ಎಚ್ಚರ ಎಚ್ಚರ…. ವೀಲಿಂಗ್ ಮಾಡಿದರೆ ಜೈಲೂಟ ಗ್ಯಾರಂಟಿ..!
ಬೆಂಗಳೂರು : ವಾಹನಗಳಿಗೆ ಕರ್ಕಶ ಶಬ್ಧ ಮಾಡುವ ಸೈಲೆನ್ಸರ್‍ಗಳನ್ನು ಅಳವಡಿಸಿರುವುದು ಹಾಗೂ ವೀಲಿಂಗ್ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸರು ಎಚ್ಚರಿಸಿದ್ದಾರೆ.
ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀ ಜಗದ್ಗುರು ಬಸವೇಶ್ವರ ಪ್ರೌಢಶಾಲೆ ಸಭಾಂಗ ಣದಲ್ಲಿ ನಡೆದ ಸಂಚಾರ ಸಂಪರ್ಕ ದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಹವಾಲುಗಳಿಗೆ ಉತ್ತರಿಸಿದ ಪಶ್ವಿಮ ಸಂಚಾರ ವಿಭಾಗದ ಡಿಸಿಪಿ ಸೌಮ್ಯಲತಾ ಅವರು, ಕರ್ಕಶವಾಗಿ ಶಬ್ಧ ಮಾಡುವ ವಾಹನಗಳ ಮಾಲೀಕರ ವಿರುದ್ಧ ಸಿಆರ್‍ಪಿಸಿ 107ಅಡಿ ಕೇಸು ದಾಖಲಿಸಲಾಗುವುದು.
ಅಮೆರಿಕದ ಹಿಂಸಾಚಾರ : ಗಲಭೆಯಲ್ಲಿ ತಿರಂಗ ಪ್ರದರ್ಶನ : ಧ್ವಜ ಹಾರಿಸಿದವರ ವಿರುದ್ಧ ದೆಹಲಿಯಲ್ಲಿ ಕೇಸ್..!
ಜತೆಗೆ ಅವರ ವಿರುದ್ಧ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರಿಗೆ ವರದಿ ನೀಡಲಾಗುವುದು. ಒಂದು ಲಕ್ಷ ರೂ. ಬಾಂಡ್ ಪಡೆದು ವಾಹನ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ವೀಲಿಂಗ್ ಮಾಡುವವರ ವಿರುದ್ಧ ಕೂಡ ಇದೇ ರೀತಿಯ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಜೈಲಿಗೂ ಕಳಿಸಲಾಗುತ್ತೆ ಎಂದು ವೀಲ್ಹೀಂಗ್ ಕ್ರೇಜ್ ಇರೋರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ಇನ್ನೂ ಕರ್ಕಶವಾದ ಸೈಲೆನಸ್ಸರ್‍ಗಳ ಹಾವಳಿಯಿಂದ ಹಿರಿಯ ನಾಗರಿಕರಿಗೆ ಭಾರೀ ತೊಂದರೆಯಾಗುತ್ತದೆ. 30ಸೆಕೆಂಡ್ ನಷ್ಟು ಹೃದಯ ಸ್ತಂಭನವಾದಂತಹ ಅನುಭವವಾಗುತ್ತದೆ. ಆರೋಗ್ಯ ಹದಗೆಡುತ್ತದೆ. ಇದನ್ನ ಮನದಟ್ಟಾಗಿಸಿಕೊಂಡು ಇಂತಹ ನಿರ್ಧಾರ ಕೈಗೊಳ್ಳಲಾಗ್ತಿದೆ. ಇತ್ತೀಚೆಗಷ್ಟೇ ಬೈಕ್ ನಲ್ಲಿ ವೀಲ್ಹಿಂಗ್ ಹುಚ್ಚಾಟಕ್ಕೆ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದರು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








