ನವದೆಹಲಿ: 135 ಕೋಟಿ ಭಾರತೀಯರ ನಿದ್ದೆಗೆಡಿಸಿರುವ ಹೆಮ್ಮಾರಿಯನ್ನು ದೇಶದಿಂದ ಓಡಿಸಲು ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಫಲಸಿಕ್ಕಿದೆ. ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಶೇ.110ರಷ್ಟು ಸೇಫ್ ಆಗಿರುವ ಹಿನ್ನೆಲೆಯಲ್ಲಿ ಕೊರೊನಾ ವಿರುದ್ಧ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿದೇಶನಾಲಯ ಅಧಿಕೃತ ಅನುಮೋದನೆ ನೀಡಿದೆ.
ಫಿಜರ್ ಮತ್ತು ಭಾರತ್ ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಸಾಕ್ಸಿನ್ ಲಸಿಕೆ ಹಾಗೂ ಅಸ್ತ್ರಜೆನಿಕಾ-ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ತುರ್ತು ಬಳಕೆಗೆ ಮಾಡಲು ಅನುಮತಿ ನೀಡಲಾಗಿದೆ ಎಂದು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯದ ಮಹಾ ನಿದೇರ್ಶಕ ಡಾ.ವಿ.ಜಿ ಸೊಮಾನಿ ಪ್ರಕಟಿಸಿದ್ದಾರೆ.
ಈ ಎರಡೂ ಎರಡೂ ಲಸಿಕೆಗಳನ್ನು 2 ಡೋಸ್‍ನಂತೆ ನೀಡಬಹುದು. ಎರಡೂ ಲಸಿಕೆಗಳನ್ನು 2ರಿಂದ 8 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕು. ತಜ್ಞರ ಸಮಿತಿ ಕಳೆದ ಗುರುವಾರವೇ ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಕೇಂದ್ರ ಸರ್ಕಾರ ಎಂದು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ ರವಾನಿಸಿತ್ತು.
ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ ಸುಧೀರ್ಷ ಚರ್ಚೆ ನಡೆಸಿದ ಬಳಿಕ ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ ಲಸಿಕೆ ಬಳಕೆಗೆ ಅನುಮತಿ ನೀಡಿದೆ. ಹೀಗಾಗಿ ಇಂದು ಅಥವಾ ನಾಳೆಯಿಂದಲೇ ಕೊರೊನಾ ಲಸಿಕೆ ಎಲ್ಲಾ ರಾಜ್ಯಗಳಿಗೆ ರವಾನೆಯಾಗುವ ಸಾಧ್ಯತೆ ಇದೆ.
ಇಂಗ್ಲೆಂಟ್‍ನ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಹಾಗೂ ಅಸ್ತ್ರಜೆನಿಕಾ ಸಂಸ್ಥೆಗಳು ಕೋವಿಶೀಲ್ಡ್ ಲಸಿಕೆಯನ್ನು ಮಹಾರಾಷ್ಟ್ರದ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ಅಭಿವೃದ್ಧಿ ಪಡಿಸಿವೆ. ಇಂಗ್ಲೆಂಡ್ ಸೇರಿ ಏಷ್ಯಾದ ಹಲವು ರಾಷ್ಟ್ರಗಳಿಗೆ ಲಸಿಕೆ ಅಭಿವೃದ್ಧಿಪಡಿಸುವ ಅತಿದೊಡ್ಡ ಸಂಸ್ಥೆ ಪುಣೆಯ ಸೀರಮ್ ಇನ್ಸ್ಟಿಟ್ಯೂಟ್.
ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅಭಿನಂದನೆ
ಹೆಮ್ಮಾರಿ ಕೊರೊನಾಗೆ ಅತಿಶೀಘ್ರವಾಗಿ ಲಸಿಕೆ ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ ವಿಜ್ಞಾನಿಗಳು, ವೈದ್ಯರ ಶ್ರಮ ಅಭಿನಂದನೀಯ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತ ಸ್ವಾವಲಂಬನೆ ಆಗಿರುವುದಕ್ಕೆ ಇದೇ ಸಾಕ್ಷಿ, ಆತ್ಮ ನಿರ್ಭರ್ ಭಾರತಕ್ಕೆ ಅಭಿನಂದನೆಗಳು ಎಂದು ಟ್ವಿಟರ್ ನಲ್ಲಿ ಮೋದಿ ಸಂತಸ ಹಂಚಿಕೊಂಡಿದ್ದಾರೆ.
ಹೈದರಾಬಾದ್ ವ್ಯಾಕ್ಸಿನ್ ರಾಜಧಾನಿ
ಭಾರತ್ ಬಯೋಟೆಕ್, ಫಿಜರ್ ಜಂಟಿ ಸಹಯೋಗದಲ್ಲಿ ಹೈದ್ರಾಬಾದ್‍ನಲ್ಲಿ ತಯಾರಾದ ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ ನೀಡಿರುವುದಕ್ಕೆ ತೆಲ್ಲಂಗಾಣ ಸರ್ಕಾರ ಸಂತಸ ವ್ಯಕ್ತಪಡಿಸಿದೆ. ಭಾರತ್ ಬಯೋಟೆಕ್‍ನ ಡಾ.ಕೃಷ್ಣ ಎಲ್ಲಾ ನೇತೃತ್ವದ ಎಲ್ಲಾ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ತೆಲ್ಲಂಗಾಣದ ನಗರಾಭಿವೃದ್ಧಿ ಸಚಿವ ಕೆ.ಟಿ ರಾಮರಾವ್ ಟ್ವಿಟರ್‍ನಲ್ಲಿ ಹೇಳಿಕೊಂಡಿದ್ದಾರೆ.
ಈ ಮೂಲಕ ಹೈದರಾಬಾದ್ ಜಾಗತಿಕ ಮಟ್ಟದಲ್ಲಿ ವ್ಯಾಕ್ಸಿನ್ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel