ಕಳ್ಳಿಗೆ ನೆರವಾದ ಪೊಲೀಸ್ : ಕದ್ದ ವಸ್ತುಗಳಿಗೆ ಹಣ ಪಾವತಿ..!
ಇಬ್ಬರು ಹೆಣ್ಣುಮಕ್ಕಳ ತಾಯಿಯೊಬ್ಬರು ಸೂಪರ್ ಮಾರ್ಕೆಟ್ ನಲ್ಲಿ ದಿನಸಿ ವಸ್ತುಗಳ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದರು. ಬಳಿಕ ಈ ಬಗ್ಗೆ ಅಂಗಡಿ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ರು. ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಕದ್ದ ವಸ್ತುಗಳನ್ನ ವಾಪಸ್ ಪಡೆದು ಅಂಗಡಿಗೆ ಒಪ್ಪಿಸುವ ಬದಲಾಗಿ ಕದ್ದ ವಸ್ತುಗಳಿಗೆ ಹಣ ಪಾವತಿಸಿದ್ದಾರೆ.
ವೇಸ್ಟ್ ಅಂತ ಬಿಸಾಡಿದ್ದ ಮೊಬೈಲ್ ಕವರ್ ಗೆ ಸಿಕ್ತು 1.19 ಕೋಟಿ ರೂ…!
ಹೌದು.. ಕ್ರಿಸ್ಮಸ್ ಗೆ ಐದು ದಿನ ಬಾಕಿ ಇದೆ ಎನ್ನುವಾಗ ಮ್ಯಾಸಚೂಸೆಟ್ಸ್ನ ಸೋಮರ್ಸೆಟ್ ಪೊಲೀಸ್ ಇಲಾಖೆಗೆ ಸೂಪರ್ ಮಾರ್ಕೆಟ್ ಒಂದರಲ್ಲಿ ಅಂಗಡಿ ಕಳ್ಳತನವಾಗಿದೆ ಅನ್ನೋದ್ರ ಬಗ್ಗೆ ದೂರವಾಣಿ ಕರೆಯೊಂದು ಬಂದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆಯ ಮ್ಯಾಟ್ ಲಿಮಾ ಸ್ಥಳ ಪರಿಶೀಲನೆಗೆ ತೆರಳಿದ್ರು. ಸೂಪರ್ ಮಾರ್ಕೆಟ್ನ ಸಿಬ್ಬಂದಿ ಮಹಿಳೆ ವಸ್ತುಗಳನ್ನ ಸ್ಕ್ಯಾನ್ ಮಾಡದೇ ನೇರವಾಗಿ ತನ್ನ ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದುದನ್ನ ಕಂಡಿದ್ದೇನೆ ಎಂದು ಹೇಳಿದ್ರು. ಇಬ್ಬರು ಹೆಣ್ಣು ಮಕ್ಕಳನ್ನ ಹೊಂದಿದ್ದ ಮಹಿಳೆಯ ಪರಿಸ್ಥಿತಿ ಕಂಡು ಪೊಲೀಸ್ ಅಧಿಕಾರಿ ಮ್ಯಾಟ್ ಲಿಮಾ ಅವರು ಮರುಗಿದ್ದಾರೆ. ಬಳಿಕ ಆಕೆಯ ಅಸಹಾಯಕತೆಗೆ ಧನಸಹಾಯ
ಮಾಡಿ ಮಾನವೀಯತೆ ಮೆರೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








