ಮಠಗಳಿಗೆ ರಾಜಕಾರಣಿಗಳು ಬಂದ್ರೆ ಅಶಾಂತಿ ಗ್ಯಾರಂಟಿ : ಶ್ರೀ ದಿಂಗಾಲೇಶ್ವರ ಸ್ವಾಮೀಜಿ
ಧಾರವಾಡ : ಮಠಗಳ ಒಳಗೆ ರಾಜಕಾರಣಿಗಳು ಪ್ರವೇಶ ಮಾಡಿದ್ರೆ ಅಲ್ಲಿ ಅಶಾಂತಿ ಗ್ಯಾರಂಟಿ ಎಂದು ಬಾಲೇಹೊಸೂರು ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ಮೇಲೆ ಹರಿಹಾಯ್ದರು. ಮಠಗಳಲ್ಲಿ ಯಾವಾಗ ಭಕ್ತರು ಹೊರ ಹೋಗಿ ರಾಜಕಾರಣಿಗಳು ಒಳ ಬರುತ್ತಾರೋ ಆಗ ಅಲ್ಲಿ ಅಶಾಂತಿ ಗ್ಯಾರಂಟಿ.
ರಾಜಕಾರಣಿಗಳು ಇರುವ ಜಾಘ ವಿಧಾನಸೌಧವೇ ಹೊರತು ಮಠಗಳಲ್ಲ. ಬಹಳಷ್ಟು ಮಠಗಳಲ್ಲಿ ರಾಜಕಾರಣಿಗಳ ಪ್ರವೇಶವಾಗಿ ಇಡೀ ಮಠದ ಆಸ್ತಿ ಕಬಳಿಸುವ ಹಾಗೂ ಮಠದ ಆಸ್ತಿ ನಾಶ ಮಾಡುವ ಪ್ರಯತ್ನ ನಡೆದಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇನ್ನ ಹುಬ್ಬಳ್ಳಿಯ ಮೂರು ಸಾವಿರ ಮಠದ ಬಗ್ಗೆ ಮಾತನಾಡಿ, ಮಠದ ಆಸ್ತಿಯನ್ನ ಕೆಲವರಿಗೆ ದಾನವಾಗಿ, ಇನ್ನೂ ಕೆಲವರಿಗೆ ಕರೆದು ಕೊಡಲಾಗಿದೆ. ಹಲವರಿಗೆ ಕೆಲವು ಅಗ್ರಿಮೆಂಟ್ ಮೇಲೆ ಜಮೀನು ಕೊಡಲಾಗಿದೆ.
ಈ ಎಲ್ಲ ಆಸ್ತಿ ಮಠಕ್ಕೆ ಉಳಿಯಬೇಕು, ಅದಕ್ಕೆ ನಾವು ಜನಜಾಗೃತಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಠದ ಆಸ್ತಿ ವಾಪಸ್ ಬರುವವರೆಗೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









