ಕಳ್ಳಬಟ್ಟಿ ಸಾರಾಯಿ ಸೇವನೆ : 11 ಮಂದಿ ಸಾವು, 7 ಜನರ ಸ್ಥಿತಿ ಚಿಂತಾಜನಕ
ಕಳ್ಳಬಟ್ಟಿ ಸಾರಾಯಿ ಸೇವಿಸಿ 11 ಮಂದಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. 2 ಪ್ರತ್ಯೇಕ ಪ್ರಕರಣಗಳಲ್ಲಿ 11 ಜನ ಮೃತಪಟ್ಟಿದ್ರೆ ಕಳ್ಳಬಟ್ಟಿ ಕುಡಿದ 7 ಮಂದಿ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಆತಂಕ: ಚೀನಾದ ವುಹಾನ್ ಸೇರಿ ಹಲವೆಡೆ ಲಾಕ್ ಡೌನ್ ವಿಸ್ತರಣೆ
ಮೊರೆನಾ ಜಿಲ್ಲೆಯ ಪಹವಾಲಿ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಸೇವಿಸಿ ಮೂವರು ಮೃತಪಟ್ಟಿದ್ದು, ಮನುಪುರ್ ಜಿಲ್ಲೆಯಲ್ಲಿ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬ ವ್ಯಕ್ತಿಯ ಸ್ಥಿತಿ ಚಿಂತಾಜನವಾಗಿದ್ದರಿಂದ ಗ್ವಾಲಿಯರ್ ಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಸ್ಥಳೀಯವಾಗಿ ತಯಾರಿಸಲಾದ ಕಳ್ಳಬಟ್ಟಿ ಸಾರಾಯಿಯನ್ನು ರಾತ್ರಿ ಸೇವಿಸಿದ ಕೂಡಲೇ ವಾಂತಿ ಮಾಡಲು ಶುರು ಮಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯಲಾಗಿದೆಯಾದರೂ 11 ಜನರು ವಿಷಪೂರಿತ ಕಳ್ಳಬಟ್ಟಿ ಸೇವನೆಯಿಂದಾಗಿ ಮೃತಪಟ್ಟಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







