ಅಮೆರಿಕಾದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಘೋಷಣೆ : ಜ. 20ರಂದು ಪ್ರಮಾಣವಚನ
ಅಮೆರಿಕಾ : ಭಾರಿ ಹೈಡ್ರಾಮ… ಭಾರಿ ಗಲಭೆ… ಭಾರಿ ಚರ್ಚೆಗೆ ಗ್ರಾಸವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆಲುವು ಸಾಧಿಸಿದ್ದಾರೆಂದು ಯುಎಸ್ ಕಾಂಗ್ರೆಸ್ ಘೋಷಣೆ ಮಾಡಿದೆ.
ಜನವರಿ 20ರಂದು ಅವರು ನೂತನ ಅಧ್ಯಕ್ಷರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.ಇನ್ನು ಅದೇ ದಿನ ಭಾರತ ಮೂಲದ ಕಮಲ್ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಟ್ರಂಪ್ ಅಧಿಕಾರವಧಿ ಮುಗಿಯುವ ಮುನ್ನವೇ ಪದಚ್ಯುತಿ? ಸಂಪುಟ ಸದಸ್ಯರ ಚರ್ಚೆ!
ರಿಪಬ್ಲಿಕನ್ ಉಪಾಧ್ಯಕ್ಷ ಮೈಕ್ ಪೆನ್ಸ್ ಅವ್ರು ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ಘೋಷಿಸಿದ್ದು, ಎಲೆಕ್ಟೋರಲ್ ಕಾಲೇಜ್ ಮತಗಳ ಪೈಕಿ ಡೆಮಾಕ್ರಟಿಕ್ ಪರವಾಗಿ 306 ಮತಗಳಿದ್ರೆ, ನಿರ್ಗಮಿತ ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪರವಾಗಿ 232 ಮತಗಳಿವೆ.
ಇನ್ನು ಈ ಘೋಷಣೆಗೂ ಮುನ್ನ ಡೆಮಾಕ್ರಟಿಕ್ ಪಕ್ಷದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಚುನಾವಣಾ ವಿಜಯವನ್ನು ಕಾಂಗ್ರೆಸ್ ಸಭೆ ಪ್ರಮಾಣೀಕರಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಯುಎಸ್ ಕ್ಯಾಪಿಟಲ್ ಕಟ್ಟಡ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಪೊಲೀಸರ ಮತ್ತು ಪ್ರತಿಭಟನಾಕಾರರ ಮಧ್ಯ ಘರ್ಷಣೆ ಉಂಟಾಗಿ ಗುಂಡಿನ ಚಕಮಕಿಯಲ್ಲಿ ನಾಲ್ವರು ಮೃತಪಟ್ಟಿದ್ದರು.
ಈ ಘಟನೆ ಇಡೀ ಅಮೆರಿಕಾವನ್ನೇ ಬೆಚ್ಚಿ ಬೀಳಿಸಿದೆ. ಇಡೀ ವಿಶ್ವದಾದ್ಯಂತ ಸಂಚಲ ಸೃಷ್ಟಿ ಮಾಡಿದೆ. ಇಡೀ ಜಗತ್ತೇ ವಿಶ್ವದ ದೊಡ್ಡಣ್ಣನತ್ತ ನೋಡುವಂತಾಗಿದೆ.ಇತ್ತ ಘಟನೆ ಹಿನ್ನೆಲೆ ವಾಷಿಂಗ್ಟನ್ ನಲ್ಲಿ 15 ದಿನಗಳವರೆಗೆ ಎಮರ್ಜೆನ್ಸಿ ವಿಸ್ತರಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel