ಮಡಿಕೇರಿ: ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಘಟನೆ ಕೊಡಗು ಜಿಲ್ಲೆ ಪೆÇನ್ನಂಪೇಟೆ ತಾಲೂಕಿನ ಬಾಳಲೆ ಹೋಬಳಿಯಲ್ಲಿ ನಡೆದಿದೆ.
ಬಾಳಲೆ ಗ್ರಾಮದ ತಟ್ಟೆಕೆರೆ ಕಾಲೋನಿ ನಿವಾಸಿ ಕುರುಬರ ರಾಜು (40)ಕರಡಿ ದಾಳಿಯಿಂದ ತೀವ್ರವಾಗಿ ಗಾಯ ಗೊಂಡಿದ್ದಾರೆ. ರಾಜು ಅವರ ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳ ಮೇಲೆ ಕರಡಿ ದಾಳಿ ಮಾಡಿದೆ. ರಾಜು ಅವರ ದೇಹದ ತಂಬಾ ಪರಚಿದ ಗಾಯಗಳಾಗಿದ್ದು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗ್ಗೆ ಏಳು ಗಂಟೆಯ ಸಮಯದಲ್ಲಿ ತಟ್ಟೆಕೆರೆ ಕಾಲೋನಿಯಿಂದ ಜಾಗಲೆ ತೋಟವೊಂದಕ್ಕೆ ಕಾಫಿ ಹಣ್ಣು ಕೀಳಲು ರಾಜು ತೆರಳುತ್ತಿದ್ದರು. ಈ ಸಮಯದಲ್ಲಿ ಕರಡಿಗಳು ದಾಳಿ ನಡೆಸಿವೆ.
ಕರಡಿ ದಾಳಿ ವೇಳೆ ರಾಜು ಜೋರಾಗಿ ಕಿರುಚಿಕೊಂಡಿದ್ದಾರೆ. ತಕ್ಷಣವೇ ಸಮೀಪದಲ್ಲೇ ಇದ್ದ ಹಾಡಿ ನಿವಾಸಿಗಳು ರಾಜು ಕಿರುಚಿದ ಶಬ್ದವನ್ನು ಆಲಿಸಿ ಓಡಿ ಬಂದಾಗ ಕರಡಿಗಳು ಕಾಡಿನ ಒಳಗೆ ಓಡಿಹೋಗಿವೆ ಎಂದು ಹಾಡಿ ನಿವಾಸಿ ರಾಮು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 6 ಗಂಟೆಗೆ ಇದೇ ಕರಡಿಗಳು ಮಲ್ಚಿರಾ ವಿಠಲ ಎಂಬುವರ ತೋಟ ಕಾರ್ಮಿಕನನ್ನು ಗದ್ದೆಯ ಸಮೀಪದಲ್ಲಿ ದಾಳಿ ನಡೆಸಲು ಯತ್ನಿಸಿದ್ದವು. ಆದರೆ ಸಮಯ ಪ್ರಜ್ಞೆಯಿಂದ ಕಾರ್ಮಿಕ ಪಾರಾಗಿದ್ದಾನೆ. ಇದೆ ಎರಡು ಕರಡಿಗಳು ಏಳು ಗಂಟೆ ಹೊತ್ತಿಗೆ ರಾಜುವಿನ ಮೇಲೆ ದಾಳಿ ನಡೆಸಿವೆ.
ಕರಡಿ ದಾಳಿಗೆ ಒಳಗಾಗಿ ರಸ್ತೆಯಲ್ಲಿ ನರಳುತ್ತಿದ್ದ ರಾಜುವನ್ನು ಕಂಡ ಸ್ಥಳೀಯ ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಚೆಕ್ಕರಾ ಸೂರ್ಯ ಅಯ್ಯಪ್ಪ ಮೂಲಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸುವ ಮೂಲಕ ಪ್ರಾಣ ಉಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಸೂರ್ಯ ಅಯ್ಯಪ್ಪ, ಈಗಾಗಲೇ ಆನೆ ದಾಳಿ, ಹುಲಿ ದಾಳಿಗಳಿಂದ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಕರಡಿ ದಾಳಿಯಿಂದ ಕಾಫಿ ಬೆಳೆಗಾರರು-ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








