93 ಅಮಾಯಕ ಜೀವಗಳನ್ನ ತೆಗೆದು ಅಮೆರಿಕಾವನ್ನೇ ನಡುಗಿಸಿದ್ದ ಸೀರಿಯಲ್ ಕಿಲ್ಲರ್ ಲಿಟ್ಟರ್ ಸಾವು!
ಅಮೆರಿಕ : ಅಮೆರಿಕಾದ ಸರಣಿ ಹಂತಕ ಸ್ಯಾಮ್ಯುಯೆಲ್ ಲಿಟ್ಟರ್ ಮೃತಪಟ್ಟಿದ್ದಾನೆ. ಅಮೆರಿಕಾದ ಇತಿಹಾಸದಲ್ಲೇ ನರಹಂತಕ ಎಂಬ ಕುಖ್ಯಾತಿ ಪಡೆದುಕೊಂಡಿದ್ದ ಸರಣಿ ಹಂತಕ 80 ವರ್ಷದ ಲಿಟ್ಟರ್ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹಲವು ಕೊಲೆ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಸ್ಯಾಮ್ಯುಯೆಲ್ ಜೈಲಿನಲ್ಲಿದ್ದ. ಅನಾರೋಗ್ಯ ಕಾರಣ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.
ಅಡೆನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ : 25 ಜನ ಸಾವು
ಈತನ ಕ್ರೌರ್ಯಕ್ಕೆ ಒಂದೊಮ್ಮೆ ಇಡೀ ಅಮೆರಿಕಾವೇ ಬೆಚ್ಚಿಬಿದ್ದಿತ್ತು. ಇನ್ನೂ ಸೀರಿಯಲ್ ಕಿಲ್ಲರ್ ಸ್ಯಾಮ್ಯುಯೆಲ್ ಟಾರ್ಗೆಟ್ ಹೆಚ್ಚಾಗಿ ಮಹಿಳೆಯರೇ ಆಗಿದ್ದರು. ಅಲ್ಲದೇ ಹೆಚ್ಚಾಗಿ ಕಪ್ಪು ವರ್ಣಿಯರೇ ಆತನಿಂದ ಹತ್ಯೆಗೀಡಾಗಿದ್ದಾರೆ.
ಈತ 40 ವರ್ಷಗಳಲ್ಲಿ ಅಮೆರಿಕದ 19 ರಾಜ್ಯಗಳಲ್ಲಿ ಒಟ್ಟು 93 ಜನರನ್ನು ಕೊಲೆ ಮಾಡಿದ್ದ. 2014ರಲ್ಲಿ ಈ ನರಹಂತಕನನ್ನ ಪೊಲೀಸರು ಬಂಧಿಸಿದ್ದರು. 2014ರಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ ಡಿಎನ್‌ಎ ಹೊಂದಾಣಿಕೆಯಾಗಿತ್ತು. 93 ಜನರನ್ನು ಹತ್ಯೆ ಮಾಡಿರುವುದಾಗಿ ನ್ಯಾಯಾಲಯದ ಎದುರು ತಪ್ಪು ಒಪ್ಪಿಕೊಂಡಿದ್ದ.
ಇವನು 5ನೇ ಕ್ಲಾಸ್ ನಲ್ಲಿ ಇದ್ದಾಗಲೇ ಕೊಲೆ ಪ್ರಯತ್ನ ನಡೆಸಿದ್ದನಂತೆ. ಚಿಕ್ಕ ವಯಸ್ಸಿನಿಂದಲೇ ಕಳ್ಳತನ , ಕೊಲೆ , ಸುಳಿಗೆ , ದರೋಡೆ, ಅಪರಾಧಗಳಲ್ಲಿ ತೊಡಗುತ್ತಾ ಕ್ರಮೇಣ ಸೀರಿಯಲ್ ಕಿಲ್ಲರ್ ಆಗಿ ಜನರ ಮಾರಣ ಹೋಮವನ್ನೇ ನಡೆಸಿ ಅಮೆರಿಕಾದ ಇತಿಹಾಸದಲ್ಲೇ ಅತ್ಯಂತ ಕ್ರೂರಿ ಸರಣಿ ಕಿಲ್ಲರ್ ಎಂಬ ಕುಖ್ಯಾತಿ ಪಡೆದುಕೊಂಡಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








