ನಾವು ಉದಯವಾಗಿದ್ದು ಜನಸಂಘದಿಂದ : ರಮೇಶ್ ಜಾರಕಿಹೊಳಿ
ಬೆಳಗಾವಿ :ನಾವು ಉದಯವಾಗಿದ್ದು ಜನಸಂಘದಿಂದ. ಹಾಫ್ ಚಡ್ಡಿ ಹಾಕುತ್ತಿದ್ದೇವು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ತಾಲೂಕಿನ ನಾವಲೆ ಗ್ರಾಮದ ಗಣೇಶ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಅವರು, ನಮ್ಮದು ಆರ್ ಎಸ್ ಎಸ್ ಹಿನ್ನೆಲೆಯ ಕುಟುಂಬ.
ಜನಸಂಘದಿಂದಲೂ ನಮ್ಮ ಕುಟುಂಬ ಸಂಘದೊಂದಿಗೆ ಇದೆ. ಆರ್ಎಸ್ ಎಸ್ ಪೂರ್ವವೇ ಇದ್ದ ಜನಸಂಘದ ಜೊತೆಗೆ ನಾವಿದ್ದೇವೆ.
ಬ್ರಾಹ್ಮಣರಿಗೆ ಬಾಂಡ್ : ಶಾದಿ ಭಾಗ್ಯ ವಿರೋಧಿಸಿದ್ದ ಬಿಜೆಪಿಯವರಿಗೆ ಸಿದ್ದು ಟಾಂಗ್
ಆಗ ನಾವು ದೀಪದ ಚಿತ್ರ ಇದ್ದ ಕರಿ ಟೋಪಿ ಹಾಕುತ್ತಿದ್ದೆವು. ಸಂಘದಲ್ಲಿದ್ದಾಗ ನಮ್ಮ ತಂದೆ ಮೂರು ತಿಂಗಳು ಜೈಲಿನಲ್ಲಿದ್ದರು ಎಂದು ಹೇಳಿದರು.
ಇನ್ನು ನಾವು ಜನಸಂಘದಿಂದ ಉದಯವಾಗಿದ್ದು, ಹಾಫ್ ಚಡ್ಡಿ ಹಾಕುತ್ತಿದ್ದೇವು. ಆದರೆ ಅನಿವಾರ್ಯವಾಗಿ ಕಾಂಗ್ರೆಸ್ ಗೆ ಹೋಗಬೇಕಾಯಿತು.
ನನ್ನ ತಂದೆ ಜಗನ್ನಾಥ್ ಜೋಶಿಯವರ ಫಾಲೋವರ್ಸ್ ಆಗಿದ್ದರು ಎಂದು ತಿಳಿಸಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳು ಹೆಚ್ಚಿದ್ದಾರೆ.
ಟಿಕೆಟ್ ಯಾರಿಗೆ ಸಿಗುತ್ತೆ ಗೊತ್ತಿಲ್ಲ. ಆದರೆ ಎಲ್ಲರನ್ನೂ ಕೊಲ್ಲಾಪುರದ ಜ್ಯೋತಿಬಾ ದೇವಸ್ಥಾನಕ್ಕೆ ಕರೆದೊಯ್ಯುತ್ತೇನೆ.
ಅಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಆಣೆ ಮಾಡಿಸುತ್ತೇನೆ. 2023ರಲ್ಲಿ ಇಲ್ಲಿ ಭಗವಾ ಧ್ವಜ ಹಾರಿಸುವ ಸಂಕಲ್ಪ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









