ತಾಕತ್ತಿದ್ದರೇ ಟಿಪ್ಪು ಬಗ್ಗೆ ಮಾತಾಡಿ : ಸಿದ್ದರಾಮಯ್ಯಗೆ ರೇಣುಕಾಚಾರ್ಯ ಸವಾಲ್
ಬೆಂಗಳೂರು : ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಗೋವಿನ ಮಾಂಸ ತಿನ್ನುತ್ತೇನೆ ಎಂದು ಹೇಳುವುದು ದುರಹಂಕಾರದ ಪರಮಾವಧಿ.
ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದಶಿ ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ಸಿದ್ದರಾಮಯ್ಯ ಅವರ ದನದ ಮಾಂಸ ತಿನ್ತೀನಿ ಎಂಬ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ, ಆಹಾರಪದ್ಧತಿ ಅವರವರ ವೈಯಕ್ತಿಕವಾದ ವಿಚಾರ ಯಾರೊಬ್ಬರೂ ಕೂಡ ಇಂತಹದ್ದೇ ಆಹಾರ ತಿನ್ನಬೇಕು ಎಂದು ಒತ್ತಾಯಿಸುವುದಿಲ್ಲ.
ಸೋಮನಾಥ ಮಂದಿರದ ಕೆಳಗೆ 3 ಮಹಡಿಯ ಕಟ್ಟಡ ಪತ್ತೆ
ಹಿಂದೂಗಳು ಪೂಜ್ಯ ಭಾವನೆಯಿಂದ ಕಾಣುವ ಗೋವಿನ ಮಾಂಸ ತಿನ್ನುತ್ತೇನೆ ಎಂದು ಹೇಳುವುದು ದುರಹಂಕಾರದ ಪರಮಾವಧಿ. ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು.
ಗೋ ಮಾಂಸ ತಿನ್ನಬಾರದು ಅಂತ ರಾಜ್ಯ ಸರ್ಕಾರ ಎಲ್ಲಿಯೂ ಹೇಳಿಲ್ಲ, ಗೋ ವಧೆಗೆ ನಿಷೇಧ ಹೇರಲಾಗಿದೆ ಅಷ್ಟೆ. ಆದ್ರೆ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಕ್ಷುಲ್ಲಕ ಹೇಳಿಕೆ ನೀಡಿ ಹಿಂದೂಗಳ ಭಾವನೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಹನುಮ ಹುಟ್ಟಿದ ತಾರೀಖು ಗೊತ್ತಾ ಎಂಬ ಸಿದ್ದು ಹೇಳಿಕೆಗೆ ಕಿರಿಕಾರಿದ ರೇಣುಕಾಚಾರ್ಯ, ಹನುಮಂತ ಹಿಂದೂಗಳ ಆರಾಧ್ಯ ದೈವ. ಹನುಮ ಹುಟ್ಟಿದ್ದೇಲ್ಲಿ..? ಯಾವಾಗ ಅಂತ ಕೇಳುವ ನಿಮಗೆ ತಾಕತ್ತಿದ್ದರೇ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿ ಎಂದು ಸವಾಲು ಹಾಕಿದರು.
ಟಿಪ್ಪು ಸುಲ್ತಾನ್ ಎಲ್ಲಿ ಹುಟ್ಟಿದ, ಯಾವಾಗ ಹುಟ್ಟಿದ, ಅವನ ಹಿನ್ನಲೆ ನಿಮಗೇನಾದರೂ ಗೊತ್ತಾ? ಹಿಂದೂ ದೇವತೆಗಳ ಬಗ್ಗೆ ಮಾತನಾಡಿದರೆ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಾರೆಂಬ ಭ್ರಮೆಯಲ್ಲಿದ್ದೀರಿ. ನಿಮ್ಮ ಹೇಳಿಕೆಗಳನ್ನು ನಿಮ್ಮದೇ ಪಕ್ಷದವರು ಒಪ್ಪುತ್ತಿಲ್ಲ ಎಂದು ಕಿಡಿಕಾರಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









