ಶಿವಮೊಗ್ಗ: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವುದು ಬಿಜೆಪಿಗೆ ಮತಟ್ಟೆಯಲ್ಲಿ ಭದ್ರ ನೆಲೆಯನ್ನು ಒದಗಿಸಿ ಕೊಟ್ಟಿದೆ. ಆದರೆ, ಇಷ್ಟಕ್ಕೆ ನಿಲ್ಲದೆ ಇಂದು ಮತ್ತು ಹಿಂದಿನ ಸಭೆಗಳಲ್ಲಿ ಕೊಟ್ಟ ಟಾಸ್ಕ್ ಪೂರ್ಣಗೊಳಿಸಲು ಮುಖಂಡರು ಮತ್ತು ಕಾರ್ಯಕರ್ತರು ಸಂಘಟನಾ ಪ್ರವಾಸ ಮಾಡಬೇಕು. ಬಾಕಿ ಇರುವ ಅಭ್ಯಾಸವರ್ಗಗಳನ್ನು ಮುಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಟಾಸ್ಕ್ ನೀಡಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ವಿಶೇಷ ಸಭೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಟೀಲ್, ಗ್ರಾಮ ಪಂಚಾಯತ್‍ಗಳಲ್ಲಿ ಯಶ ಸಾಧಿಸಿದ ಮಾದರಿಯಲ್ಲೇ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಯಶಸ್ಸಿಗೆ ಶ್ರಮಿಸಲು “ಜನಸೇವಕ್ ಸಮಾವೇಶ” ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
“ಜನಸೇವಕ್ ಸಮಾವೇಶ”ಕ್ಕೆ ತಂಡ ರಚನೆ”
ಶಿವಮೊಗ್ಗ ಬಿ.ಎಸ್ ಯಡಿಯೂರಪ್ಪ ಅವರಂಥ ಉತ್ತಮ ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ. ಪಕ್ಷದ ಅಡಿಪಾಯ ಗಟ್ಟಿಗೊಳಿಸಲು ನೆರವಾದ ಹಿರಿಯರನ್ನು ಇಂದಿನ ಸಭೆಯಲ್ಲಿ ಸ್ಮರಿಸಲಾಗಿದೆ. ರಾಮ ಮತ್ತು ರೈತನ ಸಂದೇಶವನ್ನು ಈ ಸಭೆಯು ನೀಡಿದೆ. ಈ ಸಮಾವೇಶಗಳ ನೇತೃತ್ವಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ. ಮೊದಲನೇ ತಂಡವು ನನ್ನ ನೇತೃತ್ವದಲ್ಲಿರುತ್ತದೆ. ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಡಾ. ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಜಗದೀಶ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಸೇರಿದಂತೆ ಮುಖಂಡರು, ಆಹ್ವಾನಿತರು ಭಾಗವಹಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








