ಸ್ವಯಂ ಕ್ಷಮಾದಾನ ಘೋಷಣೆಗೆ ಮುಂದಾದ ಟ್ರಂಪ್
ಅಮೆರಿಕಾ: ಅಮೆರಿಕಾದಲ್ಲಿ ಹಿಂಸಾಚಾರ ಪ್ರಕರಣ ಹಿನ್ನೆಲೆ, ನಿರ್ಗಮಿತ ಅಧ್ಯಕ್ಷ ಡೊಲಾನ್ಡ್ ಟ್ರಂಪ್ ಅವರು ಸ್ವಯಂ ಕ್ಷಮಾದಾನವನ್ನು ಘೋಷಿಸಿಕೊಳ್ಳುವ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಹೌದು ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕಾನೂನು ತೊಡಕುಗುಳನ್ನು ನಿವಾರಿಸಿಕೊಳ್ಳಲು ಟ್ರಂಪ್ ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ವಯಂ ಕ್ಷಮಾದಾನವನ್ನು ಘೋಷಿಸಿಕೊಳ್ಳಲು ತಯಾರಿ ನಡೆಸಿದ್ದಾರಂತೆ.
ಯಶ್ ಗೆ ವಿಶ್ ಮಾಡಿದ ಬಾಲಿವುಡ್ ‘ಕ್ರಿಶ್’…! ಟೀಸರ್ ಶೇರ್ ಮಾಡಿ ಹೇಳಿದ್ದೇನು!
ತಮ್ಮ ಅಧಿಕಾರಾವಧಿಯಲ್ಲಿ ನಡೆದಿರುವ ಹಲವಾರು ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವ ಸಲುವಾಗಿ ಟ್ರಂಪ್ ಸ್ವಯಂ ಕ್ಷಮಾದಾನಕ್ಕೆ ಮುಂದಾಗಿದ್ದಾರೆ. ಮುಂದಿನ ಎರಡು ವಾರಗಳಲ್ಲಿ ಹಲವಾರು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕ್ಷಮಾಧಾನ ಘೋಷಣೆಯಾಗುವ ನಿರೀಕ್ಷೆ ಇದೆ. 2018ರಿಂದಲೂ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ಇದೆ. ಸ್ವಯಂ ಕ್ಷಮಾದಾನ ಎಲ್ಲಾ ರೀತಿಯ ಹಕ್ಕುಗಳನ್ನು ಅಧ್ಯಕ್ಷರು ಹೊಂದಿದ್ದಾರೆ ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ, ಅಮೆರಿಕದ ಕಾನೂನು ಇದಕ್ಕೆ ವ್ಯತಿರಿಕ್ತವಾದ ಅಭಿಪ್ರಾಯವನ್ನು ಹೊಂದಿದೆ. ಅಮೆರಿಕದ ಸಂವಿಧಾನದಲ್ಲಿ ಅಧ್ಯಕ್ಷರ ಸ್ವಯಂ ಕ್ಷಮಾದಾನ ಘೋಷಣೆ ಬಗ್ಗೆ ಅಸ್ಪಷ್ಟತೆ ಇದೆ. ಆದರೆ, ಸುಪ್ರೀಂಕೋರ್ಟ್ನ ನ್ಯಾಯಾಧೀಶರು, ಕಾನೂನು ತಜ್ಞರು, ಶಾಸನ ರಚನಾ ಪರಿಣಿತರ ಅಭಿಪ್ರಾಯದ ಪ್ರಕಾರ ಕ್ಷಮೆ ಎಂಬುದನ್ನು ಒಬ್ಬರು ಮತ್ತೊರಿಗೆ ನೀಡಬೇಕಿದೆ. ತಮ್ಮಷ್ಟಕ್ಕೆ ತಾವೇ ಕ್ಷಮಿಸಿಕೊಳ್ಳುವುದು ನೈತಿಕತೆ ಅಲ್ಲ. ಅದನ್ನು ಕ್ಷಮೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಹೇಳಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel