ಅಮೆರಿಕಾ ಹಿಂಸಾಚಾರ ‘ಸುಂದರ ದೃಶ್ಯʼ : ಚೀನಾ ವ್ಯಂಗ್ಯ
ಚೀನಾ: ಅಮೆರಿಕಾದ ಸಂಸತ್ ಕಟ್ಟಡದಲ್ಲಿ ಟ್ರಂಪ್ ಬೆಂಬಲಿಗರಿಂದ ಹಿಂಸಾಚಾರ ಪ್ರಕರಣಕ್ಕೆ ಇಡೀ ವಿಶ್ವದ ನಾಯಕರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಒಬಾಮಾ, ಮೋದಿ, ಜೋ ಬಿಡೆನ್ , ಬ್ರಿಟನ್ ಪ್ರಧಾನಿ, ಗೂಗಲ್ ಕಾರ್ಯನಿರ್ವಾಹಕ ಹೀಗತೆ ಅನೇಕ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಘಟನೆಯಲ್ಲಿ ನಾಲ್ವರು ಬಲಿಯಾಗಿದ್ದು, ಅನೇಕರು ಗಾಯಗೊಂಡಿದ್ದು, ಪರಿಸ್ಥಿತಿ ಉಗ್ರ ಸ್ವರೂಪ ಪಡೆದುಕೊಂಡಿದೆ. ಆದ್ರೆ ಇತ್ತ ಚೀನಾ ಈ ಇಂತಹ ಗಂಭೀರ ವಿಚಾರದಲ್ಲೂ ವಿಕೃತಿ ಮೆರೆದಿದಿದೆ. ಹೌದು ದಾಳಿಯ ಕುರಿತಂತೆ ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಪೂರಿತ ಟ್ವೀಟ್ಗಳು ಹರಿದಾಡಿವೆ.
ಹಣ ವರ್ಗಾವಣೆ ಕೇಸ್ : ಸ್ವೀಟಿಗೆ ಸಿಸಿಬಿ ನೋಟಿಸ್..! ನಾಳೆ ವಿಚಾರಣೆ
ಚೀನಾದ ಅಧಿಕೃತ ಗ್ಲೋಬಲ್ ಟೈಮ್ಸ್ ನಲ್ಲಿ ಇಂದಿನ ಅಮೆರಿಕಾದ ಘಟನೆಯ ಹಾಗೂ 2019ರ ಜುಲೈನಲ್ಲಿ ಹಾಂಕಾಂಗ್ ಪ್ರತಿಭಟನಾಕಾರರು ನಗರದ ಶಾಸಕಾಂಗ ಪರಿಷತ್ ಸಂಕೀರ್ಣಕ್ಕೆ ಮುತ್ತಿಗೆ ಹಾಕಿದ ಸಂದರ್ಭ ಚಿತ್ರಗಳನ್ನು ಅಕ್ಕಪಕ್ಕದಲ್ಲಿ ಪೋಸ್ಟ್ ಮಾಡಿದೆ. ಅಮೆರಿಕಾದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರನ್ನೂ ಟ್ಯಾಗ್ ಮಾಡಿರುವ ಗ್ಲೋಬಲ್ ಟೈಮ್ಸ್, ಪೆಲೋಸಿ ಅವರು ಒಮ್ಮೆ ಹಾಂಕಾಂಗ್ ಹಿಂಸಾಚಾರವನ್ನು “ನೋಡಲು ಸುಂದರವಾದ ದೃಶ್ಯ” ಎಂದಿದ್ದರು. ಕ್ಯಾಪಿಟೊಲ್ ಹಿಲ್ ನ ಇತ್ತೀಚಿಗಿನ ಬೆಳವಣಿಗೆಗಳ ಕುರಿತಂತೆಯೂ ಅವರು ಇದೇ ಮಾತುಗಳನ್ನು ಆಡುತ್ತಾರೆಯೇ ಎಂದು ನೋಡಬೇಕಿದೆ, ಎಂದು ಬರೆದಿದೆ. ಚೀನಾದ ಕಮ್ಯುನಿಸ್ಟ್ ಯುತ್ ಲೀಗ್ ಕೂಡ ಅಮೆರಿಕಾದ ಇಂದಿನ ಘಟನೆಯನ್ನು “ಸುಂದರ ದೃಶ್ಯ” ಎಂದು ತನ್ನ ಟ್ವಿಟ್ಟರ್ ರೀತಿಯ ವೀಬೋ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel