ADVERTISEMENT
Monday, July 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹೊಸ ವರ್ಷಾಚರಣೆಗೆ ಠಫ್ ರೂಲ್ಸ್: ಮಧ್ಯಾಹ್ನದಿಂದಲೇ ನಿಷೇಧಾಜ್ಞೆ, ರಸ್ತೆಗಿಳಿಯೋ ಮುನ್ನ ಎಚ್ಚರ..ಎಚ್ಚರ..!

Kariyappa N by Kariyappa N
December 31, 2020
in Newsbeat, Politics, Samagra karnataka, ರಾಜ್ಯ
new year
Share on FacebookShare on TwitterShare on WhatsappShare on Telegram

    ಸಂಜೆ 6 ಗಂಟೆಯಿಂದ ಪ್ರಮುಖ ರಸ್ತೆಗಳು, ಫೈಓವರ್ ಬಂದ್
ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಹೆಮ್ಮಾರಿ ಕೊರೊನಾ ಹಾಗೂ ಬ್ರಿಟನ್ ರೂಪಾಂತರಿ ಕೊರೊರಾ ಭೀತಿಯ ನಡುವೆಯೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಠಫ್ ರೂಲ್ಸ್ ಜಾರಿಗೆ ತರಲಾಗಿದೆ.

new year
ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮನೆಯಿಂದ ಹೊರಗೆ ಬಂದು ಹೊಸ ವರ್ಷಾಚರಣೆ ಮಾಡುವುದನ್ನು ತಡೆಯಲು ಸರ್ಕಾರ ಹಾಗೂ ನಗರ ಪೊಲೀಸರು ಕಠಿಣ ಕ್ರಮಗೈಗೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಹೊಸ ವರ್ಷಾಚರಣೆ ಸಂಭ್ರಮಾಚರಣೆಗೆಂದು ಮನೆಯಿಂದ ಹೊರಗೆ ಕಾಲಿಡುವ ಮುನ್ನ 10 ಬಾರಿ ಯೋಚಿಸಬೇಕಾಗಿದೆ. ಮನೆಗಳಲ್ಲಿ ನ್ಯೂಇಯರ್ ಪಾರ್ಟಿ ಮಾಡಲು ಅಡ್ಡಿ ಇಲ್ಲ, ಆದರೆ, ಸಾರ್ವಜನಿಕ ಪ್ರದೇಶ, ರಸ್ತೆ, ರೆಸಾರ್ಟ್, ಬೀಜ್‍ಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ.

Related posts

gambir and chapel

Teamindia- 2026: 💥 ಅಂದು ಗ್ರೆಗ್ ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..? 🚨

July 12, 2026
ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

July 12, 2026


ಮುಂಚಿತವಾಗಿ ಬುಕ್ ಮಾಡಿರುವ ಸದಸ್ಯರಿಗೆ ಮಾತ್ರ ಕ್ಲಬ್, ರೆಸ್ಟೋರೆಂಟ್‍ಗಳಿಗೆ ಪ್ರವೇಶ ಇರಲಿದೆ. ಹೋಟೆಲ್‍ಗಳಲ್ಲಿ ಬುಕ್ ಮಾಡಿದ ರಸೀದಿ ಇಟ್ಟುಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.

ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಞೆ
ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಜನ ಸೇರುವುದನ್ನು ತಡೆಯಲು ಇಂದು ಮಧ್ಯಾಹ್ನ 12 ಗಂಟೆಯಿಂದಲೇ ನಿಷೇಧಾಜ್ಷೆ ಜಾರಿಗೆ ಬರಲಿದೆ. ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ನಗರದಲ್ಲಿ ಗುಂಪು ಸೇರುವುದು ಪಾರ್ಟಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

 

15ಕ್ಕೂ ಹೆಚ್ಚು ರಸ್ತೆಗಳು ಬಂದ್..!
ಹೊಸ ವರ್ಷಾಚರಣೆ ಎಂದಾಗ ಬೆಂಗಳೂರಿನ ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಬ್ರಿಗೇಡ್ ರಸ್ತೆಗೆ ಹೋಗದೇ ಇದ್ದರೆ ಹೇಗೆ. ಆದರೆ, ಈ ವರ್ಷ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಕಬ್ಬನ್ ರಸ್ತೆ, ಕಸ್ತೂರ್ ಬಾ ರಸ್ತೆ, ರೆಸಿಡೆನ್ಸಿ ರಸ್ತೆಗಳು ಸೇರಿದಂತೆ ನಗರದ ಪ್ರಮುಖ 15 ರಸ್ತೆಗಳನ್ನು ಸಂಜೆ 6 ಗಂಟೆಯಿಂದಲೇ ಪೊಲೀಸರು ಬಂದ್ ಮಾಡಲಿದ್ದಾರೆ. ಈ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಕೂಡ ಬಂದ್ ಆಗಲಿದೆ. ಪೊಲಿಸರು ಬ್ಯಾರಿಕೇಡ್ ಹಾಕಿ ಸಂಪೂರ್ಣವಾಗಿ ವಾಹನ ಸಂಚಾರ ಬಂದ್ ಮಾಡಲಿದ್ದಾರೆ.
ನಗರದ ಬಹುತೇಕ ಫ್ಲೈಓರ್‍ಗಳು ಸಂಜೆ 6 ಗಂಟೆಯಿಂದಲೇ ಬಂದ್ ಆಗಲಿವೆ. ಬೆಂಗಳೂರು ನಗರದಿಂದ ಹೊರಗೆ ಹೊಸ ವರ್ಷಾಚರಣೆ ಹೋಗುವವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉಚಿತ.

ರಾತ್ರಿ 11 ಗಂಟೆಗೆ ಮದ್ಯ ಮಾರಾಟ ಬಂದ್..!
ಕಳೆದ ವಾರ ರಾತ್ರಿ ಕಫ್ರ್ಯೂ ವಾಪಸ್ ಪಡೆದಿದ್ದ ಸರ್ಕಾರ, ಇಂದೂ ಕೂಡ ಮೊದಲೇ ನಿಗಧಿಪಡಿಸಿದ ಸಮಯದವರೆಗೆ ಬಾರ್ ಮತ್ತು ರೆಸ್ಟೋರೆಂಟ್‍ಗಳು ಇರಲಿವೆ ಎಂದು ತಿಳಿಸಿತ್ತು. ಆದರೆ, ಇಂದು ಅಬಕಾರಿ ಇಲಾಖೆ ಹೊಸ ಗೈಡ್‍ಲೈನ್ಸ್ ಪ್ರಕಟಿಸಿದ್ದು, ರಾತ್ರಿ 10.30ಕ್ಕೆ ಎಂಆರ್‍ಪಿ ಔಟ್‍ಲೆಟ್, ರಾತ್ರಿ 11ರೊಳಗೆ ಬಾರ್ ಆಂಡ್ ರೆಸ್ಟೋರೆಂಟ್‍ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.

ವಾಹನ ಸವಾರರೇ ಎಚ್ಚರ..ಎಚ್ಚರ
ಬೆಂಗಳೂರು ನಗರದಲ್ಲಿ ರಾತ್ರಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸಜ್ಜಾಗಿರುವ ಖಾಕಿ ಪಡೆ, ರಾತ್ರಿ ಅನಗತ್ಯವಾಗಿ ಓಡಾಡುವವರಿಗೆ, ಕುಡಿದು ವಾಹನ ಚಾಲನೆ, ವ್ಹೀಲಿಂಗ್ ಮಾಡುವವರಿಗೆ ಕಠಿಣ ದಂಡಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.


ಕುಡಿದು ವಾಹನ ಚಾಲನೆ ಮಾಡಿದರೆ ಲೈಸೆಲ್ಸ್ ರದ್ದು ಮಾಡುವುದು, ನೈಸ್ ರೋಡ್ ಸೇರಿದಂತೆ ಹೊರವಲಯದ ರಸ್ತೆಗಳಲ್ಲಿ ವ್ಹೀಲಿಂಗ್ ತಡೆಗೆ ಕ್ರಮ ಕೈಗೊಂಡಿದ್ದು, ವ್ಲೀಲಿಂಗ್ ಮಾಡುವವರು ಸಿಕ್ಕಿಬಿದ್ದರೆ ಜೈಲಿಗೆ ಕಳಿಸಲು ನಿರ್ಧರಿಸಿದೆ.
ಆದೇಶವನ್ನು ಉಲ್ಲಂಘಿಸಿದವರಿಗೆ ಐಪಿಸಿ ಸೆಕ್ಷನ್ 188, ಹಾಗೂ ಎನ್‍ಡಿಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಟ್ವಿಟರ್‍ನಲ್ಲಿ ಮಾಹಿತಿ ನೀಡಿದ್ದಾರೆ.

