viral story
ಅತಿಥಿಗಳು, ಕೇಳಿದ ಗಿಫ್ಟ್ ಕೊಡಲಿಲ್ಲ ಅಂತ ಮದುವೆ ದಿನವೇ ವಧು ಮಾಡಿದ್ದೇನು ನೋಡಿ..!
ಮದುವೆ ದಿನವೇ ಅನೇಕ ವಿವಾಹಗಳು ಮುರಿದು ಬಿದ್ದಿರುವ ಸಂಗತಿಗಳು ಎಷ್ಟೋ ನಡೆದಿವೆ. ಆದ್ರೆ ಅದಕ್ಕೆ ವರದಕ್ಷಿಣೆ ಸೇರಿದಂತೆ ನಾನಾ ಕಾರಣಗಳಿರುತ್ವೆ. ಆದ್ರೆ ಇಲ್ಲೊಬ್ಬ ವಧು ಮದುವೆ ಮುರಿದ ಹಿಂದೆ ಇದ್ದ ಕಾರಣ ಕೇಳುದ್ರೆ ನಿಜಕ್ಕೂ ಶಾಕ್ ಆಗುತ್ತೆ.
ಹೊರಗಡೆ ಪಕೋಡ ತಿನ್ನೋ ಮುನ್ನ ಎಚ್ಚರ… ಎಚ್ಚರ…ಎಚ್ಚರ..!
ಹೌದು ಕೆನಡಾದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಸುಸಾನ್ ಎಂಬಾಕೆ ಕ್ಷುಲ್ಲಕ ಕಾರಣಕ್ಕೆ ಮದುವೆ ಮುರಿದಿದ್ದು, ಈ ವಿಚಾರವನ್ನ ಆಕೆಯ ಸಂಬಂಧಿಕರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಂದ್ಹಾಗೆ ವಧು ತನ್ನ ಸಂಬಂಧಿಕರಿಗೆ ಉಡುಗೊರೆ ರೂಪದಲ್ಲಿ ನಗದು ನೀಡುವಂತೆ ಹೇಳಿದ್ದಳು. ಇದೇ ಹಣದಲ್ಲಿ ಮದುವೆ ಮಾಡಿಕೊಳ್ಳುವ ಪ್ಲಾನ್ ಕೂಡ ಮಾಡಿದ್ದಳು. ಆದ್ರೆ ಸಂಬಂಧಿಕರು ಆಕೆಯ ಪ್ಲಾನ್ ಫೇಲ್ ಮಾಡಿದ್ದಾರೆ. ಹಣದ ಬದಲು ಬೇರೆ ಬೇರೆ ಗಿಫ್ಟ್ ಗಳನ್ನ ನೀಡಿದ್ದಾರೆ. ಹೀಗಾಗಿ ಸಿಟ್ಟಿಗೆದ್ದು ಮದುವೆ ಮುರಿದಿದ್ದಾಳೆ.
ಬೇರೊಬ್ಬಳಿಗೆ ಪತಿಯನ್ನ ಬಿಟ್ಟು ಕೊಟ್ಟ ಪತ್ನಿ: 1.5 ಕೋಟಿ ರೂಪಾಯಿಗೆ ಪತಿಯ ಮಾರಾಟ..!
ಅಂದ್ಹಾಗೆ ಈಕೆ ಬಾಕ್ಯದಲ್ಲಿರುವಾಗ್ಲೇ ( 14 ವರ್ಷ) ಪ್ರೀತಿಸಿದವನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಳು.
20 ವರ್ಷದವಳಾಗಿದ್ದಾಗ ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ ಮದುವೆಯಾಗಲು ಹಣವಿರಲಿಲ್ಲ. ಹೀಗಾಗಿ ತಡವಾಗಿ ವಿವಾಹವಾಗುತ್ತಿದ್ದಳು. ಆದ್ರೆ ಆಕೆಯ ಬಳಿ ಕೇವಲ 15 ಸಾವಿರ ಡಾಲರ್ ಇತ್ತು. ಮದುವೆಗೆ 60 ಸಾವಿರ ಡಾಲರ್ ಅವಶ್ಯಕತೆಯಿತ್ತು. ಇದೇ ಕಾರಣಕ್ಕೆ ಉಡುಗೊರೆ ರೂಪದಲ್ಲಿ ಹಣ ಕೇಳಿದ್ದಳು. ಆದ್ರೆ ಸಂಬಂಧಿಕರು ನೀಡಲಿಲ್ಲ. ಹಾಗಾಗಿ ಮದುವೆ ರದ್ದು ಮಾಡಿ ಎಲ್ರಿಗೂ ಶಾಕ್ ನೀಡಿದ್ದಾಳೆ ಎಂದು ತಿಳಿದುಬಂದಿದೆ.
viral story
Our Website : https://saakshatv.com/
Subscribe Now on YouTube
Like us on Facebook
Follow us on Twitternternation
Follow us on Instagram
Subscribe to our Telegram Channel








