ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ : ಕಾಂಗ್ರೆಸ್ ಪ್ರಶ್ನೆ
ನವದೆಹಲಿ : ನಮ್ಮೆಲ್ಲರ ನಿದ್ದೆಗೆಡಿಸಿರುವ ಹೆಮ್ಮಾರಿಯನ್ನು ದೇಶದಿಂದ ಓಡಿಸಲು ವಿಜ್ಞಾನಿಗಳು ನಡೆಸಿದ ಸಂಶೋಧನೆಗೆ ಫಲಸಿಕ್ಕಿದೆ.
ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಶೇ.110ರಷ್ಟು ಸೇಫ್ ಆಗಿರುವ ಹಿನ್ನೆಲೆಯಲ್ಲಿ ಕೊರೊನಾ ವಿರುದ್ಧ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಮಹಾನಿದೇಶನಾಲಯ ಅಧಿಕೃತ ಅನುಮೋದನೆ ನೀಡಿದೆ.
ಆದ್ರೆ ಈ ವ್ಯಾಕ್ಸಿನ್ ಗೆ ಅನುಮತಿ ನೀಡಿರುವ ಬಗ್ಗೆ ಮಾಜಿ ಕೇಂದ್ರ ಸಚಿವರಾದ ಶಶಿತರೂರ್ ಮತ್ತು ಜಯರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಶಿತರೂರ್, ಕೋವ್ಯಾಕ್ಸಿನ್ ಲಸಿಕೆ ಸದ್ಯ ಮೂರನೇ ಹಂತದ ಪ್ರಯೋಗದಲ್ಲಿದೆ. ಮೂರನೇ ಹಂತದ ಟ್ರಯಲ್ ಇನ್ನೂ ಅಂತಿಮಗೊಂಡಿಲ್ಲ. ಪ್ರಯೋಗಕ್ಕೂ ಮುನ್ನ ಲಸಿಕೆ ಬಳಕೆ ಅಪಾಯಕಾರಿ ಆಗಬಹುದು.
ಈ ಬಗ್ಗೆ ಹರ್ಷವರ್ಧನ್ ಸ್ಪಷ್ಟನೆ ನೀಡಬೇಕು. ಮೂರನೇ ಹಂತದ ಪ್ರಯೋಗ ಮುಗಿಯುವವರೆಗೂ ಲಸಿಕೆ ಬಳಕೆಗೆ ತಡೆ ನೀಡಬೇಕು ಭಾರತ ಆಸ್ಟ್ರೆಜೆನಿಕಾದ ಕೊವಿಶಿಲ್ಡ್ ನೀಡುವ ಮೂಲಕ ಲಸಿಕಾ ಕಾರ್ಯಕ್ರಮವನ್ನು ಆರಂಭಿಸಬಹುದು ಎಂದು ಬರೆದುಕೊಂಡಿದ್ದಾರೆ.
ಜಯರಾಮ್ ರಮೇಶ್ ಟ್ವೀಟ್ ಮಾಡಿ, ಭಾರತ್ ಬಯೋಟೆಕ್ ಫಸ್ಟ್ ಗ್ರೇಡ್ ಕಂಪನಿಯಾಗಿದೆ. ಹೀಗಿದ್ದರೂ ಪ್ರಯೋಗ ಹಂತದಲ್ಲಿರುವಾಗಲೇ ಕೋವ್ಯಾಕ್ಸಿನ್ ಗೆ ಅನುಮತಿ ನೀಡಿರುವುದು ಆಶ್ಚರ್ಯವನ್ನುಟು ಮಾಡಿದೆ.
ಮೂರನೇ ಹಂತದ ಟ್ರಯಲ್ ಬಳಿಕ ಅನುಮತಿ ನೀಡುವುದು ಒಳಿತು ಎಂದು ಅಭಿಪ್ರಾಟ್ಟಿದ್ದಾರೆ.
ಗಾಜಿಯಾಬಾದ್ : ಗೋಡೆ ಕುಸಿದು ಐದು ಮಂದಿ ಸಾವು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










