6 ಮಂದಿ ಕಾಮುಕರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಘಟನೆಗೆ ಸಹಕಾರ ನೀಡಿದ್ದ ಮಹಿಳೆ
ನಾಸಿಕ್ : ಮಹಾರಾಷ್ಟ್ರದ ನಾಸಿಕ್ ನಲ್ಲಿ 13 ವರ್ಷದ ಬಾಲಕಿ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ… ಘಟನೆಯಲ್ಲಿ ಅಪ್ರಾಪ್ತ ಬಾಲಕನು ಸೇರಿಕೊಂಡಿದ್ದ. ಇನ್ನೂ ಆಘಾತಕಾರಿ ವಿಚಾರವೆಂದರೆ ಅತ್ಯಾಚರವೆಸಗಿದ ಕಾಮುಕರಿಗೆ ಮಹಿಳೆಯೊಬ್ಬಳು ಸಹಾಯ ಮಾಡಿದ್ದಾಳೆ. ಘಟನೆ ಸಂಬಂಧ ಅಪ್ರಾಪ್ತ ಬಾಲಕ ಮಹಿಳೆ ಸೇರಿದಂತೆ 7 ಮಂದಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ : ಅಪ್ಪನಾದ ಖುಷಿಯಲ್ಲಿ ವಿರಾಟ್
ಸಂತ್ರಸ್ತೆಯು ಮನೆಯಲ್ಲಿ ಎಲ್ಲೂ ಕಾಣಿಸದೇ ಇದ್ದಾಗ ಪೋಷಕರು ಆಕೆಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಬಳಿಕ ಸಮೀಪದ ಕಟ್ಟಡದ ಮಹಡಿ ಮೇಲೆ ಆಕೆ ಅಳುತ್ತಾ ಕುಳಿತಿದ್ದನ್ನ ಕಂಡು ವಿಚಾರಿಸಿದಾಗ ಘಟನೆಗೆ ಗೊತ್ತಾಗಿದೆ. ಸಂತ್ರಸ್ತೆಗೆ ನಾಸಿಕ್ ಜಿಲ್ಲಾ ನಾಗರಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬರೆದಿಟ್ಟುಕೊಳ್ಳಿ ಕೆಜಿಎಫ್ – 2 ಕ್ಲೈಮಾಕ್ಸ್ ಇದೇ.. never before ever after
ತಕ್ಷಣವೇ ಪೋಷಕರು ಸಮೀಪದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಸಿಕ್ ರಸ್ತೆ ಪೊಲೀಸರು ಐವರು ಯುವಕರನ್ನು ಹಾಗೂ ಕೃತ್ಯಕ್ಕೆ ಸಹಕರಿಸಿದ ಮಹಿಳೆಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಐಪಿಸಿ ಕಾಯ್ದೆಯಡಿ ಕೇಸ್ ದಾಖಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಒಬ್ಬ ಅಪ್ರಾಪ್ತ ಬಾಲಕನನ್ನು ಬಂಧಿಸಿದ ಪೊಲೀಸರು, ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








