ADVERTISEMENT
Tuesday, October 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬಿಜೆಪಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ..!

Kariyappa N by Kariyappa N
January 3, 2021
in Newsbeat, Politics, Samagra karnataka, ರಾಜ್ಯ
bjp
Share on FacebookShare on TwitterShare on WhatsappShare on Telegram

ಬೆಂಗಳೂರು: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮೂರನೇ ಎರಡರಷ್ಟು ಶಾಸಕರ ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೇರಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯ ವಿಶೇಷ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷವನ್ನು ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪರಿಶ್ರಮ ಮತ್ತು ಪ್ರವಾಸ ಅತ್ಯಗತ್ಯ. ತಿಂಗಳಲ್ಲಿ ಏಳು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ಮತ್ತು ಪಕ್ಷಕ್ಕಾಗಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಸೂಚನೆ ಮಾಡಿದರು.
ದೇಶದ ಅಭಿವೃದ್ಧಿಗಾಗಿ ಒಂದು ದೇಶ ಒಂದು ತೆರಿಗೆ ಇರಬೇಕು. ಹಾಗೆಯೇ ಒಂದು ದೇಶ ಒಂದೇ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಇದು ಸಕಾಲ ಎಂದು ಅರುಣ್‍ಸಿಂಗ್ ಅಭಿಪ್ರಾಯಪಟ್ಟರು. ಈಗ ಹೆಚ್ಚಿನ ಸಮಯವನ್ನು ನಾವು ಚುನಾವಣೆಗೆ ಮೀಸಲಾಗಿ ಇಡಬೇಕಾಗುತ್ತಿದೆ. ಚುನಾವಣಾ ಕಾರ್ಯದಿಂದ ಶಿಕ್ಷಕರು, ಪೊಲೀಸ್ ವ್ಯವಸ್ಥೆ ತೊಂದರೆಗೆ ಸಿಲುಕುತ್ತದೆ. ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತದೆ ಎಂದು ಅವರು ವಿವರಿಸಿದರು.

ಬಿಎಸ್‍ವೈ ಆಡಳಿತಕ್ಕೆ ಅರುಣ್‍ಸಿಂಗ್ ಫುಲ್ ಮಾರ್ಕ್ಸ್
ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರಕಾರದ ಬಗ್ಗೆ ಪಕ್ಷದವರು ಹೊರಗಡೆ ಮಾತನಾಡಬಾರದು ಎಂದು ಸೂಚಿಸಿದ ಅರುಣ್ ಸಿಂಗ್, ಚಪ್ಪಾಳೆ ತಟ್ಟಿ ಯಡಿಯೂರಪ್ಪ ಅವರನ್ನು ಅಭಿನಂದಿಸಲು ಮನವಿ ಮಾಡಿದರು. ಗೋಹತ್ಯಾ ನಿಷೇಧ ಕಾಯ್ದೆಗಾಗಿ ಸರಕಾರವನ್ನು ಅಭಿನಂದಿಸಿದರು.

Related posts

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

October 6, 2026
ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

October 6, 2026


ಬಿಜೆಪಿಗೆ ಭದ್ರ ನೆಲೆ ಒದಗಿಸಿದ ಜಿಲ್ಲೆ ಶಿವಮೊಗ್ಗ. ಕರ್ನಾಟಕದ ಪ್ರತಿ ಕ್ಷೇತ್ರದಲ್ಲೂ ಬಿಜೆಪಿಯ ಕಮಲ ಅರಳಿಸುವ ಪ್ರಯತ್ನ ನಮ್ಮದಾಗಲಿ. ಈ ಸಭೆಗೆ ಕೋವಿಡ್ ನಡುವೆಯೂ ಶೇ 90ರಷ್ಟು ಸದಸ್ಯರು ಬಂದಿರುವುದು ಮಹತ್ವದ ವಿಚಾರ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ನಂತರ ಈ ಸಭೆ ನಡೆಯುತ್ತಿದೆ. ಇದು ಪಕ್ಷಕ್ಕೆ ಸಂತಸ ನೀಡಿದೆ ಎಂದರು.
ದೇಶದ ಬಹುತೇಕ ರೈತರು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪ್ರಯತ್ನದಿಂದ ಕೆಲವೇ ಕೆಲವು ರೈತರು ದೆಹಲಿಯ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಡಿ ರೈತರ ಉತ್ಪನ್ನ ಖರೀದಿಯ ಪ್ರಮಾಣ ಮತ್ತು ಬೆಂಬಲ ಬೆಲೆಯೂ ಹೆಚ್ಚುತ್ತಲೇ ಸಾಗಿದೆ. 14 ವರ್ಷ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರ ನೇತೃತ್ವದಲ್ಲಿ ಕೃಷಿ ಉತ್ಪಾದನಾ ಪ್ರಮಾಣ ತೀವ್ರವಾಗಿ ಹೆಚ್ಚಿತ್ತು. ರಾಹುಲ್ ಬಾಬಾ ಅವರಿಗೆ ಕೃಷಿಯ ಬಗ್ಗೆ ಏನೇನೂ ತಿಳಿದಿಲ್ಲ ಎಂದು ಟೀಕಿಸಿದರು.
ಸಮರ್ಪಕ ಪೂರ್ವ ತಯಾರಿ ಮೂಲಕ ಮೋದಿ ಅವರು ಕಾರ್ಯ ನಿರ್ವಹಿಸುತ್ತಾರೆ. ಎಲ್ಲರಿಗೂ ನೀರು, ವಿದ್ಯುತ್, ಮನೆ ಒದಗಿಸಿ ದೇಶವನ್ನು ಸಮಗ್ರವಾಗಿ ಅಭಿವೃದ್ಧಿಯತ್ತ ನಡೆಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಕೇವಲ ವಿರೋಧಕ್ಕಾಗಿ ವಿರೋಧ ಮಾಡುತ್ತಾರೆ. ಜಿಎಸ್‍ಟಿ, ತ್ರಿವಳಿ ತಲಾಕ್, ರಾಮ ಮಂದಿರ ಸೇರಿ ಎಲ್ಲೆಡೆ ವಿರೋಧsವನ್ನೇ ಅವರು ಪ್ರವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅರುಣ್‍ಸಿಂಗ್ ಟೀಕಿಸಿದರು.
ರೈತ ಸುಧಾರಣಾ ಮಸೂದೆಗಳ ಜಾರಿ ಬಗ್ಗೆ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿತ್ತು. ಕಾಂಗ್ರೆಸ್ ಹೇಳಿದ್ದನ್ನು ಮಾಡುವುದಿಲ್ಲ. ಆದರೆ, ಬಿಜೆಪಿ ಆಶ್ವಾಸನೆ ನೀಡದೆ ಉತ್ತಮ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆ. ಇದರಿಂದಾಗಿ ಕಾಂಗ್ರೆಸ್ ವಿನಾಶದತ್ತ ನಡೆದಿದೆ. ಡಿಸೆಂಬರ್ 31ರಂದು ಹೊಸ ವರ್ಷಾಚರಣೆಗೆ ಇಟಲಿಗೆ ರಾಹುಲ್ ಗಾಂಧಿ ತೆರಳಿದ್ದೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಲ್ಲಿ ಉತ್ತಮ ನಾಯಕತ್ವದ ಗುಣ ಇಲ್ಲ. ಜೆಡಿಎಸ್ ಕೂಡ ರಾಜ್ಯದಲ್ಲಿ ವಿನಾಶದತ್ತ ನಡೆಯುತ್ತಿದೆ ಎಂದು ಅರುಣ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: arun singhB S YADIYURAPPABJP back powerBJP general secretarykarnataka
ShareTweetSendShare
Join us on:

Related Posts

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

ಬಿಜೆಪಿ ಪತನದ ಕಾಲ ಹತ್ತಿರ ಬಂದಿದೆ: ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಒಗ್ಗಟ್ಟಾದ ಇಂಡಿಯಾ ಮೈತ್ರಿಕೂಟ

by Shwetha
October 6, 2026
0

ನವದೆಹಲಿ: ದೇಶದ ರಾಜಕಾರಣದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ ಮತ್ತು ಬಿಜೆಪಿಯ ಅಧಿಪತ್ಯ ಕುಸಿಯುವ ಕಾಲ ಹತ್ತಿರ ಬಂದಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಅವರು ಗುಡುಗಿದ್ದಾರೆ....

ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

ಅ.15ರಿಂದ ₹2,000ಕ್ಕಿಂತ ಹೆಚ್ಚಿನ UPI ವ್ಯಾಪಾರಿ ಪಾವತಿಗೆ 0.4% MDR: ಗ್ರಾಹಕರಿಗೆ ನೇರ ಶುಲ್ಕವಿಲ್ಲ

by Shwetha
October 6, 2026
0

ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್‌ (UPI) ಮೂಲಕ ನಡೆಯುವ ವ್ಯಕ್ತಿಯಿಂದ ವ್ಯಾಪಾರಿಗೆ (P2M) ವಹಿವಾಟುಗಳಿಗೆ ಅಕ್ಟೋಬರ್ 15, 2026ರಿಂದ ಹೊಸ ಮರ್ಚೆಂಟ್ ಡಿಸ್ಕೌಂಟ್ ರೇಟ್‌ (MDR) ಜಾರಿಗೆ ಬರಲಿದೆ....

ಪ್ರದೀಪ್ ಈಶ್ವರ್ ವಿಚಾರ ಮಾತಾಡೋ ಮೊದಲು ವಿಜಯೇಂದ್ರ ಯತ್ನಾಳ್ ಕಾಳಗ ನೋಡಿ: ಕೈ ಪಾಳಯದ ಒಳಜಗಳಕ್ಕಿಂತ ಕಮಲ ಪಡೆಯ ಬಣ ರಾಜಕೀಯವೇ ದೊಡ್ಡದು ಎಂದ ಬಿ ಕೆ ಹರಿಪ್ರಸಾದ್

ಪ್ರದೀಪ್ ಈಶ್ವರ್ ವಿಚಾರ ಮಾತಾಡೋ ಮೊದಲು ವಿಜಯೇಂದ್ರ ಯತ್ನಾಳ್ ಕಾಳಗ ನೋಡಿ: ಕೈ ಪಾಳಯದ ಒಳಜಗಳಕ್ಕಿಂತ ಕಮಲ ಪಡೆಯ ಬಣ ರಾಜಕೀಯವೇ ದೊಡ್ಡದು ಎಂದ ಬಿ ಕೆ ಹರಿಪ್ರಸಾದ್

by Shwetha
October 6, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮಾಜಿ ಸಚಿವ ಎಂ ಸಿ ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ನಡುವಿನ ವಾಕ್ಸಮರ ತಾರಕಕ್ಕೇರಿರುವ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಬಿ...

ನೈಸ್‌ ಸಂಸ್ಥೆಗೆ ಸುಪ್ರೀಂನಲ್ಲಿ ಹಿನ್ನಡೆ: ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆ ಇಲ್ಲ

ನೈಸ್‌ ಸಂಸ್ಥೆಗೆ ಸುಪ್ರೀಂನಲ್ಲಿ ಹಿನ್ನಡೆ: ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆ ಇಲ್ಲ

by Shwetha
October 6, 2026
0

Lಬೆಂಗಳೂರು–ಮೈಸೂರು ಮೂಲಸೌಕರ್ಯ ಕಾರಿಡಾರ್‌ (BMIC) ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ನೈಸ್‌ (NICE) ಸಂಸ್ಥೆಗೆ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ಹಿನ್ನಡೆಯಾಗಿದೆ. ಕರ್ನಾಟಕ ಹೈಕೋರ್ಟ್‌ ನೀಡಿರುವ ಮಹತ್ವದ ಆದೇಶಕ್ಕೆ ತಕ್ಷಣದ ಮಧ್ಯಂತರ...

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

ಅಧಿಕಾರ ಇರಲಿ ಬಿಡಲಿ ಜನರ ಸೇವೆ ಮಾಡ್ತೀನಿ:2028ರ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ ಇರುತ್ತಾ ಅಥವಾ ಇಲ್ವಾ? ಅಭಿಮಾನಿಗಳ ಒತ್ತಾಯಕ್ಕೆ ಸೈಲೆಂಟ್ ಆದ ಹಿರಿಯ ನಾಯಕ

by Shwetha
October 6, 2026
0

ಮೈಸೂರು: ತಮ್ಮ ರಾಜಕೀಯ ಜೀವನದ ಏರಿಳಿತಗಳಿಗೆ ಸಾಕ್ಷಿಯಾದ ವರುಣ ಕ್ಷೇತ್ರದ ದಾಸನೂರು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತ್ಯಂತ ಭಾವುಕರಾಗಿ ಮಾತನಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram