crime
ಗಂಡನ ‘ನೈಟ್ ಶಿಫ್ಟ್’ ರಹಸ್ಯ ಬಯಲು: ಪತಿಯ ಅಸಲಿಯತ್ತು ಗೊತ್ತಾಗ್ತಿದ್ದಂತೆ ಪತ್ನಿ ಮಾಡಿದ್ದೇನು ಗೊತ್ತಾ..!
ಬೆಂಗಳೂರು : ಪ್ರೀತಿಸಿ ಮದುವೆಯಾಗಿದ್ದವನ ಬಂಡವಾಳ 3 ತಿಂಗಳ ನಂತರ ಪತ್ನಿ ಮುಂದೆ ಬಯಲಾಗಿದೆ. ಪತಿಯ ಅಸಲಿ ಮುಖವಾಡ ಕಳಚುತ್ತಿದ್ದಂತೆ ಪತ್ನಿ ಏನ್ ಮಾಡಿದ್ದಾಳೆ ನೋಡಿ…
ನೈಟ್ ಶಿಫ್ಟ್ ಅಂತ ತೆರಳುತ್ತಿದ್ದ ಗಂಡ ಮತ್ತೊಬ್ಬಳ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗಲೇ ಹೆಂಡತಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪತಿಯ ರಾಸಲೀಲೆ ನೋಡಿ ಮಾನಸಿಕವಾಗಿ ಕುಸಿದುಹೋಗಿದ್ದ ಪತ್ನಿ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬ್ರಿಟನ್ ನಲ್ಲಿ ಮತ್ತೆ ಸಂಪೂರ್ಣ ಲಾಕ್ಡೌನ್ ಘೋಷಣೆ..!
ಬೆಂಗಳೂರಿನ ಶ್ರೀರಾಂಪುರದ ಅಭಿಲಾಷ ಹಾಗೂ ಶಶಿಕುಮಾರ್ ಎಂಬುವವರು ಪ್ರೀತಿಸಿ ಮದುವೆಯಾಗಿದ್ದರು. 3 ತಿಂಗಳು ಸಂಸಾರ ನಡೆಸುತ್ತಿದ್ರು. ಆದ್ರೆ ಕೆಲ ದಿನಗಳಿಂದ ಪತಿಯ ನೆಡವಳಿಕೆ ಪತ್ನಿಗೆ ಅನುಮಾನ ತರಿಸಿತ್ತು. ಪ್ರತಿ ದಿನ ನೈಟ್ ಶಿಫ್ಟ್ ಕೆಲಸ ಅಂತ 8 ಗಂಟೆಗೆ ಬಿಡ್ತಾ ಇದ್ದ ಪತಿ ಶಶಿಕುಮಾರ್ ಮತ್ತೊಬ್ಬಳ ಮನೆಗೆ ತೆರಳುತ್ತಿದ್ದ. ಒಂದು ದಿನ ಅತನನ್ನು ಹಿಂಬಾಲಿಸಿ ತೆರಳಿದ್ದ ಪತ್ನಿಗೆ ಬಿಗ್ ಶಾಕ್ ಆಗಿತ್ತು.
ಗಂಡ ಶಶಿಕುಮಾರ್ ಬೈಕ್ ಅಪರಿಚಿತರ ಮನೆಯ ಮುಂದೆ ನಿಂತಿದ್ದನ್ನು ಕಂಡು, ಮನೆಯ ಒಳಗೆ ತೆರಳಿದಾಗ ಪತಿ ಮತ್ತೊಬ್ಬಳ ಜೊತೆಗೆ ಸರಸಸಲ್ಲಾಪದಲ್ಲಿ ತೊಡಗಿದ್ದ ಆತನ ನಿಜಾವತಾರ ಬಯಲಾಗಿದೆ. ಇನ್ನೂ ಅಲ್ಲಿಯೇ ಗಂಡನನ್ನು ತರಾಟೆಗೆ ತೆಗೆದುಕೊಂಡ ಪತ್ನಿ ಅಭಿಲಾಷಗೆ ಪತಿ ಶಶಿಕುಮಾರ್ ಹೊಡೆದು ಬಾಯಿ ಮುಚ್ಚಿಸಿದ್ದಾನೆ.
ಬಳಿಕ ಮನೆಗೆ ವಾಪಾಸ್ ಆದ ಅಭಿಲಾಷ, ತನ್ನ ತಂಗಿಗೆ ನಡೆದ ವಿಚಾರವನ್ನೆಲ್ಲಾ ಪೋನ್ ಮಾಡಿ ತಿಳಿಸಿದ್ದಾಳೆ. ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಶಶಿಕುಮಾರ್ ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
crime
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








