ – ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಕಂಠಿ ಸೇರಿದಂತೆ ಕೆಲ ಸಿನಿಮಾಗಳನ್ನ ನಿರ್ದೇಶಿಸಿದ್ದ ಯುವ ನಿರ್ದೇಶಕ ಭರತ್ ಅವರು ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel