ಬ್ರಾಹ್ಮಣರಿಗೆ ಬಾಂಡ್ : ಶಾದಿ ಭಾಗ್ಯ ವಿರೋಧಿಸಿದ್ದ ಬಿಜೆಪಿಯವರಿಗೆ ಸಿದ್ದು ಟಾಂಗ್
ಬೆಂಗಳೂರು : ಪುರೋಹಿತರನ್ನು ಮದುವೆ ಆಗುವ ಬ್ರಾಹ್ಮಣ ಹುಡುಗಿಯರಿಗೆ ಸರ್ಕಾರ ಮೂರು ಲಕ್ಷ ರೂಪಾಯಿಯ ಬಾಂಡ್ ನೀಡಲು ಮುಂದಾಗಿದೆ.
ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾನು ಶಾದಿ ಭಾಗ್ಯ ತಂದಾಗ ಯಡಿಯೂರಪ್ಪ ವಿರೋಧ ಮಾಡಿದ್ದರು. ಆದರೂ ನಾವು ಒತ್ತಾಯಪೂರ್ವಕವಾಗಿ ಜಾರಿಗೆ ತಂದಿದ್ದೆವು. ಇದೀಗ ಅವರು ಬಾಂಡ್ ಕೊಡಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಶಾದಿ ಭಾಗ್ಯ ತಂದಾಗ ಬಿಜೆಪಿಯವರು ತುಂಬಾ ವಿರೋಧಿಸಿದ್ದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್ ಇರಲ್ಲ : ರೇಣುಕಾಚಾರ್ಯ
ಯೋಜನೆ ವಾಪಸ್ ಆಗೋವರೆಗೂ ನಾವು ಹೋರಾಟ ಮಾಡುತ್ತೇವೆಂದು ಯಡಿಯೂರಪ್ಪನವರು ಬೆಳಗಾವಿಯಲ್ಲಿ ಹೇಳಿದ್ದರು. ಈಗ ಬ್ರಾಹ್ಮಣರಿಗೆ ಬಾಂಡ್ ಕೊಡುತ್ತಾ ಇದ್ದಾರೆ, ಕೊಡಲಿ ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಲ್ಲ ಎಂದು ತಿಳಿಸಿದರು.
ಆದ್ರೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ನಾನು ಶಾದಿ ಭಾಗ್ಯ ಯೋಜನೆ ಜಾರಿ ಮಾಡಿದಾಗ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮಳೆಯಲ್ಲೇ ಕೂತು ಪ್ರತಿಭಟನೆ ಮಾಡಿದ್ದರು.
ಒಂದು ಜಾತಿ ಬಣವನ್ನು ಬಿಜೆಪಿಯವರು ಎತ್ತಿಕಟ್ಟಿದ್ದರು ಎಂದು ಕುಟುಕಿದರು. ಇದೇ ವೇಳೆ ತಮ್ಮ ಅವಧಿಯಲ್ಲಿ ತಂದ ಹಲವು ಭಾಗ್ಯಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದರು.
ಪಶು, ಕೃಷಿ, ವಿದ್ಯಾಸಿರಿ, ಕುರಿ, ಜಾನುವಾರು ಸತ್ತರೆ ನೀಡುವ ಪರಿಹಾರ ನಿಲ್ಲಿಸಿದ್ದಾರೆ. ನೀರು ನಿಲ್ಲಿಸಿ ಅನೇಕ ಕಡೆ ಇಂದಿರಾ ಕ್ಯಾಂಟೀನ್ ನಿಲ್ಲಿಸಿದ್ದಾರೆ. ಕಾರಣ ಕೇಳಿದರೇ ದುಡ್ಡಿಲ್ಲ ಎಂದು ಇವನ್ನೆಲ್ಲಾ ನಿಲ್ಲಿಸಿದ್ದೇವೆ ಎನ್ನುತ್ತಿದ್ದಾರೆ.
ಆದ್ರೆ ಕೊರೊನಾಗೆ 5-6 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ನಮ್ಮ ಸುಧಾಕರ್ ವಿಧಾನಸಭೆಯಲ್ಲಿ 4200 ಕೋಟಿ ಕೊರೊನಾಗೆ ಖರ್ಚಾಗಿದೆ ಎಂದಿದ್ದಾನೆ.
ಸಿಎಂ ಬಿ ಎಸ್ ಯಡಿಯೂರಪ್ಪ ನಿನ್ನೆ ನಮಗೆ 50 ಸಾವಿರ ಕೋಟಿ ರೂ. ಖೋತಾ ಆಗಿದೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ತೆರಿಗೆ ವಸೂಲಿ ಚೆನ್ನಾಗಿ ಆಗುತ್ತಿದೆ ಎನ್ನುತ್ತಿದ್ದಾರೆ. ದುಡ್ಡಿಲ್ಲ ಎನ್ನುತ್ತಿರುವ ದರಿದ್ರ ಸರ್ಕಾರ ಇದು ಎಂದು ಸಿದ್ದರಾಮಯ್ಯ ಟೀಕಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel