ವಾಮಮಾರ್ಗದಲ್ಲಿ ಉನ್ನತ ಹುದ್ದೆಗೆ ಬಡ್ತಿ ಪಡೆದಿದ್ದ ಅಧಿಕಾರಿಗಳಿಗೆ ಯೋಗಿ ಸರ್ಕಾರದಿಂದ ಶಾಕ್..!
ವಾಮಮಾರ್ಗದಲ್ಲಿ ಬಡ್ತಿ ಪಡೆದಿದ್ದ ನಾಲ್ವರು ಹೆಚ್ಚುವರಿ ಜಿಲ್ಲಾ ಮಾಹಿತಿ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಯೋಗಿ ನೇತೃತ್ವದ ಸರ್ಕಾರ ಬಿಗ್ ಶಾಕ್ ನೀಡಿದೆ. ಇಂತಹ ಅಧಿಕಾರಿಗೆ ಹಿಂಬಡ್ತಿ ನೀಡಿದೆ.
ಸಾರ್ವಜನಿಕ ಸಂಪರ್ಕ ಇಲಾಖೆಯ ಸಿಬ್ಬಂದಿಯೊಬ್ಬರು ಅಲಹಾಬಾದ್ ಹೈಕೋರ್ಟ್ನಲ್ಲಿ ಬಡ್ತಿ ಕೋರಿ ರಿಟ್ ಅರ್ಜಿ ಸಲ್ಲಿಸಿ ಕಾರ್ಯನಿರ್ವಹಿಸುವ ಹುದ್ದೆಗಳನ್ನು ಪರಿಗಣಿಸದೆಯೇ ಜವಾಬ್ದಾರಿಯುತ ಉನ್ನತ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದು ದೂರಿದ್ದರು. ಆದರೆ, ನ್ಯಾಯಾಲಯ ಸೇವಾ ನಿಯಮಾನುಸಾರ ಬಡ್ತಿ ನೀಡುವ ಹಕ್ಕು ಇರುತ್ತದೆ ಎಂದು ಅರ್ಜಿಯನ್ನು ವಜಾಗೊಳಿಸಿತ್ತು. ಇಲಾಖೆ ನಿರ್ದೇಶಕರಿಗೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು.ದಾಖಲಾತಿಗಳನ್ನು ಪರಿಶೀಲಿಸಿದಾಗ ನಿಯಮಗಳನ್ನು ಪಾಲಿಸದೆಯೇ ಬಡ್ತಿ ನೀಡಿರುವುದು ತಿಳಿದುಬಂದಿತು. ಮುಜುಗರಕ್ಕೆ ಒಳಗಾಗುವ ಸಂದರ್ಭದಲ್ಲಿ ತಕ್ಷಣ ನಾಲ್ವರಿಗೆ ಹಿಂಬಡ್ತಿ ನೀಡಲಾಗಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ವಿಡಿಯೋ ವೈರಲ್ : ಚಲಿಸುತ್ತಿದ್ದ ರೈಲ್ವೇ ಹಳಿಗೆ ಸಿಲುಕುತ್ತಿದ್ದ ಮಹಿಳೆಯನ್ನು ಸಿನಿಮಾಯ ರೀತಿಯಲ್ಲಿ ರಕ್ಷಿಸಿದ RFF ಸಿಬ್ಬಂದಿ..!
ಒಟ್ಟು ನಾಲ್ವರಲ್ಲಿ ಬರೇಲಿಯಲ್ಲಿ ಹೆಚ್ಚುವರಿ ಜಿಲ್ಲಾ ಮಾಹಿತಿ ಅಕಾರಿಯಾಗಿದ್ದ ನರಸಿಂಗ್ ಎಂಬುವವರಿಗೆ ಕಚೇರಿ ಸಹಾಯಕ, ಫಿರೋಜಾಬಾದ್ನಲ್ಲಿ ಹೆಚ್ಚುವರಿ ಜಿಲ್ಲಾಮಾಹಿತಿ ಅಧಿಕಾರಿ ದಯಾ ಶಂಕರ್ ಅವರಿಗೆ ಕಾವಲುಗಾರ, ಮಥುರಾ ಮತ್ತು ಭಾದೋಹಿಯಲ್ಲಿ ಹೆಚ್ಚುವರಿ ಜಿಲ್ಲಾ ಮಾಹಿತಿ ಅಧಿಕಾರಿಯಾಗಿದ್ದ ವಿನೋದ್ ಕುಮಾರ ಶರ್ಮಾ ಮತ್ತು ಅನಿಲ್ ಕುಮಾರ್ ಸಿಂಗ್ ಅವರಿಗೆ ಸಿನಿಮಾ ಆಪರೇಟರ್ ಮತ್ತು ಸಂವಹನ ಸಹಾಯಕ ಹುದ್ದೆಗೆ ಹಿಂಬಡ್ತಿ ನೀಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








