ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕು ಕೇರಳದ ಗಡಿ ಭಾಗದಲ್ಲಿ ದಿಬ್ಬಣ ಬಸ್ ಹಾಗೂ ಕಾಫಿ ಕಾರ್ಮಿಕರು ತೆರಳುತ್ತಿದ್ದ ಜೀಪ್ ಸೇತುವೆ ಕೆಳಗೆ ಪಲ್ಟಿಯಾಗಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ.
ಮಡಿಕೇರಿ ತಾಲೂಕು ಕರಿಕೆ ಗ್ರಾಮಕ್ಕೆ ದಕ್ಷಿಣಕನ್ನಡದ ಪುತ್ತೂರಿನಿಂದ ಬರುತ್ತಿದ್ದ ದಿಬ್ಬಣದ ಬಸ್ ನಿನ್ನೆ ಪಲ್ಟಿಯಾಗಿತ್ತು. ಪಣತ್ತೂರಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಮನೆಯೊಂದಕ್ಕೆ ನುಗ್ಗಿದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಗೊಂಡವರು ಪಣತ್ತೂರಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರಿಕೆ ಗ್ರಾಮಪಂಚಾಯ್ತಿಯ ಸಿಬ್ಬಂದಿಯಾಗಿರುವ ಪ್ರಶಾಂತ್ ಎಂಬಾತನ ಜತೆ ಪುತ್ತೂರಿನ ಅರುಣ ಎಂಬುವವರ ವಿವಾಹ ನಡೆದಿತ್ತು. ವಧುವಿನ ಕಡೆಯ 62 ಮಂದಿ ಮದುವೆ ಮುಹೂರ್ತದ ಕಾರ್ಯಕ್ರಮಕ್ಕೆ ಖಾಸಗಿ ಬಸ್ಸು ಪುತ್ತೂರು, ಸುಳ್ಯ, ಕಲ್ಲಪಳ್ಳಿ ಮಾರ್ಗದಿಂದ ಕೇರಳದ ಕಾಸರಗೋಡಿಗೆ ಸೇರಿದ ಪಾಣತ್ತೂರು ಪರಿಯಾರ ಎನ್ನುವ ಇಳಿಜಾರಿನ ಪ್ರದೇಶದಲ್ಲಿ ಚಾಲಕನ ನಿಯಂತ್ರ ತಪ್ಪಿ ಸರ್ಕಾರಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ಮನೆಯೊಂದರ ಮೇಲೆ ಉರುಳಿ ಬಿದ್ದಿತ್ತು.

ಅಪಘಾತದಲ್ಲಿ ಪುತ್ತೂರಿನ ರಾಜೇಶ್(45), ರವಿಚಂದ್ರ(49), ಶಶಿಧರ ಪೂಜಾರಿ(43), ಸುಮತಿ(50), ಈಶ್ವರಿ(39), ಆದರ್ಶ್(14), ಶ್ರೇಯಸ್(13) ಮೃತಪಟ್ಟಿದ್ದಾರೆ.
ಕಾರ್ಮಿಕರಿದ್ದ ಜೀಪ್ ಸೇತುವೆ ಮೇಲಿಂದ ಪಲ್ಟಿ
ಮತ್ತೊಂದು ಅಪಘಾತದಲ್ಲಿ ಕಾಫಿ ಕುಯಿಲು ಕೆಲಸ ಮುಗಿಸಿ ವಾಪಾಸಾಗುತ್ತಿದ್ದ 13 ಕಾರ್ಮಿಕರಿದ್ದ ಜೀಪು ಸೇತುವೆ ಕೆಳಗೆ ಬಿದ್ದು ಓರ್ವರು ಮೃತಪಟ್ಟಿದ್ದಾರೆ. ಚೇರಂಬಾಣೆಯಿಂದ ಎಡಪಾಲಕ್ಕೆ ಆಗಮಿಸುತ್ತಿದ್ದ ಜೀಪು, ಕಡಂಗ ಸೇತುವೆ ಕೆಳಗೆ ಬಿದ್ದು ಹೊಳಮಾಳ ಗ್ರಾಮದ ಮಹೇಶ್ವರಿ 35 ಮೃತಪಟ್ಟಿದ್ದು, ಚಾಲಕ ಸುರೇಶ್ ಸೇರಿದಂತೆ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








