ನ್ಯೂ ಇಯರ್ ಸೆಲೆಬ್ರೇಷನ್ : ಗೋವಾದಲ್ಲಿಲ್ಲ ನೈ ಕರ್ಫ್ಯೂ ಟೆನ್ಷನ್..!
ಗೋವಾ: ಗೋವಾ… ಕಲರ್ ಫುಲ್ ತಾಣ… ಪ್ರವಾಸಿಗರು ಅದ್ರಲ್ಲೂ ಯುವಕರ ಹಾಟ್ ಸ್ಪಾಟ್… ನ್ಯೂಯಿರ್ ನಲ್ಲಿ ಅಂತೂ ಗೋವಾ ನೋಟ ಸಿಕ್ಕಾಪಟ್ಟೆ ಕಲರ್ ಫುಲ್ ಆಗಿ ಎಲ್ಲಿ ನೋಡಿದ್ರೂ ಜನರಿಂದಲೇ ತುಂಬಿರುತ್ತೆ. ನ್ಯೂಯಿರ್ ಸೆಲೆಬ್ರೇಷನ್ ನಿಂದ ಕಂಗಗೊಳಿಸುತ್ತಿರುತ್ತೆ.
ಆದ್ರೆ ಈ ವರ್ಷ ಪ್ರತಿವರ್ಷದಂತಲ್ಲ. ಈ ವರ್ಷ ಕೊರೊನಾ ಹಾವಳಿಯಿಂದ ಹೊಸ ವರ್ಷಾಚರಣೆಗೆ ಅವಕಾಶ ಇಲ್ಲ. ಕರ್ನಾಟಕ, ದೆಹಲಿ ಸೇರಿದಂತೆ ಬಹುತೇಕ ಎಲ್ಲೆಡೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದ್ರೆ ಗೋವಾದಲ್ಇ ಮಾತ್ರ ನೈಟ್ ಕರ್ಫ್ಯೂ ವಿಧಿಸಲು ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
2021ಕ್ಕೆ ಭರ್ಜರಿ ಸ್ವಾಗತ ಕೋರಿದ ನ್ಯೂಜಿಲೆಂಡ್
ಹೌದು ಇದಕ್ಕೂ ಮೊದಲು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ನೈಟ್ ಕರ್ಫ್ಯೂ ವಿಧಿಸುವುದನ್ನು ಪರಿಗಣಿಸಲು ಸರ್ಕಾರದ ಮುಂದೆ ಫೈಲ್ ಸಲ್ಲಿಸಿದ್ದೇವೆ ಎಂದು ಹೇಳಿದ್ದರು. ಆದರೆ ಮುಂಬೈ ಸೇರಿದಂತೆ ಇತರೆ ನಗರಗಳಲ್ಲಿ ವಿಧಿಸಿರುವ ನೈಟ್ ಕರ್ಫ್ಯೂ ವಿಧಿಸಲು ಗೋವಾ ಸರ್ಕಾರ ಹಿಂದೇಟು ಹಾಕಿದೆ.
ಈಗಾಗಲೇ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋವಾದಲ್ಲಿ ಹೊಸ ವರ್ಷಾಚರಣೆಗೆ ಪ್ರವಾಸಿಗರ ದಂಡು ಸೇರಿದೆ. ಕುಟುಂಬದ ಜೊತೆ ಆಗಮಿಸಿರುವ ಪ್ರವಾಸಿಗರು ಬೀಚ್‌ನಲ್ಲಿ ಸಖತ್ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ನೈಟ್ ಕರ್ಫ್ಯೂ ವಿಧಿಸುವುದು ಡೌಟೇ ಎನ್ನಲಾಗಿದೆ.
ಇನ್ನೂ ಹೊಸ ವರ್ಷಾಚರಣೆಗೆ ನೈಟ್ ಕರ್ಫ್ಯೂ ವಿಧಿಸದಿದ್ದರೂ ಸಹ ಕೇಂದ್ರ ಆರೋಗ್ಯ ಇಲಾಖೆ ಜಾರಿ ಮಾಡಿರುವ ಕೋವಿಡ್-19 ಗೈಡ್‌ಲೈನ್ಸ್ ಪಾಲನೆ ಮಾಡಬೇಕೆಂದು ಸರ್ಕಾರ ಆದೇಶ ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








