ಹೊರಗಡೆ ಪಕೋಡ ತಿನ್ನೋ ಮುನ್ನ ಎಚ್ಚರ… ಎಚ್ಚರ…ಎಚ್ಚರ..!
ಆಂಧ್ರಪ್ರದೇಶ: ಚಳಿಗಾಲದಲ್ಲಿ ಬಿಸಿಬಿಸಿ ಪಕೋಡ, ಬಿಸಿಬಿಸಿ ಕಾಫಿ ಸವಿಯೋಕೆ ಎಲ್ಲರಿಗೂ ತುಂಬಾನೆ ಇಷ್ಟವಿರುತ್ತೆ. ಆದ್ರೆ ಅದೇ ಪಕೋಡದಲ್ಲಿ ಕಪ್ಪೆ ಸಿಕ್ರೆ ಹೇಗಿರುತ್ತೆ…?
ಇಂತಹದ್ದೇ ಒಂದು ಪ್ರಕರಣ ಆಂಧ್ರದ ಚಿತ್ತೂರಿನಲ್ಲಿ ಬೆಳಕಿಗೆ ಬಂದಿದೆ. ರಾಜೀವ್ ಎಂಬಾತ ತಮ್ಮ ಕಾಲನಿಯಲ್ಲಿ ಪಕೋಡಾ ಮತ್ತು ಬಜ್ಜಿ ಮಾರಾಟ ಮಾಡುವ ಅಂಗಡಿಗೆ ತೆರಳಿ, ಪಕೋಡಾ ಪಾರ್ಸೆಲ್ ಮಾಡಸಿಕೊಂಡು ಮನೆಗೆ ತಂದಿದ್ದಾನೆ. ಬಳಿಕ ಕುಟುಂಬದೊಂದಿಗೆ ಪಕೋಡಾ ತಿನ್ನುತ್ತಾ ಕೂತಿರುವಾಗ ಆಘಾತಕ್ಕೆ ಒಳಗಾಗಿದ್ದಾನೆ.
ಅಲಿಬಾಬಾ ಜಾಕ್ ಮಾ ಮಿಸ್ಸಿಂಗ್ ಕೇಸ್ ಗೆ ಬಿಗ್ ಟ್ವಿಸ್ಟ್ : ಕಾಣೆಯಾಗಿಲ್ವಂತೆ..!
ಹೌದು ಯಾಕಂದ್ರೆ ಪಕೋಡದಲ್ಲಿ ಅವರಿಗೆ ಕಪ್ಪೆ ಸಿಕ್ಕಿದೆ. ಇದನ್ನ ಕಂಡ ಕುಟುಂಬ ಒಂದು ಕ್ಷಣ ಶಾಕ್ ಗೆ ಒಳಗಾಗಿದೆ. ಬಳಿಕ ಪಕೋಡ ಹಿಡಿದು ನೇರವಾಗಿ ಅಂಗಡಿಗೆ ಹೋದ ರಾಜೀವ್ ಜಗಳಕ್ಕೆ ಇಳಿದಿದ್ದಾನೆ. ಹೀಗೆ ಮಾಡಿದರೆ ನಿನ್ನ ಅಂಗಡಿಗೆ ಯಾರು ಬರುತ್ತಾರೆ ಅಂತ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾನೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








