ನೋ ಮಾಸ್ಕ್ … ಮಾಸ್ಕ್ ಇಲ್ಲದೇ ಶಾಪಿಂಗ್ ಗೆ ಅವಕಾಶ ಕೊಡುವಂತೆ ಅಮೆರಿಕನ್ನರ ಪ್ರತಿಭಟನೆ : ವಿಡಿಯೋ ವೈರಲ್..!
ಅಮೆರಿಕಾ: ಕೊರೊನಾ ಹಾವಳಿಯಿಂದಾಗಿ ಅತಿ ಹೆಚ್ಚು ನಲುಗಿಹೋಗಿರೋ ರಾಷ್ಟ್ರಗಳ ಪಟ್ಟಿಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾ ಅಗ್ರ ಸ್ಥಾನದಲ್ಲಿದೆ. ಇತ್ತ ಕೊರೊನಾ ಸಂಕಷ್ಟದಿಂದಾಗಿ ಹೈರಾಣಾಗಿರುವ ಅಮೆರಿಕನ್ನರು ತಾಳ್ಮೆ ಕಳೆದುಕೊಂಡಂತೆ ಕಾಣ್ತಿದೆ. ಹೌದು ಮಾಸ್ಕ್ ಹಾಕಿ ಹಾಕಿ ಬೇಸತ್ತು ಹೋಗಿರೋ ಅಮೆರಿಕಾ ಜನ ಇದೀಗ ಮಾಸ್ಕ್ ಧಾರಣೆ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಹೌದು ಲಾಕ್ ಡೌನ್, ಮಾಸ್ಕ್, ಸಾಮಾಜಿಕ ಅಂತರದ ನಿಯಮಗಳನ್ನು ಬೇಕಂತಲೇ ಮುರಿಯಲಾರಂಭಿಸಿದ್ದಾರೆ. ಮಾಸ್ಕ್ ಧರಿಸುವುದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
‘ರೆಡ್ ಡ್ರ್ಯಾಗನ್’ ಗೆ ಮತ್ತೆ ಬಿಸಿ ಮುಟ್ಟಿಸಿದ ‘ವಿಶ್ವದ ದೊಡ್ಡಣ್ಣ’ : ಚೈನಾದ 8 ಆಪ್ ಗಳು ಬ್ಯಾನ್..!
ಲಾಸ್ ಏಂಜಲೀಸ್ ಬೀದಿಗಳಲ್ಲಿ ಮಾಸ್ಕ್ ಹಾಕದ ಸಾಕಷ್ಟು ಜನ ಕಂಡುಬರುತ್ತಿದ್ದಾರೆ. ಜ.3 ರಂದು ನಗರದ ವೆಸ್ಟ್ ಪೀಲ್ಡ್ ಸೆಂಚುರಿ ಮಾಲ್ ನಲ್ಲಿ ದೊಡ್ಡ ಸಂಖ್ಯೆಯ ಜನ ಮಾಸ್ಕ್ ಧರಿಸದೇ ಶಾಪಿಂಗ್ ಮಾಡುವ ಮೂಲಕ ಮಾಸ್ಕ್ ಧಾರಣೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಸಾಪಿಂಗ್ ವೇಳೆ ಅಂಗಡಿಯ ಸಿಬ್ಬಂದಿಗಳ ಜೊತೆಗೂ ಜತೆ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದು ಮಾಸ್ಕ್ ಧರಿಸದೇ ಶಾಪಿಂಗ್ ಮಾಡಲು ಅವಕಾಶ ನೀಡುವಂತೆ ಒತ್ತಾಯ ಮಾಡಿರೋದು ವಿಡಿಯೋದಿಂದ ತಿಳಿದುಬಂದಿದೆ.
https://twitter.com/emilyytayylor/status/1345910725294784512
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








