ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮನೆಗೆ ಅಕ್ರಮ ಸುರಂಗ ತೋಡಿದ್ದ ಭೂಪ!
ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆಗಾಗಿ ಇಲ್ಲೊಬ್ಬ ಭೂಪ ಅಕ್ರಮವಾಗಿ ಸುರಂಗಮಾರ್ವನ್ನೇ ತೋಡಿಸಿಟ್ಟಿದ್ದ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು ಈ ಆಸಾಮಿ ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಅಷ್ಟೇ ಅಲ್ಲ ಆಕೆಯ ಮನೆಗೆ ತೆರಳಲು ರಹಸ್ಯ ಸುರಂಗಮಾರ್ಗವನ್ನೂ ನಿರ್ಮಿಸಿದ್ದ. ಆದ್ರೆ ಇದೀಗ ಈ ಕಳ್ಳಬೆಕ್ಕುಗಳು ರೆಡ್ ಹ್ಯಾಂಡ್ ಆಗಿ ಪತಿ ಕೈಗೆ ಸಿಕ್ಕಿಬಿದ್ದಿದ್ದಾರೆ.
ಡ್ಯಾನ್ಸರ್ ಆಗಿದ್ದೇ ತಪ್ಪಾ, ಬಾಲಿವುಡ್ ನಲ್ಲಿರೋದೇ ಅಪರಾಧಾನಾ: ರಾಖಿ ಸಾವಂತ್..!
ಸುರಂಗ ಮಾರ್ಗ ಪತಿಯ ಕಣ್ಣಿಗೆ ಬಿದ್ದಿದ್ದು, ಪತ್ನಿಯ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿದೆ. ಅಂದ್ಹಾಗೆ ಮಹಿಳೆಯ ಪತಿ ಕೆಲಸಕ್ಕೆ ತೆರಳಿದ ವೇಳೆ ಈತ ತನ್ನ ಮನೆಯಿಂದ ಆಕೆಯ ಮನೆಗೆ ಉದ್ದದ ಸುರಂಗ ಕೊರೆಯುವ ಕೆಲಸ ಮಾಡ್ತಿದ್ದ ಎನ್ನಲಾಗಿದೆ. ಮಹಿಳೆಯ ಪತಿ ಜಾರ್ಜ್ ಮನೆಯಿಂದ ಹೊರಡುವ ಸಮಯವನ್ನೇ ಕಾಯುತ್ತಿದ್ದ ಇಬ್ಬರು ಸುರಂಗ ಮಾರ್ಗದ ಮೂಲಕ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು.
ಆದ್ರೆ ಹತ್ತು ಬಾರಿ ತಪ್ಪು ಮಾಡಿದವರು ಒಮ್ಮೆ ಸಿಕ್ಕಿಹಾಕಿಕೊಳ್ಳಲೇ ಬೇಕು ಅನ್ನೋ ಮಾತಿನಂತೆ ಇವರಿಬ್ಬರ ಕಳ್ಳಾಟ ಪತಿಯ ಮುಂದೆ ಬಟಾಬಯಲಾಗಿದೆ. ಅಂದ್ಹಾಗೆ ಜಾರ್ಜ್ ನ ಪತ್ನಿಯೊಂದಿಗೆ ಆಲ್ಬರ್ಟೋ ಎಂಬಾತ ಅಕ್ರಮ ಸಂಬಂಧ ಹೊಂದಿದ್ದ. ಸದ್ಯ ಈ ಸುರಂಗ ಮಾರ್ಗದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








