‘ಸ್ವೀಟಿ’ ಖಾತೆಗೆ ಹಣ : ಇದು ‘ಡಿಂಗ್ ಡಾಂಗ್’ ಕೇಸ್ ಎಂದ ಸಂಬರ್ಗಿ..!
ಆರ್ ಎಸ್ ಎಸ್ ಮುಖಂಡ ಅಂತ ಹೇಳ್ಕೊಂಡು ಪ್ರಭಾವಿ ವ್ಯಕ್ತಿಗಳ ಬಳಿ ಹಣ ಪೀಕ್ತಿದ್ದ ಯುವರಾಜ್ ಸ್ವಾಮಿ ಎಂಬಾತನನ್ನ ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದ್ರೆ ಈತನ ಖಾತೆಯಿಂದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಆಕೆಯ ಸಹೋದರ ಖಾತೆಗೆ ಹಣ ವರ್ಗಾವಣೆ ಆಗಿರುವ ಸುದ್ದಿ ಸದ್ಯ ರಾಜ್ಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ವ್ಯಕ್ತಿಗೂ ಹಾಗೂ ರಾಧಿಕಾಗೂ ಇರುವ ಲಿಂಕ್ ಏನು ಅನ್ನೂ ಚರ್ಚೆಗಳು ಆರಂಭವಾಗಿದೆ. ಆದ್ರೆ ಇದಕ್ಕೆಲ್ಲ ನಟಿ ರಾಧಿಕಾ ನಿನ್ನೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು. ಸಿನಿಮಾ ವಿಚಾರವಾಗಿ ನನ್ನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು ಎಂದಿದ್ರು. ಆದ್ರೆ ಅವರ ಹೇಳಿಕೆ ಗೊಂದಲಗಳಿಂದ ಕೂಡಿದ್ದು, ಮತ್ತಷ್ಟು ಅನುಮಾನಗಳನ್ನ ಹುಟ್ಟುಹಾಕಿದೆ.
ನನ್ನ ಕಚೇರಿಯಲ್ಲಿರುವುದಕ್ಕಿಂತ ಹೆಚ್ಚಿನ ಮಾಹಿತಿ ಏಜೆನ್ಸಿ ಬಳಿ ಇದೆ – ರಾಬರ್ಟ್ ವಾದ್ರಾ
ಇತ್ತ ಸದಾ ವಿವಾದಾತ್ಮಕ ಹೇಳಿಕೆಗಳು ನಟ ನಟಿಯರ ವಿರುದ್ಧ ಆರೋಪಗಳು, ಡ್ರಗ್ಸ್ ಲಿಂಕ್ ಕುರಿತಾದ ಹೇಳಿಕೆ ಹೀಗೆ ಒಂದಿಲ್ಲಾ ಒಂದು ವಿಚಾರದಲ್ಲಿ ಸುದ್ದಿಯಾಗ್ತಲೇ ಇರುವ ಪ್ರಶಾಂತ್ ಸಂಬರ್ಗಿ ಈ ವಿಚಾರವಾಗಿ ಮಾತನಾಡಿ ಸುದ್ದಿಯಲ್ಲಿದ್ದಾರೆ. ಹೌದು ಈ ಕುರಿತಾಗಿ ತಮ್ಮ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಂಬರ್ಗಿ ‘ ಇದು ಡಿಂಗ್ ಡಾಂಗ್ ಕೇಸ್’ ಎಂದು ವ್ಯಂಗ್ಯವಾಡಿದ್ದಾರೆ. ಹೌದು ಘಟನೆಗೆ ಸಂಬಂಧಿಸಿದಂತೆ ಪೋಸ್ಟ್ ಹಾಕಿರುವ ಪ್ರಶಾಂತ್ ಸಂಬರ್ಗಿ ‘ಪೊಲೀಸರಿಂದ ಸಿಕ್ಕಿರುವ ಮಾಹಿತಿ ಪ್ರಕಾರ ವಂಚನೆ ಮಾಡಿರುವ ಯುವರಾಜ್‌ನಿಂದ 75 ಲಕ್ಷ ಹಣ ನಟಿಗೆ ವರ್ಗಾವಣೆಯಾಗಿದೆ. ಇದೊಂದು ಅಪ್ಪಟ ‘ಡಿಂಗ್ ಡಾಂಗ್ ಕೇಸ್’ ಎಂದು ಟೀಕಿಸಿದ್ದಾರೆ. ”ding dong case of remuneration” ಎಂದು ಗೊಂದಲಭರಿತವಾಗಿ ಪೋಸ್ಟ್ ಮಾಡಿರುವ ಸಂಬರ್ಗಿ ಸದ್ಯ ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ. ಯಾವ ಅರ್ಥದಲ್ಲಿ ಈ ಪೋಸ್ಟ್ ಹಾಕಿದ್ದಾರೆ ಅನ್ನೋ ಪ್ರಶ್ನೆ ಎದುರಾಗಿದೆ. ಡಿಂಗ್ ಡಾಂಗ್ ಕೇಸ್ ಅಂದ್ರೇನು ಅನ್ನೋ ಚರ್ಚೆ ಪ್ರಾರಂಭವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel