ADVERTISEMENT
Saturday, February 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಏನಾಗಿದೆ ಸಮಾಜಕ್ಕೆ.. ಅತ್ಯಾಚಾರಿಗಳಿಗೆ ನಮ್ಮ ಕಾನೂನಿನ ಭಯ ಯಾಕಿಲ್ಲ.. ಹುಡುಗಿಯರಿಗೆ ಬದುಕುವ ಹಕ್ಕೇ ಇಲ್ವಾ..!   

Namratha Rao by Namratha Rao
January 17, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಏನಾಗಿದೆ ಸಮಾಜಕ್ಕೆ.. ಅತ್ಯಾಚಾರಿಗಳಿಗೆ ನಮ್ಮ ಕಾನೂನಿನ ಭಯ ಯಾಕಿಲ್ಲ.. ಹುಡುಗಿಯರಿಗೆ ಬದುಕುವ ಹಕ್ಕೇ ಇಲ್ವಾ..!

ಸಮಾಜಕ್ಕೆ ಏನಾಗಿದೆ. ನಮ್ಮ ಕಾನೂನು ವ್ಯವಸ್ಥೆ ಅಷ್ಟೊಂದು ದುರ್ಬಲವಾಗಿದ್ಯಾ. ಅಥವ ಎಂಥಹದ್ದೇ  ತಪ್ಪು ಮಾಡಿದ್ರೂ ನಮ್ಮ ಕಾನೂನಿನ ವ್ಯವಸ್ಥೆಯಲ್ಲಿ ಸುಲಭವಾಗಿ  ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಅನ್ನೋ ಯೋಚನೆನಾ. ಅಥವ ಪೊಲೀಸ್ ಇಲಾಖೆ ಮೇಲೆಯೇ ಕಾಮುಕರಿಗೆ ಭಯ ಇಲ್ವಾ… ಹೀಗೆಲ್ಲಾ ಪ್ರಶ್ನೆ ಅನುಮಾನಗಳು ಏಳುವುದಕ್ಕೆ ಕಾರಣೆ.. ಇತ್ತೀಚೆಗೆ ದಿನಕ್ಕೊಂದಾದ್ರು ಬೆಳಕಿಗೆ ಬರುತ್ತಿರುವ ಅತ್ಯಚಾರ ಪ್ರಕರಣಗಳು. ಅದ್ರಲ್ಲೂ ಉತ್ತರಪ್ರದೇಶದಲ್ಲಿ ಮಹಿಳೆಯರಗೆ ಭದ್ರತೆಯೇ ಇಲ್ವಾ. ಹೆಣ್ಮಕ್ಕಳಾಗಿ ಹುಟ್ಟಿರೋದೇ ತಪ್ಪಾ ಅನ್ನಿಸೋದಕ್ಕೆ ಶುರುವಾಗಿದೆ. ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಬಿಹಾರ ಹೆಚ್ಚಾಗಿ ಈ ರಾಜ್ಯಗಳಲ್ಲಿ ಸಾಮೂಹಿಕ ಅತ್ಯಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಎಷ್ಟೇ ಕಠಿಣ ಕಾನೂನಿನ ಕ್ರಮ ಕೈಗೊಂಡ್ರೂ ಸಹ ಯಾಕೆ ಈ ರೀತಿಯಾದ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಯಾಕೆ ಅತ್ಯಚಾರದ ಬಗ್ಗೆ ಯೋಚನೆ ಮಾಡೋಕು ಮುನ್ನ ಕಾಮುಕರ ಮೈ ನಡುಗಲ್ಲ. ಯಾಕೆ ಕಾನೂನಿ ವ್ಯವಸ್ಥೆ ಮೇಲೆ ಭಯ ಹುಟ್ಟಲ್ಲ.. ಯಾಕಂದ್ರೆ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಅನ್ನೋ ಆಲೋಚನೆ..

