ಉಡುಪಿ: ನದಿ ಕಿನಾರೆ, ಬೀಚ್, ಜಲಪಾತ, ಸುಂದರ ಪರಿಸರ, ಅರಮನೆ, ಕೋಟೆಗಳಲ್ಲಿ ಪ್ರೀವೆಡ್ಡಿಂಗ್ ಶೂಟಿಂಗ್ ಮಾಡುವುದು ಇತ್ತೀಚಿನ ಟ್ರೆಂಡ್. ನದಿಗಳಲ್ಲಿ ತೇಲುವ ಬೋಟ್ ಮೇಲೆ ಫ್ರೀ ವೆಡ್ಡಿಂಗ್ ಶೂಟ್ ಮಾಡುವ ವೇಳೆ ವಧು-ವರ ನೀರುಪಾಲಾದ ಘಟನೆ ಇತ್ತೀಚೆಗೆ ಮಂಡ್ಯದ ಕಾವೇರಿ ನದಿಯಲ್ಲಿ ನಡೆದಿತ್ತು.
ಮದುವೆ ಸಂಭ್ರಮ ಜೀವನದಲ್ಲಿ ಒಂದು ಬಾರಿ ಮಾತ್ರ ಸಿಗುವುದು. ಈ ಸಂಭ್ರಮವನ್ನು ಆಕರ್ಷಣೀಯವಾಗಿ, ವಿಶೇಷವಾಗಿ ಮಾಡಬೇಕೆಂಬುದು ಹಲವರ ಕನಸಾಗಿರುತ್ತದೆ.

ಇಲ್ಲೊಂದು ಮದುವೆ ಮಂಟಪದಲ್ಲಿ ಮನೆಯ ಹಿರಿಯರು ತಾಳಿ ಹಸ್ತಾಂತರ ಮಾಡಿ ಮಾಂಗಲ್ಯ ಧಾರಣೆ ಮಾಡಬೇಕಾದ ಜಾಗದಲ್ಲಿ ಡ್ರೋಣ್ ಕ್ಯಾಮರಾ ಮಾಂಗಲ್ಯ ಹೊತ್ತು ಬಂದು ವರನ ಕೈಗೆ ನೀಡುವ ಮೂಲಕ ಹೊಸ ಅಧ್ಯಾಯವೊಂದನ್ನು ಬರೆದಿದ್ದಾರೆ.
ಅಂದ ಹಾಗೆ ಈ ವಿಶೇಷ ಸನ್ನಿವೇಶ ಸಾಕ್ಷಿಯಾಗಿದ್ದು ಉಡುಪಿ ಜಿಲ್ಲೆಯ ಕಾರ್ಕಳದ ಮೀಯಾರ್ ನಲ್ಲಿ. ನೆಂಟರಿಷ್ಟರು, ಬಂಧುಮಿತ್ರರ ನಡುವೆ ಬಾನಂಗಳದಲ್ಲಿ ಮಾಂಗಲ್ಯ ಹೊತ್ತು ಹಾರಿ ಬಂದ ಡ್ರೋಣ್, ವರ ಮೆಲ್ವಿನ್ ಕೈಗೆ ಮಾಂಗಲ್ಯ ಹಸ್ತಾಂತರಿಸಿದೆ. ಡ್ರೋಣ್ನಲ್ಲಿ ಹಾರಿ ಬಂದ ಮಾಂಗಲ್ಯವನ್ನು ವಧು ವೆನಿಷಾಗೆ ಧಾರಣೆ ಮಾಡುವ ಮೂಲಕ ನವಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಂದೆ-ತಾಯಿ, ಹಿರಿಯರು, ಮದುವೆ ಮಂಟಪದಲ್ಲಿ ನೆರೆದ ಬಂಧುಮಿತ್ರರು ಮಾಂಗಲ್ಯ ಮುಟ್ಟಿ ಆಶೀರ್ವದಿಸುವ ಮೂಲಕ ಮದುವೆಯನ್ನು ಸಾಕ್ಷೀಕರಿಸುತ್ತಾರೆ. ಆದರೆ, ಹಾಗೆ ಆಗದೇ ಡ್ರೋಣ್ ಮೂಲಕ ಮಾಂಗಲ್ಯವನ್ನು ತರಿಸಿಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








