ಶಕ್ತಿ ಕಳೆದುಕೊಂಡ ರಾಜಾಹುಲಿ : ಡಮ್ಮಿಯಾದ್ರಾ ಬಿಎಸ್ ವೈ
ಬೆಂಗಳೂರು : ರಾಜ್ಯದಲ್ಲಿ ಶಕ್ತಿ ಕಳೆದುಕೊಂಡ್ರಾ ರಾಜಾಹುಲಿ..? ಸಿಎಂ ಆಗಿ ಡಮ್ಮಿ ಆದ್ರಾ ಬಿಜೆಪಿಯ ಮಾಸ್ ಲೀಡರ್..? ಪಕ್ಷದ ಬಿಗ್ ಬಾಸ್ ಗಳ ಎದುರು ವೀಕ್ ಆಗ್ಬಿಟ್ರಾ ಬಿ.ಎಸ್.ಯಡಿಯೂರಪ್ಪ..? ಎಂಬ ಪ್ರಶ್ನೆಗಳು ಸದ್ಯ ರಾಜಕೀಯ ವಲಯದಲ್ಲಿ ಹೊಗೆಯಾಡಲು ಶುರು ಮಾಡಿವೆ.
ಸಂಪುಟ ಸರ್ಕಸ್ ಗೆ ಬ್ರೇಕ್ ಬಿದ್ದಿದ್ದು, ಏಳು ಮಂದಿ ಶಾಸಕರು ನೂತನ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆದ್ರೆ ತನ್ನವರಿಗೆ ಮಂತ್ರಿಪಟ್ಟ ದಕ್ಕಿಸಿಕೊಡುವಲ್ಲಿ ಸಿಎಂ ವಿಫಲರಾಗಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿ B.L.ಸಂತೋಷ್ ಯಡಿಯೂರಪ್ಪ ಅವರನ್ನು ಓವರ್ ಟೇಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಬಿಗ್ ಬಾಸ್ ಗಳ ಬಳಿಗೆ ತನ್ನ ಆಪ್ತರೂ ಸೇರಿದಂತೆ ವಲಸಿಗರ ಹೆಸರುಗಳನ್ನು ಫೈನಲ್ ಮಾಡಿ ಪಟ್ಟಿಯನ್ನು ತೆಗೆದುಕೊಂಡು ಹೋಗಿದ್ದರು.
ಆದ್ರೆ ಸಿಎಂ ನೀಡಿದ ಏಳು ಹೆಸರುಗಳಲ್ಲಿ ಕೇವಲ ಮೂವರನ್ನ ಮಾತ್ರ ಹೈಕಮಾಂಡ್ ಫೈನಲ್ ಮಾಡಿದೆ. ಅಲ್ಲದೆ ನಾಲ್ವರ ಹೆಸರನ್ನ ಸಂತೋಷ್ ನೀಡಿದ್ದ ಪಟ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ ತಮ್ಮ ಪಟ್ಟಿಯಲ್ಲಿ ಶಾಸಕರಾದ ಮುನಿರತ್ನ ಮತ್ತು ರೇಣುಕಾಚಾರ್ಯ ಹೆಸರನ್ನು ಶಿಫಾರಸ್ಸು ಮಾಡಿದ್ದರಂತೆ.
ಇದು ಒಂದು ಕಡೆಯಾದ್ರೆ ಸಚಿವ ಪಟ್ಟಿ ಹೊರ ಬೀಳುತ್ತಿದ್ದಂತೆ ರಾಜ್ಯದ ಕೆಲ ಬಿಜೆಪಿ ಶಾಸಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ಪಕ್ಷದ ನಾಯಕರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇದೆಲ್ಲವನ್ನು ನೋಡಿದ್ರೆ ಯಡಿಯೂರಪ್ಪನವರು ಶಾಸಕರನ್ನು ಕಂಟ್ರೋಲ್ ಮಾಡದಷ್ಟು ವೀಕ್ ಆಗ್ಬಿಟ್ರಾ ಎನ್ನೋ ಪ್ರಶ್ನೆ ಎದ್ದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









