ಭಾರತದ ಬ್ಯಾಂಕ್ ಗಳ ಒಕ್ಕೂಟಕ್ಕೆ ಬಾಕಿ ಉಳಿಸಿಕೊಂಡಿರುವ ಸಾಲವನ್ನು ವಾಪಸ್ ಕೊಡ್ತೀನಿ. ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವ ಈ ಸಂದರ್ಭದಲ್ಲಿ ಉದ್ಯಮಗಳಿಗೆ ನೆರವಾಗಿ ಎಂದು ವಿಜಯ್ ಮಲ್ಯ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಭಾರತ ಲಾಕ್ ಡೌನ್ ಮಾಡಲಾಗಿದೆ. ನಾವು ಇದನ್ನು ಗೌರವಿಸುತ್ತೇವೆ. ಲಾಕ್ ಡೌನ್ ಕಾರಣಕ್ಕೆ ನನ್ನ ಕಂಪೆನಿಗಳ ಕಾರ್ಯಚಟುವಟಿಕೆ ನಿಂತಿದೆ. ಎಲ್ಲ ಉತ್ಪಾದನೆ ನಿಂತಿದೆ. ಆದರೂ ನಮ್ಮ ಸಿಬ್ಬಂದಿಯನ್ನು ವಾಪಸ್ ಕಳಿಸಿಲ್ಲ ಮತ್ತು ಅದಕ್ಕಾಗಿ ಹಣ ಪಾವತಿಸುತ್ತಿದ್ದೇವೆ. ಸರ್ಕಾರ ನಮಗೆ ಸಹಾಯ ಮಾಡಬೇಕು” ಎಂದಿದ್ದಾರೆ.
“ಬಾಕಿ ಇರುವ ಹಣ ವಾಪಸ್ ಮಾಡುವುದಾಗಿ ಹಲವು ಬಾರಿ ಹೇಳಿದರೂ ತನಿಖಾ ಸಂಸ್ಥೆಗಳಾಗಲೀ ಅಥವಾ ಬ್ಯಾಂಕ್ ಗಳಾಗಲೀ ಸಹಕಾರ ನೀಡುತ್ತಿಲ್ಲ ಎಂದಿರುವ ಮಲ್ಯ, ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಾದರೂ ತನ್ನ ಮಾತನ್ನು ಕೇಳಿಸಿಕೊಳ್ಳಬಹುದು ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ
ಭಾರತ ಬಿಟ್ಟು ಪರಾರಿ ಆಗಿರುವ ವಿಜಯ್ ಮಲ್ಯ, ಕಳೆದ ನಾಲ್ಕು ವರ್ಷದಿಂದ ವಿದೇಶದಲ್ಲೇ ನೆಲೆಸಿದ್ದಾರೆ. ಭಾರತದಲ್ಲಿ ಅವರ ವಿರುದ್ಧ ದೋಷಾರೋಪ ಇರುವುದರಿಂದ ವಾಪಸ್ ಬರಲು ಆಗುತ್ತಿಲ್ಲ.