Related posts

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

February 14, 2026
KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

February 14, 2026

ಅತ್ತೆ ಮೇಲೆ ಸೊಸೆ ದರ್ಪ : ಪೊರಕೆಯಿಂದ ಹಲ್ಲೆ

ಹೌದು ಈ ವಿಶ್ಲೇಷಣೆ ಕೆಲವೊಬ್ಬರಿಗೆ ಇಷ್ಟ ಆಗದೇ ಇರಬಹುದು. ಆದ್ರೆ ಹತ್ರಾಸ್ ಆಗಿರಬಹುದು ನಿರ್ಭಯಾ ಕೇಸ್ ಆಗಿರಬಹುದು ಇದಕ್ಕೆ ಉದಾಹರಣೆ. ನಿರ್ಭಯಾ ಪ್ರಕರಣ ನಡೆದು ಬರೋಬ್ಬರಿ 8 ವರ್ಷಗಳೇ ಬೇಕಾಯ್ತು  ಅತ್ಯಚಾರಿಗಳಿಗೆ ಗಲ್ಲಿಗೇರಿಸಲು. ಈ ಕೇಸ್ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದೇಶಾದ್ಯಂತ ಜನರು ಒಗ್ಗೂಡಿ ನಿರ್ಭಯಾಗೆ  ನ್ಯಾಯ ಒದಗಿಸಬೇಕೆಂದು ಹೋರಾಡಿ ಉಗ್ರ ಪ್ರತಿಭಟನೆಗಳನ್ನ ನಡೆಸಿದ್ರು. ಆದ್ರೂ 8 ವರ್ಷಗಳೇ ಬೇಕಾಯಿತು ನಿರ್ಭಯಾಗೆ ನ್ಯಾಯ ಸಿಗೋದಕ್ಕೆ. ಅಪರಾಧಿಗಳನ್ನ ಗಲ್ಲಿಗೇರಿಸಿದ ಮೇಲಾದ್ರೂ ಅತ್ಯಚಾರ ಪ್ರಕರಣಗಳ ಸಂಖ್ಯೆ ಕಡೆಮೆಯಾಯ್ತಾ ಇಲ್ಲಾ,, ಇನ್ನೂ ಹೆಚ್ಚಾಗ್ತಾಲೇ ಇದೆ. ಯಾಕೆ ಇಂತಹ ಪ್ರಕರಣಗಳು ಈಗಲೂ ಮರುಕಳಿಸುತ್ತಲೇ ಇದೆ. ಅಪರಾಧ ಸಾಬೀತಾದ ತಕ್ಷಣವೇ ಯಾಕೆ ಅಪರಾಧಿಗಳನ್ನ ಗಲ್ಲಿಗೇರಿಸಲಾಗ್ತಿಲ್ಲ. ಇನ್ನೂ ಹತ್ರಾಸ್ ಕೇಸ್ ನಲ್ಲಿ ಯುವತಿ ಸಾವನಪ್ಪಿದ್ರೂ ಈ ವರೆಗೂ ನ್ಯಾಯ ಸಿಕ್ಕಿಲ್ಲ. ಇನ್ನೂ ಅಮಾನವೀಯತೆ ಎಂದ್ರೆ ಅಲ್ಲಿನ ಪೊಲೀಸರು ಯುವತಿಯ ಶವವನ್ನ ಮನಮೆಯವರಿಗೂ ಗೊತ್ತಾಗದೇ ಸುಟ್ಟುಉಹಾಕಿದ್ದು. ಥೂ ಇದ್ಯಾವ ನ್ಯಾಯ ಸ್ವಾಮಿ.. ಮಹಿಳೆಯರಿಗೆ ರಕ್ಷಣೆಯೇ ಇಲ್ವಾ… ಪೊಲೀಸ್ ಇಲಾಖೆ ಅಷ್ಟೊಂದು ಸ್ಟ್ರಾಂಗ್ ಇಲ್ವಾ… ಸರ್ಕಾರ ಏನೂ ಕ್ರಮಗಳನ್ನ ತೆಗೆದುಕೊಳ್ತಾಯಿಲ್ಲ ಯಾಕೆ..

ಪೊಲೀಸರಿಗೆ ಇಲ್ಲಾ ಸೇಫ್ಟಿ : ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆಯೇ ಅತ್ಯಚಾರ

ನ್ಯಾಯಯುತವಾಗಿ ನೋಡೋದಾದ್ರೆ  ಯಾರು ಒಪ್ಪಲಿ ಬಿಡಲಿ ಜನರ ದೃಷ್ಟಿಯಿಂದ ನೋಡೋದಾದ್ರೆ 2019ರ ಹೈದ್ರಾಬಾದ್  ಪ್ರಿಯಾಂಕಾ ರೆಡ್ಡಿ ರೇಪ್ ಕೇಸ್ ನಲ್ಲಿ , ಸಂತ್ರಸ್ತೆಗೆ ನಿಜವಾದ ನ್ಯಾಯ ಸಿಕ್ತು ಅನ್ನೋದು ಜನರ ಅಭಿಪ್ರಾಯ. ಯಾಕಂದ್ರೆ  ಸಾಮೂಹಿಕ ಅತ್ಯಚಾರವೆಸಗಿ ವೈದ್ಯೆಯನ್ನ ಸುಟ್ಟುಹಾಕಿದ್ದ ಪಾಪಿಗಳನ್ನ ಎನ್ ಕೌಂಟರ್ ಮಾಡಿ ಕೊಂದು ದೇಶದ ಹೀರೋಗಳು ಎನಿಸಿಕೊಂಡಿದ್ದವರು ಹೈದ್ರಾಬಾದ್ ಪೊಲೀಸರು. ಇದಕ್ಕೆ ಮಾನವ ಹಕ್ಕುಗಳ ಪರ ಹೋರಾಟಗಾರರಿಂದ ವಿರೋಧ ವ್ಯಕ್ತವಾದ್ರೂ ಇಡೀ ದೇಶವೇ ಪೊಲೀಸರ ಕಾರ್ಯವನ್ನ ಕೊಂಡಾಡಿದ್ದು ನಿಜ.

ಇನ್ನೂ ಕೇವಲ ಒಂದೇ ವಾರದ ಅಂತರದಲ್ಲಿ ದೆಹಲಿ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ , ಹರಿಯಾಣ ಈ ನೆರೆ ಹೊರ ಭಾಗದಲ್ಲಿ 15 ಕ್ಕೂ ಹೆಚ್ಚು ಅತ್ಯಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಬಿಹಾರದಲ್ಲಿ  15 ವರ್ಷದ ಕಿವುಡು ಮೂಕ ಬಾಲಕಿಯ ಮೇಲೆ ಸಾಮೂಹಿಕ ಅತ್ಯಚಾರ,   ಮಧ್ಯಪ್ರದೇಶದಲ್ಲಿ 13 ವರ್ಷದ ಬಾಲಕಿಯ ಮೇಲೆ 9 ಮಂದಿಯಿಂದ ಒಂದೇ ವಾರದಲ್ಲಿ 2 ಬಾರಿ ಅತ್ಯಚಾರ, ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅತ್ಯಚಾರ ಹೀಗೆ ಒಂದಾದ ಮೇಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಆದ್ರೆ ಇದಕ್ಕೆಲ್ಲ ಕಡಿವಾಣ ಬೀಳೋದ್ಯಾವಾಗ.RAPE COVCTION

ಒಂದೇ ವಾರದಲ್ಲಿ 2 ಬಾರಿ ‘13ರ ಅಪ್ರಾಪ್ತೆ’ ಮೇಲೆ 9 ಜನರಿಂದ ‘ಗ್ಯಾಂಗ್ ರೇಪ್’

ಇನ್ನೂ  ಸೋ ಕಾಲ್ಡ್ ಬುದ್ಧಿ ಜೀವಿಗಳು ಅಂತ ಕರೆಸಿಕೊಳ್ಳೋವರು ಈ ಬಗ್ಗೆ ಕೆಲ ವಿಮರ್ಷೆಗಳನ್ನ ಮಾಡೋದು ನೋಡುದ್ರೆ ಸಿಟ್ಟು ನೆತ್ತಿಗೇರುತ್ತೆ. ಯುವತಿಯರು ಅರೆ ಬರೆ ಬಟ್ಟೆ ಹಾಕೋದು, ಒಂಟಿಯಾಗಿ ಓಡಾಡುವುದು, ಮೈ ತುಂಬ ಬಟ್ಟೆ ಹಾಕದೇ ಇರೋದೆ ಅತ್ಯಾಚಾರಗಳಿಗೆ ಕಾರಣ ಅಂತಾರೆ… ಅರೆ ಬರೆ ಬಟ್ಟೆ ಹಾಕಿದ್ರೇನೆ ಅತ್ಯಚಾರಾ ಆಗೋದಾದ್ರೆ, ಹಾಟ್ ಆಗಿ ಮಾಡ್ರನ್ ಡ್ರೆಸ್ ಹಾಕೋದರಿಂದಲೇ ರೇಪ್ ಆಗೋದಾದ್ರೆ  1 ವರ್ಷದ , 3 ವರ್ಷದ ಕಂದಮ್ಮಗಳಿಗೆ  ಅರೆ ಬರೆ ಬಟ್ಟೆ ಹಾಕೋಕೆ ಬರಲ್ಲ. ಮಾಡ್ರನ್ ಆಗಿರೋಕೆ ಬರುತ್ತಾ.. ಏನೂ ಅರಿಯದ ಪುಟ್ಟ ಕಂದಮ್ಮಗಳು, ಮೈತುಂಬ ಬಟ್ಟೆ ತೊಟ್ಟವರ ಮೇಲೆ ಅತ್ಯಚಾರಗಳು ಆಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಗೃಹಿಣಿಯರ ಮೇಲೆ ಅಷ್ಟೇ ಯಾಕೆ 80 ವರ್ಷದ ಇಳಿ ವಯಸ್ಸಿನ ವೃದ್ಧೆಯರ ಮೇಲೂ ಅತ್ಯಚಾರಗಳಾಗ್ತಿವೆ. ಹಾಗಾದ್ರೆ ಅವರು ಸಹ ಮಾಡ್ರನ್ ಆಗೇ ಇರೋದಕ್ಕೆ ಹೀಗಾಗ್ತಾ ಇದ್ಯಾ. ಅತ್ಯಾಚಾರ ಯಾಕ್ ಆಗ್ತಿದೆ. ಅತ್ಯಚಾರಿಗಳ ಮನಸ್ಥಿತಿಯೇ ಹೊಲಸು. ಹಾಕುವ ಬಟ್ಟೆ ಕಾರಣಕ್ಕೆ ಅತ್ಯಚಾರವಾಗಲ್ಲ.. ಅತ್ಯಚಾರಿಗಳ  ಕೀಳು ಮನಸ್ಥಿತಿ ಸಮಾಜದಲ್ಲಿ  ಮಹಿಳೆಯರಿಗೆ ಸುರಕ್ಷತೆಯಿಲ್ಲದೇ ಇರುವ ರೀತಿ ಆಗಿದೆ. ಇದಕ್ಕೆಲ್ಲ ಸರ್ಕಾರವೇ ಕಡಿವಾಣ ಹಾಕಬೇಕು.  ಸರ್ಕಾರ ಈ ಬಗ್ಗೆ ಎಚ್ಚೆತ್ತು ಕಠಿಣ ಕ್ರಮ ಕೈಗೊಳ್ಳಬೇಕು.  ಕಾಮುಕರು ಅತ್ಯಚಾರದ ಬಗ್ಗೆ ಯೋಚನೆ ಮಾಡುವುದಕ್ಕೂ ಮುನ್ನ ಮೈ ಬೆವರುಕಿತ್ತು ಬರುಯವಷ್ಟು ಭಯಾನಕವಾದ ಶಿಕ್ಷೆ ವಿಧಿಸಬೇಕು.. ನಡುಬೀದಿಯಲ್ಲಿ ಅತ್ಯಚಾರಿಗಳನ್ನ ಗಲ್ಲಿಗೇರಿಸಬೇಕು.

