1962 ರಲ್ಲಿ ಚೀನಾ ಭಾರತದ ಮೇಲೆ ಯುದ್ದ ಸಾರಿತ್ತು. ಈ ಯುದ್ದದಲ್ಲಿ ಸೇನೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಲು ಸರ್ಕಾರ ಮುಂದಾಗಿತ್ತು. ಅದಕ್ಕಾಗಿ ಅಂದಿನ ಸರ್ಕಾರ ಜನರಿಂದ ಹಣ ಸಂಗ್ರಹಿಸಲು ಕರೆ ನೀಡಿತ್ತು. ಹಾಗಾಗಿ ಇಡಿ ದೇಶವೇ ದೇಶಕ್ಕಾಗಿ ಸಹಾಯದ ಹಸ್ತ ಚಾಚಿತ್ತು. ಇದೀಗ ಕೊರೊನಾ ವೈರಸ್ ವಿರುದ್ದ ನಡೆದ ಯುದ್ದಕ್ಕೂ ಸಹ ಅದೇ ಮಾದರಿಯಲ್ಲಿ ಸಹಾಯ ಮಾಡಬೇಕಿದೆ. ಹೌದು, 1962 ರಲ್ಲಿ ಭಾರತ ಸೇನೆ ಯುದ್ದ ಎದುರಿಸುವಷ್ಟು ಬಲವಾಗಿರಲಿಲ್ಲ. ಸೇನೆಯಲ್ಲಿ ತಂತ್ರಜ್ಞಾನ ಬಳಕೆಯ ಕೊರತೆ ಇತ್ತು. ಸೈನಿಕರು ಮೂಲಭೂತ ಸೌಕರ್ಯಗಳು ಇಲ್ಲದ ಪರಿಸ್ಥಿತಿಯಲ್ಲಿದ್ದರು. ಯುದ್ದಕ್ಕೆ ಸಿದ್ದವಿಲ್ಲದ ಸಮಯದಲ್ಲಿ ಚೀನಾ ಭಾರತದ ಮೇಲೆ ಮುಗಿ ಬಿದ್ದಿತ್ತು. ಯುದ್ಧದ ಬಳಿಕ ತನ್ನ ಕೊರತೆಯನ್ನು ಗಮನಿಸಿದ ನೆಹರು ಸರ್ಕಾರ ಸೇನೆಗೆ ಅಗತ್ಯ ಮೂಲಭೂತ ಸೌಕರ್ಯಗಳ ಒದಗಿಸಲು ಮುಂದಾಗಿತ್ತು. ಅದಕ್ಕಾಗಿ ಸರ್ಕಾರ ದೇಶದ ಜನರಿಂದಲೇ ಹಣ ಸಂಗ್ರಹಕ್ಕೆ ಮುಂದಾಗಿತ್ತು. ಈ ವೇಳೆ ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆ ಮಾಡಿದ ಸಹಾಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಮತ್ತು ಇಂದಿರಾ ಗಾಂಧಿಯವರ ತುಲಬಾರ ನಡೆಸಿ ಬರೊಬ್ಬರಿ 1 ಲಕ್ಷ 18 ಸಾವಿರದ 556 ಗ್ರಾಮ ಬಂಗಾರವನ್ನು ವಿಜಯಪುರ ಜನ ರಕ್ಷಣಾ ನಿಧಿಯಾಗಿ ನೀಡಿದ್ದರು. ಇದೀಗ 1962 ರ ಯುದ್ದದಂತೆ ಚೀನಾದಿಂದ ಕೊರೊನಾ ವೈರಸ್ ಹರಡಿದೆ. ಇದು ಭಾರತಕ್ಕೆ ಮಾತ್ರವಲ್ಲದೆ ಬೇರೆ ದೇಶಗಳಿಗೆ ಹರಡಿ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹಾಗಾಗಿ ಕೊರೊನಾ ವೈರಸ್ ವಿರುದ್ದ ಯುದ್ದ ನಡೆಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ. ಆದ್ದರಿಂದ ಭಾರತ ಸರ್ಕಾರ ನಡೆಸುತ್ತಿರುವ ಯುದ್ದಕ್ಕೆ ದೇಶದ ಜನ 1962ರ ಮಾದರಿಯಲ್ಲಿ ಸಹಾಯ ಮಾಡಬೇಕಿದೆ. ಆದರೆ ಈ ಸಹಾಯ ಹಣ ನೀಡಿಯೇ ಮಾಡಬೇಕಿಲ್ಲ. ಬದಲಾಗಿ ಮನೆಯಿಂದ ಹೊರ ಬರದೆ, ಮನೆಯಲ್ಲಿ ಇದ್ದು ಸರ್ಕಾರಕ್ಕೆ ಸಹಾಯ ಮಾಡಬೇಕಿದೆ. ಯಾಕೆಂದರೆ ದೇಶದ ಪಿ,ಎಂ ನರೇಂದ್ರ ಮೋದಿ 21 ದಿನಗಳ ಕಾಲ ದೇಶವನ್ನು ಲಾಕ್ ಡೌನ್ ಮಾಡಿದ್ದಾರೆ. ಅಲ್ಲದೆ ಮನೆಯಿಂದ ಹೊರ ಬರದಂತೆ ಮನವಿ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮತ್ತು ರಾಜ್ಯದ ಸಿ,ಎಂ ಯಡಿಯೂರಪ್ಪ ಜನರಲ್ಲಿ ಮನೆಯಿಂದ ಹೊರ ಬರದಂತೆ ಮನವಿ ಮಾಡಿದ್ದಾರೆ. ಆದರೂ ಸಾರ್ವಜನಿಕರು ಮನೆಯಿಂದ ಹೊರ ಬರುವುದು ನಿಲ್ಲಿಸಿಲ್ಲ. ಹಾಗಾಗಿ ದೇಶದ ಜನರು ಮನೆಯಿಂದ ಹೊರ ಬರದೆ, 1962 ರ ಮಾದರಿಯಲ್ಲಿ ಸರ್ಕಾರಕ್ಕೆ ಬೆಂಬಲ ನೀಡಬೇಕು. ಅಂದು ಹಣದ ಸಹಾಯ, ಇಂದು ಸಾಮಾಜಿಕ ಅಂತರ ಮಾತ್ತು ಮನೆಯಿಂದ ಹೊರ ಬರದೆ ಇರುವುದೇ ಬಹು ದೊಡ್ಡ ಸಹಾಯ.
ಕುಮಾರಸ್ವಾಮಿ ಅವರ 10 ಪ್ರಶ್ನೆಗೆ ಪ್ರಿಯಾಂಕ್ ಖರ್ಗೆ ನೀಡಿದ ಒಂದೇ ಒಂದು ಸವಾಲು ಏನು: KPSC ಅಕ್ರಮದ ಅಸಲಿ ಮುಖವಾಡ ಕಳಚಿದ ಖರ್ಗೆ!
ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಂಜಿನಿಯರ್ ಹುದ್ದೆಗಳ...








