2ಎಗೆ ಪಂಚಮಸಾಲಿ ಸೇರ್ಪಡೆ | ಯಡಿಯೂರಪ್ಪರಿಂದ ಸಾಧ್ಯ
ಕಲಬುರಗಿ : ಪಂಚಮಸಾಲಿ ಸಮುದಾಯವನ್ನು ಓಬಿಸಿಯಲ್ಲಿ ಸೇರ್ಪಡೆ ಮಾಡೋದು ಯಡಿಯೂರಪ್ಪ ಅವರನ್ನು ಬಿಟ್ಟರೇ ಬೇರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪಂಚಮಸಾಲಿ ಸಮುದಾಯವನ್ನ 2ಎ ಗೆ ಸೇರ್ಪಡೆ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯವನ್ನು ರಾಜ್ಯ ಮಟ್ಟದಲ್ಲಿ 2ಎಗೆ ಸೇರ್ಪಡೆಗೊಳಿಸಲು ಆಗ್ರಹಿಸಿದ್ದೇವೆ.
ನಮ್ಮ ಸಮುದಾಯದಿಂದ ರಾಜ್ಯಕ್ಕೆ ಮೂವರು ಸಿಎಂಗಳನ್ನ ನೀಡಿದ್ದೇವೆ. ಆದರೂ ಪಂಚಮಸಾಲಿ ಸಮುದಾಯವನ್ನ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಪ್ರಯತ್ನ – ಸುಧಾಕರ್
ಓಬಿಸಿಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸಿದರೇ ನಮಗೆ ಮೊದಲ ಜಯ ಸಿಕ್ಕಿದಂತೆ. ಈ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಂದ ಮಾತ್ರ ಸಾಧ್ಯ.
ಅವರನ್ನು ಬಿಟ್ಟರೇ ಬೇರೆ ಯಾರಿಂದಲೂ ಇದು ಮಾಡಲು ಸಾಧ್ಯವಿಲ್ಲ. ಅವರ ಅವಧಿಯಲ್ಲೇ ಈ ಕೆಲಸ ಆಗಬೇಕಾಗಿದೆ ಎಂದು ಆಗ್ರಹಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









