ಪ್ರಜ್ವಲ್ ಜೊತೆ ಸೇರಿ ಯುವ ಪಡೆ ಕಟ್ಟಲು ಮುಂದಾದ ನಿಖಿಲ್
ಬೆಂಗಳೂರು : ಮಂಡ್ಯದಲ್ಲಿ ಜೆಡಿಎಸ್ ಸೋಲು, ಮೈತ್ರಿ ಸರ್ಕಾರ ಪತನ, ಶಿರಾದಲ್ಲಿ ಪರಾಜಯ, ನಾಯಕರ ಪಕ್ಷಾಂತರ ಈ ಎಲ್ಲವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜೆಡಿಎಸ್ ಪಕ್ಷ ಸಂಘಟನೆಯತ್ತ ಮುಖ ಮಾಡಿದೆ.
ಅದರಲ್ಲೂ ಯುವಕರನ್ನು ಹೆಚ್ಚಾಗಿ ಪಕ್ಷದತ್ತ ಸೆಳೆಯಲು ಜೆಡಿಎಸ್ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ತಂತ್ರಗಳನ್ನು ರೂಪಿಸುತ್ತಿದ್ದಾರೆ.
ಅದರಂತೆಯೇ ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಯುವ ಘಟನಗಳ ಸಂಘಟನಾ ಸಭೆ ನಡೆಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಬರುತ್ತಿದೆ.
ಶೀಘ್ರದಲ್ಲೇ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ : ರಮೇಶ್ ಜಾರಕಿಹೊಳಿ
2023ರ ಸಾರ್ವತ್ರಿಕ ಚುನಾವಣೆಗೆ ನಾವು ಸಿದ್ದತೆ ಮಾಡಿಕೊಳ್ಳಬೇಕಿದೆ. ಸಂಸದ ಪ್ರಜ್ವಲ್ ರೇವಣ್ಣ ಹಾಗೂ ನಾನು ಸೇರಿದಂತೆ ಒಂದು ಯುವ ಪಡೆ ಕಟ್ಟಬೇಕಿದೆ. ನಮ್ಮ ಕೈಯಲ್ಲಿ ಆದಂತಹ ಪ್ರಯತ್ನ ನಾವು ಮಾಡುತ್ತೇವೆ ಎಂದರು.
ರಾಜ್ಯದ 30 ಜಿಲ್ಲೆಗಳಿಂದ ಜೆಡಿಎಸ್ ಯುವ ನಾಯಕರ ಜೊತೆ ಸಭೆ ಮಾಡುತ್ತಿದ್ದೇವೆ. ಸಾಕಷ್ಟು ವಿಚಾರಗಳು ಮುಕ್ತವಾಗಿ ಚರ್ಚೆ ಮಾಡಬೇಕಿದೆ. ಈಗಷ್ಟೇ ಗ್ರಾಮ ಪಂಚಾಯತಿ ಚುನಾವಣೆ ಮುಗಿದಿದೆ.
ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತೇವೆ. ಜೆಡಿಎಸ್ ಪಕ್ಷವನ್ನ ನಂಬಿಕೊಂಡಿರುವವರು ಇದ್ದಾರೆ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









