30ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ಕೊರೊನಾ ವೈರಸ್ : ಜಾಗ್ರತೆ ಎಂದ ವೈದ್ಯಲೋಕ
ನವದೆಹಲಿ : 2020 ರ ಅಂತ್ಯದ ವೇಳೆಗೆ ಯುಕೆಯಲ್ಲಿ ಕಾಣಿಸಿಕೊಂಡ ಕೊರೊನಾ ರೂಪಾಂತರಿ ವೈರಸ್ ವೇಗವಾಗಿ ವಿಶ್ವದಾದ್ಯಂತ ತನ್ನ ಕಬಂದಬಾಹುಗಳನ್ನು ವಿಸ್ತರಿಸುತ್ತಿದೆ.
ಇತ್ತೀಚೆಗೆ ವಿಯೆಟ್ನಾಂನಲ್ಲಿ ಈ ತಳಿ ಪತ್ತೆಯಾಗಿದೆ. ಹೀಗಾಗಿ ತಕ್ಷಣಕ್ಕೆ ಜಾರಿ ಬರುವಂತೆ ಆ ದೇಶವು ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ವಿಧಿಸಿದೆ.
ಇಲ್ಲಿಯವರೆಗೆ, ಹೊಸ ವೈರಸ್ 30 ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಠಿಸಿದೆ.
ಈ ವೈರಸ್ ವೇಗವಾಗಿ ಹರಡುವುದರಿಂದ ಹೆಚ್ಚಿನ ಜಾಗರೂಕತೆ ಅಗತ್ಯ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ವೈರಸ್ ಕಾರಣದಿಂದಾಗಿ ಯುಕೆಯಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಇದನ್ನು ತಡೆಯೋ ನಿಟ್ಟಿನಲ್ಲಿ ಕಠಿಣ ನಿಬರ್ಂಧಗಳನ್ನು ವಿಧಿಸಲಾಗಿದೆ.
ಗ್ಯಾಸ್ ಸಿಲಿಂಡರ್ ವಿತರಣೆಗೆ ಗ್ರಾಹಕರು ವಿತರಣಾ ಶುಲ್ಕ ಪಾವತಿಸಬೇಕಾಗಿಲ್ಲ – ಎಚ್‌ಪಿಸಿಎಲ್
ಅಮೆರಿಕಾದಲ್ಲಿ ಸುಮಾರು 3 ರಾಜ್ಯಗಳಲ್ಲಿ ಈ ವೈರಸ್ ಕಂಡುಬಂದಿದೆ. ಇದು ಇನ್ನಷ್ಟು ರಾಜ್ಯಗಳಿಗೆ ವಿಸ್ತರಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಈ ರೂಪಾಂತರಿ ವೈರಸ್ ವೇಗವಾಗಿ ಹರಡುತ್ತದೆ ಆದರೆ ಹಿಂದಿನ ವೈರಸ್‍ಗಿಂತ ಹೆಚ್ಚು ಮಾರಕವಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಅಲ್ಲದೆ, ಪ್ರಸ್ತುತ ಲಭ್ಯವಿರುವ ಮತ್ತು ಶೀಘ್ರದಲ್ಲೇ ಮಾರುಕಟ್ಟೆಗೆ ಬರುವ ಲಸಿಕೆಗಳು ಈ ವೈರಸ್ ವಿರುದ್ಧವೂ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









