ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ತಾರೆ ಅಂತ ಹೇಳಿಲ್ಲ : ಆರ್.ಶಂಕರ್
ರಾಣೆಬೆನ್ನೂರು : ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ತಾರೆ ಅಂತ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ತಿರುಚಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್ ಹೇಳಿದ್ದಾರೆ.
ರಾಣೆಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯ ಮೇಲ್ಮನೆ ಸದಸ್ಯ. ಯಾವುದೇ ಕಾರಣಕ್ಕೂ ನಾನು ನಮ್ಮ ಪಕ್ಷಕ್ಕೆ ಮುಜುಗರ ತರೋ ಕೆಲಸ ಮಾಡಲ್ಲ,
ಈ ರೀತಿ ಹೇಳಿಕೆ ನೀಡಲ್ಲ. ನಾನು ನಿನ್ನೆಯ ಸಭೆಯಲ್ಲಿ ಹೇಳಿದ್ದು, 2012ರಲ್ಲಿ ದಾವಣಗೆರೆಯಲ್ಲಿ ನಡೆದ ಸಮಾವೇಶ ಸಿದ್ದರಾಮಯ್ಯ ಸಿಎಂ ಆಗಲು ದಿಕ್ಸೂಚಿ ಎಂದು ಹೇಳಿದ್ದೇನೆಯೇ ಹೊರತು ಸಿದ್ದರಾಮಯ್ಯ ಮುಂದಿನ ಸಿಎಂ ಅಂತಲ್ಲ.
ನಿನ್ ಹೆಂಡ್ತಿ ಸೀರೆಯನ್ನ ಯಾವ ಸೋಪಲ್ಲಿ ತೊಳೆಯುತ್ತೀಯಾ : ಅಧಿಕಾರಿ ವಿರುದ್ಧ ಮಾಧುಸ್ವಾಮಿ ಗರಂ
ಇದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ತಿರುಚಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಮಾತನಾಡಿ, ಸಿಎಂ ಬಿಎಸ್ ವೈ ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡೋದಾಗಿ ಹೇಳಿದ್ದಾರೆ. ಅದನ್ನೇ ನಾನು ಹೇಳಿದ್ದೇನು ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









