ಅನೈತಿಕ ಸಂಬಂಧಕ್ಕೆ ಅಡ್ಡಿ: ಮಕ್ಕಳಿಗೆ ವಿಷ ಉಣಿಸಿದ ಪಾಪಿ ತಾಯಿ!
ಶಿವಮೊಗ್ಗ: ಅನೈತಿಕ ಸಂಬಂಧ ಮನುಷ್ಯರ ಕೈಲಿ ಏನೆಲ್ಲಾ ಮಾಡಿಸಿಬಿಡುತ್ತೆ ಎನ್ನುವುದಕ್ಕೆ ಶಿವಮೊಗ್ಗದಲ್ಲಿ ನಡೆದಿರೋ ಈ ಘಟನೆ ಸಾಕ್ಷಿ. ತನ್ನ ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿಯಾಗುತ್ತಾರೆ ಎಂಬ ಕಾರಣಕ್ಕೆ ಹೆತ್ತ ತಾಯಿಯೊಬ್ಬಳು ಹೇಯ ಕೃತ್ಯವೆಸಗಿದ್ದಾಳೆ. ಹೆತ್ತ ಮಕ್ಕಳಿಗೆ ವಿಷಯುಕ್ತ ಮಾತ್ರೆ ನೀಡಿ ಕೊಲೆ ಮಾಡಿದ್ದಾಳೆ. ನಡೆದಿದೆ.
ಮತ್ತೊಂದು ನಿರ್ಭಯಾ ಕೇಸ್ : ಖಾಸಗಿ ಅಂಗಕ್ಕೆ ರಾಡ್ ತುರುಕಿ ಕೊಲೆ..!
8 ವರ್ಷದ ಅಲೆಕ್ಸ್ ಮತ್ತು 5 ವರ್ಷದ ಹಲಿನಾ ಮೃತ ಮಕ್ಕಳಾಗಿದ್ದರೆ. ಗೀತಾ ಎಂಬಾಕೆ ಇಂತಹ ಹೇಯ ಕೃತ್ಯವೆಸಗಿ ಇದೀಗ ಜೈಲು ಸೇರಿದ್ದಾಳೆ. ಆರೋಪಿ ಗೀತಾ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಸುರಗಿ ತೋಪ್ ಬಡಾವಣೆಯ ನಿವಾಸಿ. ಆಕೆಯ ಪತಿ ಅಂಥೋನಿ 2 ವರ್ಷಗಳ ಹಿಂದಯೇ ಮೃತಪಟ್ಟಿದ್ದ. ಗಂಡ ಮೃತಪಟ್ಟ ನಂತರ, ಅದೇ ಬಡಾವಣೆಯ ಜಾನಿ ಎಂಬಾತನ ಜೊತೆ ಗೀತಾ ಅನೈತಿಕ ಸಂಬಂಧ ಹೊಂದಿದ್ದಳು. ಆದ್ರೆ ಆಕೆಯ ಅಕ್ರಮ ಸಂಬಂಧಕ್ಕೆ ಮಕ್ಕಳು ಅಡ್ಡಿ ಬರುತ್ತಿದ್ದವೆಂಬ ಕಾರಣಕ್ಕೆ ಮಕ್ಕಳನ್ನ ಕೊಲೆ ಮಾಡಿದ್ದಾಳೆ. ಗಾಂಧಿ ಪಾರ್ಕಿನಲ್ಲಿಯೇ ಮಕ್ಕಳಿಗೆ ವಿಷಯುಕ್ತ ಮಾತ್ರೆ ತಿನ್ನಿಸಿದ್ದಾಳೆ. ಬಳಿಕ ಮಕ್ಕಳು ಪ್ರಾಣ ಬಿಟ್ಟಿವೆ. ಅದ್ಯ ಆರೋಪಿ ಗೀತಾಳ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಕೆಯನ್ನ ಬಂಧಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








