ಕುಮಾರಸ್ವಾಮಿಯನ್ನ ಕೆಳಗಿಳಿಸಲು ಸಿದ್ದರಾಮಯ್ಯ ಷಡ್ಯಂತರ : ರಾಮುಲು
ಚಿತ್ರದುರ್ಗ : ಸಿದ್ದರಾಮಯ್ಯ ಷಡ್ಯಂತರ ರೂಪಿಸಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದು ಸಚಿವ ಶ್ರೀರಾಮುಲು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮೂರು ಭಾಗವಾಗಿದೆ. ಸಿಎಂ ಸ್ಥಾನಕ್ಕೆ ತಮ್ಮ ತಮ್ಮಲ್ಲೇ ಪೈಪೋಟಿಟಿ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ಮುಂದಿನ ಬಾರಿ ಬಾದಾಮಿ ಕ್ಷೇತ್ರದಿಂದ ಗೆಲುವು ಕಷ್ಟವಾಗಲಿದೆ.
ಚಾಮುಂಡೇಶ್ವರಿಯಲ್ಲಿ ಸೋತ ಮೇಲೆ ಬಾದಾಮಿಯಲ್ಲಿ ಗೆದ್ದ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದರು.
ನಂತರ ಷಡ್ಯಂತರ ರೂಪಿಸಿ ಕುಮಾರಸ್ವಾಮಿಯವರನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದು ಶ್ರೀರಾಮುಲು ಆರೋಪಿಸಿದರು.
ಇದೇ ವೇಳೆ ಸಿಎಂ ಸ್ಥಾನದಿಂದ ಬಿಎಸ್ ವೈ ಕೆಳಗಿಳಿಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಅವರಿವರ ಮಾತು ಕೇಳಿ ಸಿದ್ದರಾಮಯ್ಯ ಹೇಳಿಕೆ ನೀಡುವುದು ಸಮಂಜಸವಲ್ಲ.
ಪುಕ್ಕಟ್ಟೆ ಪಬ್ಲಿಸಿಟಿಗಾಗಿ ಸಿದ್ದರಾಮಯ್ಯ ಈ ಹೇಳಿಕೆಗಳನ್ನು ನೀಡುತ್ತಾರೆ ಎಂದು ಟಾಂಗ್ ನೀಡಿದ್ದಾರೆ.
ಇನ್ನು ಸಿದ್ದರಾಮಯ್ಯ ಕೊಡಗಿನ ಜನರು ಬೀಫ್ ತಿನ್ನುತ್ತಾರೆ ಎಂದು ಹೇಳಿಕೆ ನೀಡುತ್ತಾರೆ, ಬಳಿಕ ವಾಪಸ್ ತೆಗೆದುಕೊಳ್ಳುತ್ತಾರೆ. ಹಿಂದೂ-ಮುಸ್ಲಿಂ ಕ್ರಾಸ್ ಪದ ಬಳಸುತ್ತಾರೆ.
ಅಲ್ಲದೆ ರಾಮ, ಹನುಮ ಜಯಂತಿ ಗೊತ್ತಿಲ್ಲ ಎನ್ನುತ್ತಾರೆ. ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡ ಬಳಿಕ ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಾಮುಲು, ಅದು ಅವರ ವೈಯಕ್ತಿಕ ವಿಚಾರ ಮಾತ್ರ. ಪಕ್ಷಕ್ಕೆ ತನ್ನದೇ ಆದ ನಿಲುವು, ನಾಯಕರಿದ್ದಾರೆ.
ಬಿಎಸ್ ವೈ ಸಂಪುಟದಲ್ಲಿ ಸಚಿವ ಸ್ಥಾನ ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಶಾಸಕ ಯತ್ನಾಳ್ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು, ಬರುವ ದಿನಗಳಲ್ಲಿ ಅವರಿಗೂ ಕೂಡ ಸಚಿವ ಸ್ಥಾನ ಸಿಗಬಹುದು. ಯತ್ನಾಳ್ ಅವರ ನಿಲುವುಗಳು ಪಾರ್ಟಿ ನಿಲುವುಗಳಲ್ಲ ಸ್ಪಷ್ಟಪಡಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel