ಜೀನ್ಸ್ ಧರಿಸಿದ್ರೆ ತಲಾಖ್ ಕೊಡ್ತೀನಿ ಎಂದ ಗಂಡನ ವಿರುದ್ಧ ದೂರು ದಾಖಲಿಸಿದ ಪತ್ನಿ..!
ಗುಜರಾತ್: ಜೀನ್ಸ್ ಕಾರಣಕ್ಕೆ ದಂಪತಿ ನಡುವೆ ಗಲಾಟೆ ನಡೆದು ತಾರಕಕ್ಕೇರಿದ್ದು, ಡೈವೋರ್ಸ್ ಹಂತಕ್ಕೆ ತಲುಪಿದೆ. ಅಹಮದಾಬಾದ್ ನ ವೇಜಲ್ಪುರದಲ್ಲಿ ಇಂತಹದೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ರಹೀಮ್ ಎಂಬಾತ ತನ್ನ ಪತ್ನಿಗೆ ಜೀನ್ಸ್ ಧರಿಸಿ ಕಚೇರಿಗೆ ಹೋದರೆ ವಿಚ್ಛೇದನ ನೀಡುವುದಾಗಿ ಪತಿ ಬೆದರಿಕೆ ಹಾಕುತ್ತಿದ್ದು, ಆತನ ಕುಟುಂಬದವರೂ ಗಂಡನಿಗೆ ಸಪೋರ್ಟ್ ಮಾಡುತ್ತಿತ್ತು. ಇದರಿಂದಾಗಿ ಬೇಸತ್ತ ಆತನ ಪತ್ನಿ ಇದೀಗ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಜೀನ್ಸ್ ತೊಡುವ ಹೆಣ್ಣುಮಕ್ಕಳ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡುವ ತನ್ನ ಪತಿ, ನಾನು ಜೀನ್ಸ್ ತೊಟ್ಟರೆ ಡಿವೋರ್ಸ್ ಕೊಡುವುದಾಗಿ ಹೆದರಿಸುತ್ತಿದ್ದಾನೆ. ಇದರಿಂದ ನನ್ನ ಬದುಕೇ ದುಸ್ತರವಾಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಬಾಲಾಕೋಟ್ ಏರ್ ಸ್ಟ್ರೈಕ್ ನಲ್ಲಿ 300 ಉಗ್ರರು ಸಾವನ್ನಪ್ಪಿದ್ದು ನಿಜ : ಸತ್ಯ ಒಪ್ಪಿಕೊಂಡ ಪಾಕ್..!
ಇನ್ನೂ ದೂರು ದಾಖಲಿಸಿರುವ ಮಹಿಳೆಗೆ ಈತ 2ನೇಯ ಪತಿಯಾಗಿದ್ದು, ಆಕೆಯ ಪತಿ ರಹೀಂಗೆ ಇದು ಮೂರನೆಯ ಮದುವೆ ಎನ್ನಲಾಗಿದೆ. 2017ರಲ್ಲಿ ಇವರಿಬ್ಬರ ಮದುವೆ ಆಗಿದೆ. ಮದುವೆಯಾದ ಮೊದಲ ಎರಡು ವರ್ಷಗಳಲ್ಲಿ ನಾವಿಬ್ಬರೂ ಸಂತೋಷವಾಗಿದ್ದೆವು. ನಾನು ಮದುವೆಗೆ ಮುಂಚೆ ಉದ್ಯೋಗ ಮಾಡುತ್ತಿದ್ದೆ. ಮದುವೆ ನಂತರವೂ ಅದನ್ನು ಮುಂದುವರೆಸುವುದಾಗಿ ಹೇಳಿದೆ. ಇದೇ ಕಾರಣಕ್ಕೆ ಮನೆಯನ್ನು ಬದಲಾಯಿಸಿದೆವು. ಉದ್ಯೋಗಕ್ಕೆ ಹೋಗುವ ವೇಳೆ ಜೀನ್ಸ್ ಧರಿಸುತ್ತಿದ್ದೆ. ಆದರೆ ಪದೇ ಪದೇ ಎಲ್ಲರೂ ಸೇರಿ ನನಗೆ ಮಾನಸಿಕ ಹಿಂಸೆ ಕೊಡಲು ಶುರು ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ವಿಡಿಯೋ ವೈರಲ್ : ಚಲಿಸುತ್ತಿದ್ದ ರೈಲ್ವೇ ಹಳಿಗೆ ಸಿಲುಕುತ್ತಿದ್ದ ಮಹಿಳೆಯನ್ನು ಸಿನಿಮಾಯ ರೀತಿಯಲ್ಲಿ ರಕ್ಷಿಸಿದ RFF ಸಿಬ್ಬಂದಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel