ಮುಷ್ತಾಕ್ ಅಲಿ ಟೂರ್ನಿ : ಕರ್ನಾಟಕಕ್ಕೆ ಮೂರನೇ ಗೆಲುವು
ಬೆಂಗಳೂರು : ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಅನಿವೃದ್ಧ್ ಜೋಶಿ ಸ್ಫೋಟಕ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯಲ್ಲಿ 3ನೇ ಜಯ ಸಾಧಿಸಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರೈಲ್ವೇಸ್ ತಂಡ, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 152 ರನ್ ಗಳಿಸಿತ್ತು. ರೈಲ್ವೇಸ್ ಪರ ಶಿವಂ ಚೌದರಿ 48 ಹಾಗೂ ಪ್ರತಾಪ್ ಸಿಂಗ್ 41 ಹಾಗೂ ಹರ್ಷ್ ತ್ಯಾಗಿ 33 ರನ್ ಗಳಿಸಿದ್ದರು. ಕರ್ನಾಟಕ ತಂಡದ ಪರ ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್ ತಲಾ 2 ವಿಕೆಟ್ ಗಳನ್ನು ಪಡೆದರೇ ವಿ. ಕೌಶಿಕ್ ಒಂದು ವಿಕೆಟ್ ಪಡೆದು ಮಿಂಚಿದರು.
ರೈಲ್ವೇಸ್ ನೀಡಿದ್ದ 153 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ 19.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು. ಕರ್ನಾಟಕದ ಪರ ಅನಿವೃದ್ಧ್ ಜೋಶಿ 40 ಎಸೆತಗಳಲ್ಲಿ 4 ಸಿಕ್ಸರ್ 3 ಬೌಂಡರಿ ಸಹಿತ ಅಜೇಯ 64 ರನ್ ಗಳಿಸಿ ಗೆಲುವಿನ ರೂವಾರಿಯಾದರೇ ಇವರಿಗೆ ದೇವದತ್ ಪಡಿಕ್ಕಲ್ (37) ಉತ್ತಮ ಬೆಂಬಲ ನೀಡಿದ್ರು. ನಾಯಕ ಕರುಣ್ ನಾಯರ್(14), ಶ್ರೀಜಿತ್ ರೋಹನ್ (14) ರನ್ ಗಳಿಸಿದರು.
ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು, 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