ಹಗಲಲ್ಲೂ ಹುಡುಗಿಯರಿಗೆ ಸೇಫ್ಟಿ ಇಲ್ಲಾ… ಕಾಮುಕರಿಗೆ ಕಾನೂನಿನ ಭಯ ಇಲ್ಲಾ…! 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: gang rapeRapewhy rapists dosnt scared about law system
ShareTweetSendShare
Join us on:

Related Posts

india vs pakistan

ದಾಯಾದಿಗಳ ಮುನಿಸು..ಕ್ರಿಕೆಟ್ ಜಗತ್ತಿಗೆ ಕಾಸು.. !

by admin
February 14, 2026
0

ಆತ್ಮೀಯ ಕ್ರಿಕೆಟ್ ಅಭಿಮಾನಿಗಳೇ.., ಐಸಿಸಿ ಬಂಡವಾಳ ಹೂಡಿರುವ, ಬಿಸಿಸಿಐ ನಿರ್ದೇಶನದ, ಪಿಸಿಬಿ ಚಿತ್ರಕಥೆ ಬರೆದಿರುವ, ಶ್ರೀಲಂಕಾ ನಿರ್ಮಾಣದ ಆಧುನಿಕ ಮಹಾಭಾರತದ ಐಸಿಸಿ ಟಿ-20ಯ ಮಹಾ ನಾಟಕ "ದಾಯಾದಿಗಳ...

KV Prabhakar, the protagonist of the CM Cup badminton tournament..!

ಸಿಎಂ ಕಪ್ ಬ್ಯಾಡ್ಮಿಂಟನ್ ಟೂರ್ನಿಯ ಪಾತ್ರಧಾರಿ ಕೆ.ವಿ. ಪ್ರಭಾಕರ್..!

by admin
February 14, 2026
0

ಕೆ.ವಿ. ಪ್ರಭಾಕರ್, ಪತ್ರಿಕಾ ರಂಗ, ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಕಳೆದ 13 ವರ್ಷಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವ ಕೆ.ವಿ. ಪ್ರಭಾಕರ್, ಒಂದು ಲೆಕ್ಕದಲ್ಲಿ...

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

₹3.6 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ… ರಷ್ಯಾದಿಂದ 288 S-400 ಕ್ಷಿಪಣಿಗಳು

by Shwetha
February 14, 2026
0

ಭಾರತದ ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ₹3.6 ಲಕ್ಷ ಕೋಟಿ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ ನೀಡಿದೆ. ಇದರ...

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ  ಹೈಕೋರ್ಟ್

ವಿವಾಹ ಅಥವಾ ಮತಾಂತರದಿಂದ ಜಾತಿ ಅಳಿಯುವುದಿಲ್ಲ: ಹುಟ್ಟಿನಿಂದ ಬಂದ ಜಾತಿ ಸಾಯುವವರೆಗೂ ಶಾಶ್ವತ ಎಂದು ಸಾರಿದ ಹೈಕೋರ್ಟ್

by Shwetha
February 14, 2026
0

ಲಕ್ನೋ: ಜಾತಿ ಎನ್ನುವುದು ವ್ಯಕ್ತಿಯೊಬ್ಬನ ಹುಟ್ಟಿನಿಂದ ನಿರ್ಧಾರವಾಗುತ್ತದೆಯೇ ವಿನಃ ಆತ ಮಾಡಿಕೊಳ್ಳುವ ವಿವಾಹ ಅಥವಾ ಬದಲಾಯಿಸುವ ಧರ್ಮದಿಂದಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ...

ಅಜ್ಜಯ್ಯನ ಶಕ್ತಿಯಿಂದಲೇ ಸರ್ಕಾರ ಸುಭದ್ರ, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಿ: ಡಿಕೆ ಶಿವಕುಮಾರ್

ಅಜ್ಜಯ್ಯನ ಶಕ್ತಿಯಿಂದಲೇ ಸರ್ಕಾರ ಸುಭದ್ರ, ಮುಂದೇನಾಗುತ್ತೆ ಅನ್ನೋದನ್ನ ಕಾದು ನೋಡಿ: ಡಿಕೆ ಶಿವಕುಮಾರ್

by Shwetha
February 14, 2026
0

ತುಮಕೂರು: ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮತ್ತೊಮ್ಮೆ ತಮ್ಮ ಅಚಲ ದೈವಭಕ್ತಿಯನ್ನು ಪ್ರದರ್ಶಿಸಿದ್ದು, ರಾಜ್ಯ ಸರ್ಕಾರದ ಅಸ್ತಿತ್ವ ಮತ್ತು ಭವಿಷ್ಯದ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram