ಹಾಕಿ ವಿಶ್ವಕಪ್ ಹೀರೋ ಮೈಕಲ್ ಕಿಂಡೊ ಇನ್ನಿಲ್ಲ
ಭುವನೇಶ್ವರ : ಭಾರತಕ್ಕೆ ಹಾಕಿ ವಿಶ್ವಕಪ್ ತಂದುಕೊಟ್ಟ, ಭಾರತ ಹಾಕಿ ತಂಡದ ಮಾಜಿ ಆಟಗಾರ ಮೈಕಲ್ ಕಿಂಡೋ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76ನೇ ವಯಸ್ಸಾಗಿತ್ತು.
ಹಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ರೂರ್ಕೆಲಾದಲ್ಲಿ ಐಜಿಹೆಚ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ್ದಾರೆ.
ಇನ್ನು ಮೈಕಲ್ ಕಿಂಡೋ ಅವರ ನಿಧನಕ್ಕೆ ಹಾಕಿ ಜಗತ್ತು ಕಂಬನಿ ಮಿಡಿಯುತ್ತಿದೆ.
ಮೈಕಲ್ ಕಿಂಡೋ 1972ರ ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಭಾರತೀಯ ತಂಡದ ಭಾಗವಾಗಿದ್ದರು.
2021ಕ್ಕೆ ಭರ್ಜರಿ ಸ್ವಾಗತ ಕೋರಿದ ನ್ಯೂಜಿಲೆಂಡ್
ಹಾಗೆ 1975ರ ವಿಶ್ವಕಪ್ ಗೆದ್ದ ತಂಡದಲ್ಲೂ ಮೈಕಲ್ ಸದಸ್ಯರಾಗಿದ್ದರು. ಅವರ ಸಾಧನೆ ಪರಿಗಣಿಸಿ ಭಾರತ ಕ್ರೀಡಾ ಸಚಿವಾಲಯ ‘ಅರ್ಜುನ ಪ್ರಶಸ್ತಿ’ ನೀಡಿ ಗೌರವಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









