ಸ್ಯಾನ್ ಡಿಯಾಗೋ ಮೃಗಾಲಯದ ಗೊರಿಲ್ಲಾಗಳಿಗೆ ಕೊರೋನಾ ಪಾಸಿಟಿವ್!
ಅಮೆರಿಕಾ: ಇಡೀ ವಿಶ್ವವನ್ನೇ ಇನ್ನಿಲ್ಲದಂತೆ ಕಾಡಿರೋ ಕೊರೊನಾ ಮಹಾಮಾರಿ ಕೇವಲ ಮನುಷ್ಯರಿಗಷ್ಟೇ ಮಾರಕವಲ್ಲ ಪ್ರಾಣಿಗಳು ಕಂಟಕ ಅನ್ನೋದು ಹೊಸ ವಿಚಾರವೇನಲ್ಲ. ಇದೀಗ ಅಮೆರಿಕದ ಸ್ಯಾನ್ ಡಿಯಾಗೊ ಮೃಗಾಲಯ ಸಫಾರಿ ಪಾರ್ಕ್ ನಲ್ಲಿ ಹಲವು ಗೊರಿಲ್ಲಾಗಳಿಗೆ ಕೊರೊನಾ ಪಾಸಿಟಿವ್ ಇರುವುದು ಧೃಢವಾಗಿದೆ.
ಇಂದು ರಾಜ್ಯಕ್ಕೆ 7.95 ಲಕ್ಷ ವಯಲ್ಸ್ ಕೋವಿಶೀಲ್ಡ್ ಲಸಿಕೆ
ಹೌದು ಪಾರ್ಕ್ ನಲ್ಲಿ ಒಟ್ಟಿಗೆ ವಾಸಿಸುವ ಒಟ್ಟು ಎಂಟು ಗೊರಿಲ್ಲಾಗಳು ವೈರಸ್ ಸೋಂಕಿಗೆ ಒಳಗಾಗಿದೆ ಎನ್ನಲಾಗಿದೆ. ಕ್ಯಾಲಿಫೋರ್ನಿಯದ ಲಾಕ್ ಡೌನ್ ಪ್ರಯತ್ನಗಳ ಭಾಗವಾಗಿ, ಕರೋನವೈರಸ್ ಪ್ರಕರಣಗಳನ್ನು ತಡೆಗಟ್ಟುವ ಪ್ರಯತ್ನಗಳ ಭಾಗವಾಗಿ ಡಿಸೆಂಬರ್ 6 ರಿಂದ ಈ ಉದ್ಯಾನವನ್ನು ಸಾರ್ವಜನಿಕರಿಗೂ ಪ್ರವೇಶ ನಿಷೇಧಿಸಲಾಗಿತ್ತು.
ಈ ಸೋಂಕು ಬಹುಶಃ ಪಾರ್ಕ್ಸ್ ವೈಲ್ಡ್ ಲೈಫ್ ಕೇರ್ ತಂಡದ ಸದಸ್ಯನಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಪಶುವೈದ್ಯರು ಗೊರಿಲ್ಲಾಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸದ್ಯಕ್ಕೆ ಗೊರಿಲ್ಲಾಗಳಿಗೆ ವಿಟಮಿನ್ ಗಳು, ದ್ರವ ಮತ್ತು ಆಹಾರ ನೀಡಲಾಗುತ್ತಿದೆ, ಆದರೆ ವೈರಸ್ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಯನ್ನು ನೀಡಲಾಗಿಲ್ಲ ಎಂದು ಅವರು ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








