ಬೆಂಗಳೂರು: ರಾಜ್ಯಾದ್ಯಂತ ಬೆಂಗಳೂರು ನಗರ ಹೊರತುಪಡಿಸಿ ಉಳಿದ ಜಿಲ್ಲೆಗಳ 5728 ಗ್ರಾಮ ಪಂಚಾಯಿತಿಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆದಿದ್ದು, ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಇದೇ ವೇಳೆ, ಮತ ಎಣಿಕೆ ಕೇಂದ್ರಕ್ಕೆ ಮಾಸ್ಕ್ ಇಲ್ಲದೆ ಬಂದ ಅಭ್ಯರ್ಥಿಗಳು ಹಾಗೂ ಬೆಂಬಲಿಗರಿಗೆ ದಂಡ ಹಾಕಿ ಬಿಸಿ ಮುಟ್ಟಿಸುತ್ತಿರುವ ದೃಶ್ಯ ಕೂಡ ಬಹುತೇಕ ಕಡೆ ಕಂಡು ಬರುತ್ತಿದೆ.

ಬೀದರ್ ನಗರದ ಬಿವಿಬಿ ಕಾಲೇಜ್ ನಲ್ಲಿರುವ ಮತದಾನ ಎಣಿಕೆ ಕೇಂದ್ರದ ಬಳಿ ಮಾಸ್ಕ್ ಹಾಕದೇ ಬಂದ ಗ್ರಾಮ ಪಂಚಾಯತಿ ಅಭ್ಯರ್ಥಿಗಳಿಗೆ ಫೈನ್ ಹಾಕುವ ಮೂಲಕ ಬಿಸಿ ಮುಟ್ಟಿಸಲಾಗಿದೆ. ಎಣಿಕೆ ಕೇಂದ್ರದ ಕಡೆ ಕೊರೊನಾ ನಿಯಮ ಉಲ್ಲಂಘನೆ ಮಾಡ ಮಾಸ್ಕ್ ಧರಿಸದೇ ಎಣಿಕೆ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳಿಗೂ ಕೂಡ ಭದ್ರತೆ ನಿರತ ಪೆÇಲೀಸ್ ಅಧಿಕಾರಿಗಳು ಫೈನ್ ಹಾಕಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಸೇರಿದ ಜನರ ಮೇಲೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಕೊರೊನಾ ಪ್ರೋಟೋಕಾಲ್ ಪಾಲಿಸದ ಚುನಾವಣೆ ಸಿಬ್ಬಂದಿ
ಯಾದಗಿರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತ ಏಣಿಕೆ ಕೇಂದ್ರದಲ್ಲಿ ಮಾಸ್ಕ್ ಮತ್ತು ಕೊರೊನಾ ಪ್ರೋಟೋಕಾಲ್ ಪಾಲಿಸದ ಚುನಾವಣೆ ಸಿಬ್ಬಂದಿ ವಿರುದ್ಧ ಯಾದಗಿರಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಫುಲ್ ಗರಂ ಆಗಿದ್ದಾರೆ. ಮತ ಏಣಿಕೆ ಕೇಂದ್ರ ಒಳಗೆ ಮತ್ತು ಹೊರಗಡೆ ನಿಂತವರಿಗೆ ಮಾಸ್ಕ್ ದಂಡ ಹಾಕುವಂತೆ ಡಿಸಿ ಸೂಚನೆ ನೀಡಿದ್ದಾರೆ.

ಮಾಸ್ಕ್ ಇಲ್ಲದೆ ಮತ ಏಣಿಕೆ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳಿಗೆ ಮತ್ತು ಬೆಂಬಲಿಗರಿಗೆ ದಂಡ ಹಾಕಲು ಅಧಿಕಾರಿಗಳು ಮುಂದಾಗಿದ್ದು, ದಂಡ ಕಟ್ಟಲು ಜನರು ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಹೃದಯಾಘಾಂತದಿಂದ ಚುನಾವಣಾಧಿಕಾರಿ ಸಾವು
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರತ ಚುನಾವಣಾಧಿಕಾರಿ ಬೋರೇಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ಎದೆನೋವು ಕಾಣಸಿಕೊಂಡು ಬೋರೇಗೌಡ ಕುಸಿದು ಬೀಳುತ್ತಿದ್ದಂತೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಇಬ್ಬರು ಏಜೆಂಟರ ಸಾವು
ತಮ್ಮ ಅಭ್ಯರ್ಥಿಗಳ ಪರ ಏಜೆಂಟ್ ಆಗಿ ಮತ ಎಣಿಕೆ ಕೇಂದ್ರಕ್ಕೆ ಬರುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಕಾಲುವೆಗೆ ಉರುಳಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಕಾಶ್ ಬನ್ನಿಮಟ್ಟಿ(40), ಸಿದ್ದನಗೌಡ(45) ಎಂದು ಗುರುತಿಸಲಾಗಿದೆ.
ಜೈಲಿನಿಂದಲೇ ಸ್ಪರ್ಧಿಸಿದ್ದ ಅಭ್ಯರ್ಥಿ ಗೆಲುವು
ಜೈಲಿನಿಂದಲೇ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಎಮ್ಮೆಗುಂಡಿ ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಲಿಯಂಡ ಬೋಪಣ್ಣ ಗೆಲುವು ಸಾಧಿಸಿದ್ದಾರೆ. ಪುಲಿಯಂಡ ಬೋಪಣ್ಣ ಅವರದ್ದು ಇದು ಸತತ 4ನೇ ಗೆಲುವು. ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಎಮ್ಮೆಗುಂಡಿ ಕ್ಷೇತ್ರದಿಂದ ಸತತ ಗೆಲವು ಸಾಧಿಸುತ್ತಾ ಬಂದಿದ್ದಾರೆ.
ಅಕ್ಕನ ವಿರುದ್ಧ ತಂಗಿ ಗೆಲುವು
ಅಕ್ಕನ ವಿರುದ್ಧವೇ ಸ್ಪರ್ಧಿಸಿದ್ದ ತಂಗಿ ಗೆಲುವು ಸಾಧಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಮೇಕೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಿಗೇರಿ ವಾರ್ಡ್-1ರಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪುಷ್ಪಾ ಜಯಗಳಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಸಹೋದರಿ ಸುಮಾವತಿ 80 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