ಮಂಗಳೂರು, ಕಾರವಾರದಲ್ಲಿ ಬೀಚ್ ಬಂದ್..!
ಹೊಸ ವರ್ಷಾಚರಣೆಯನ್ನು ಬೀಚ್‍ಗಳಲ್ಲಿ ಆಚರಿಸುವುದನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಸಂಜೆ 6 ಗಂಟೆಗೆ ಮಂಗಳೂರು, ಉಡುಪಿ, ಕಾರವಾರದ ಎಲ್ಲಾ ಬೀಚ್‍ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಬೀಚ್‍ಗಳಲ್ಲಿ ಹೊಸವರ್ಷದ ಪಾರ್ಟಿ ಮಾಡಲು ತೆರಳಿದರೆ ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವುದು ಪಕ್ಕಾ ಆಗಿದೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: 144 sectionbangalore citycorona alertflyover bundkamal panthNew Year Celebration
ShareTweetSendShare
Join us on:

Related Posts

gambir and chapel

Teamindia- 2026: 💥 ಅಂದು ಗ್ರೆಗ್ ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..? 🚨

by admin
July 12, 2026
0

💥 * ಅಂದು ಗ್ರೆಗ್ ಚಾಪೆಲ್ ರಿಂಗ್ ಮಾಸ್ಟರ್..! ಇಂದು ಗಂಭೀರ್ ಡಿಕ್ಟೇಟರ್..? 🚨 * ಟೀಮ್ ಇಂಡಿಯಾದ ಭವಿಷ್ಯವನ್ನು ಹಾಳು ಮಾಡುತ್ತಿರುವ ಸ್ಯಾಡಿಸ್ಟ್‍ಗಳು ಯಾರು..? 👿...

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

ಸತೀಶ್ ಜಾರಕಿಹೊಳಿ ಮತ್ತು ಸಿಎಂ ಡಿ ಕೆ ಶಿವಕುಮಾರ್ ದೋಸ್ತಿ ದುನಿಯಾ -ಕನಕಪುರ ಬಂಡೆಯ ಜೊತೆ ಕೈಜೋಡಿಸಿದ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ: CM ಹೊಸ ಚದುರಂಗದಾಟಕ್ಕೆ ನಡುಗಿದ ವೈರಿ ಪಾಳಯ!

by Shwetha
July 12, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ, ಶಾಶ್ವತ ಮಿತ್ರರೂ ಇಲ್ಲ ಎಂಬ ಹಳೇ ಗಾದೆ ಮಾತು ಮತ್ತೊಮ್ಮೆ ಅಕ್ಷರಶಃ ನಿಜವಾಗಿದೆ. ರಾಜ್ಯ ರಾಜಕಾರಣ ಹಾಗೂ ಪಕ್ಷದ...

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ  ಡಿಕೆ ಶಿವಕುಮಾರ್

NPS ಗೆ ಎಳ್ಳುನೀರು OPS ಜಾರಿಗೆ ಮುಹೂರ್ತ ಫಿಕ್ಸ್- ಓಪಿಎಸ್ ಜಾರಿಯ ಐತಿಹಾಸಿಕ ಘೋಷಣೆ ಮಾಡಿದ ಡಿಕೆ ಶಿವಕುಮಾರ್

by Shwetha
July 12, 2026
0

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಹಳೆ ಪಿಂಚಣಿ ಯೋಜನೆ ಅಂದರೆ ಓಪಿಎಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗ ಮಹತ್ವದ ಹೆಜ್ಜೆ ಇಟ್ಟಿದೆ....

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

ಜಮೀರ್ ಅಹ್ಮದ್ ಖಾನ್ ಗೆ ಬಿಗಿಯಾದ ಕಾನೂನು ಕುಣಿಕೆ: ರಾಜ್ಯಪಾಲರ ಒಂದು ಸಹಿ ಪ್ರಭಾವಿ ನಾಯಕನ ಭವಿಷ್ಯ ಬದಲಿಸುತ್ತಾ?- ಲೋಕಾಯುಕ್ತ ಬಲೆಯಲ್ಲಿ ಸಿಲುಕಿದರೇ ಜಮೀರ್ ಅಹ್ಮದ್?

by Shwetha
July 12, 2026
0

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಂಕಷ್ಟದ ಕಾರ್ಮೋಡ ಕವಿದಿದೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ...

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

ದಸರಾದಲ್ಲಿ ಕಂಬಳದ ಕಿಚ್ಚು- ಮೈಸೂರು ಪರಂಪರೆಗೆ ಧಕ್ಕೆ ತರಬೇಡಿ: ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದ ಹೆಚ್ ಡಿ ಕುಮಾರಸ್ವಾಮಿ ಮತ್ತು ಯದುವೀರ್ ಒಡೆಯರ್

by Shwetha
July 12, 2026
0

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕರಾವಳಿಯ ಹೆಮ್ಮೆಯ ಕ್ರೀಡೆ ಕಂಬಳವನ್ನು ಆಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಈಗ ದೊಡ್ಡ ಮಟ್ಟದ ಸಾಂಸ್ಕೃತಿಕ ಸಂಘರ್ಷಕ್ಕೆ ನಾಂದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram