ಇನ್ಮುಂದೆ ಬಾರತ ‘ಲಿಥಿಯಂ’ಗಾಗಿ ಚೀನಾವನ್ನ ಅವಲಂಭಿಸುವ ಅಗತ್ಯವಿಲ್ಲ..!
ಬೆಂಗಳೂರು: ಇಂದು ಭಾರತ ಸೇರಿದಂತೆ ಇಡೀ ವಿಶ್ವವೇ ಚೀನಾದ ಜೊತೆಗೆ ಬಹುತೇಕ ಎಲ್ಲಾ ಸಂಬಂಧಗಳನ್ನ ಕಳೆದುಕೊಳ್ಳುವ ಪ್ರಯತ್ನದಲ್ಲಿದೆ. ಬಹುತೇಕ ಚೀನಾದಿಂದ ಸಿಗುವ ಎಲ್ಲಾ ವಸ್ತುಗಳ ಆಮದನ್ನ ನಿಲ್ಲಿಸಿ ಸ್ವಾವಲಂಭಿಯಾಗ್ತಿವೆ.
ಭಾರತವೂ ಇದೇ ಹಾದಿಯಲ್ಲಿದ್ದು, ಅನೇಕ ಕ್ಷೇತ್ರಗಳಲ್ಲಿ ಈಗಾಗಲೇ ಚೀನಾಗೆ ಹೊಡೆತ ಕೊಟ್ಟಿದೆ, ಇದೀಗ ಚೀನಾದಿಂದ ಆಮದಾಗುತ್ತಿರುವ ಲಿಥಿಯಂ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಬಾರತ ಪ್ರಯತ್ನಿಸುತ್ತಿದೆ.
ತನ್ನ ಕಟ್ಟ ಕಡೆಯ ದಿನದವರೆಗೂ ಪ್ರಪಂಚದ ಗಮನ ಸೆಳೆದಿದ್ದ ಅಗ್ನಿದಿವ್ಯ ಖಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನೆನಪಿಸಿಕೊಳ್ಳುತ್ತಾ:
ಈ ಹಿನ್ನೆಲೆಯಲ್ಲಿ ಭಾರತ ಅರ್ಜೆಂಟೀನಾದ ಕಂಪನಿಯೊಂದಿಗೆ (India Argentina agreement for lithium) ಒಪ್ಪಂದ ಮಾಡಿಕೊಂಡಿದೆ. ಇದುವರೆಗೆ ಚೀನಾದಿಂದ ಭಾರಿ ಪ್ರಮಾಣದಲ್ಲಿ ಲಿಥಿಯಂ ಅನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ ಕರ್ನಾಟಕದಲ್ಲಿ ಭಾರತಕ್ಕೆ ಭಾರಿ ಲಿಥಿಯಂನ ಭಂಡಾರವೇ ದೊರೆತಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಬಳಸಲಾಗುವ ಲಿಥಿಯಂ ನಿಕ್ಷೇಪ ಬೆಂಗಳೂರಿನಿಂದ ಸುಮಾರು 100 ಕಿ. ಮೀ ದೂರದಲ್ಲಿರುವ ಮಂಡ್ಯ ಜಿಲ್ಲೆಯಲ್ಲಿ ದೊರೆತಿದೆ. ಇದರಿಂದ ದೇಶದಲ್ಲಿ ಇ-ವೆಹಿಕಲ್ ಗಳ ಉತ್ಪಾದನೆ ಹಾಗೂ ಬಳಕೆ ಹೆಚ್ಚಿಸುವಲ್ಲಿ ಭಾರಿ ಸಹಕಾರ ದೊರೆಯಲಿದೆ. ಈ ಭಂಡಾರ 1600 ಟನ್ ಗಳಷ್ಟು ಇರಲಿದೆ ಎಂದು ವಿಜ್ಞಾನಿಗಳು ಅಂದಾಜು ವ್ಯಕ್ತಪಡಿಸಿದ್ದಾರೆ.
ರಾಕೆಟ್ ಗಳನ್ನ ಶ್ರೀಹರಿಕೋಟದಿಂದಲೇ ಯಾಕೆ ಉಡಾವಣೆ ಮಾಡಲಾಗುತ್ತೆ..?
ಇನ್ನೂ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪತ್ತೆಯಾಗಿರುವ ಲಿಥಿಯಂ ನಿಕ್ಷೇಪ ಕಡಿಮೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚಿಲಿ ದೇಶದಲ್ಲಿ ದೊರೆಯುವ 86 ಲಕ್ಷ ಟನ್, ಆಸ್ಟ್ರೇಲಿಯಾದ 28 ಲಕ್ಷ ಟನ್, ಅರ್ಜೆಂಟೀನಾ 17 ಲಕ್ಷ ಟನ್, ಪೋರ್ಚುಗೀಸ್ ನ 60 ಸಾವಿರ ಟನ್ ಭಂಡಾರಗಳಿಗೆ ಇದನ್ನು ಹೋಲಿಸಿದರೆ 14,100 ಟನ್ ಅಧಿಕವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹೀಗಾಗಿ ನಾವು ಲೀಥಿಯಂಗಾಗಿ ಮುಂದಿನ ದಿನಗಳಲ್ಲಿ ಚೀನಾವನ್ನ ಅವಲಂಭಿಸುವ ಅಗತ್ಯವಿಲ್ಲ ಎಂದೇ ಹೇಳಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








