ಥೂ… ಇವಳೆಂಥಾ ಮಗಳು… ತಂದೆಯನ್ನೇ ಗೃಹಬಂಧನದಲ್ಲಿಟ್ಟು ಚಿತ್ರಹಿಂಸೆಕೊಟ್ಟ ರಾಕ್ಷಸಿ…!
ಅಪ್ಪ ಯಾವಾಗಲೂ ಹೆಣ್ಮಕ್ಕಳ ರಿಯಲ್ ಹೀರೋ ಆಗಿರುತ್ತಾರೆ. ಮಗಳಿಗೆ ತಂದೆಯೇ ಸೂಪರ್ ಹೀರೋ… ತಂದೆಗೆ ಮಗಳು ರಾಜಕುಮಾರಿಯಾಗಿರುತ್ತಾಳೆ. ಮಗಳಿಗೋಸ್ಕರ ತಂದೆ ಯಾವ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಇನ್ನೂ ಹುಡುಗಿಯರು ಎಲ್ರಿಗಿಂತ ಹೆಚ್ಚಾಗಿ ತಂದೆಯನ್ನೇ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿ ಮಾಡ್ತಾರೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಇಲ್ಲೊಬ್ಬ ಪುತ್ರಿ ತನ್ನ ತಂದೆಗೆ ಕೊಡಬಾರದ ಹಿಂಸೆ ಕೊಟ್ಟು ಚಿತ್ರಹೆಂಸೆ ನೀಡಿದ್ದಾಳೆ. ಕೊಟ್ಟ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ರೂಂ ನಲ್ಲಿ ಕೂಡಿ ಹಾಕಿ ತಂದೆಯನ್ನ ಟಾರ್ಚರ್ ಮಾಡಿದ್ದಾಳೆ.
ಇದೀಗ ರಾಕ್ಷಸ ಸ್ವರೂಪದ ಮಗಳ ವಿರುದ್ಧ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಬನಶಂಕರಿಯ ನಿವಾಸಿ 68 ವರ್ಷದ ಮುನಿವೆಂಕಟರಾಮ ಎಂಬುವವರು ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, 2019ರಲ್ಲಿ ನಂದಿನಿ ಲೇಔಟ್ನಲ್ಲಿ ನೆಲೆಸಿರುವ ಮಗಳು ಗಂಗಾವತಿ ಮನೆಗೆ ಕರೆದುಕೊಂಡು ಬಂದಿದ್ದಳು.
ಈಸ್ಟ್ ಆರ್ ವೆಸ್ಟ್ ಇಂಡಿಯಾ ಈಸ್ ಬೆಸ್ಟ್… ಭಾರತದ ಫುಡ್ ಈಸ್ ಆಲ್ವೇಸ್ ಸೂಪರ್ ಬೆಸ್ಟ್…. ಪ್ರಪಂಚದ ವಿಚಿತ್ರ, ಅಸಹ್ಯ , ಆಹಾರಗಳು ( ಭಾಗ 2)
ತುರ್ತು ಹಣ ಬೇಕೆಂದು ಹೇಳಿ 2 ಚಿನ್ನದ ಉಂಗುರ ಹಾಗೂ ಕತ್ತಿನಲ್ಲಿದ್ದ ಸರ ತೆಗೆದುಕೊಂಡು ಹೋಗಿದ್ದರು. ಮುನಿವೆಂಕಟರಾಮ ಬಿಡಿಎ ಸೈಟ್ ಪಡೆಯಲು ಮುಂದಾಗಿದ್ದು, ಇದಕ್ಕಾಗಿ 4.65 ಲಕ್ಷ ರೂ. ಹೊಂದಿಸಿಟ್ಟಿದ್ದರು.
ನಾವೇ ಬಿಡಿಎ ಸೈಟ್ ಪಡೆಯಲು ಹಣ ಕಟ್ಟುತ್ತೇವೆ ಎಂದು ಹೇಳಿ ಮುನಿವೆಂಕಟರಾಮರಿಂದ ಮಗಳು ಹಾಗೂ ಅಳಿಯ ಹಣ ಪಡೆದಿದ್ದರು. ಆದರೆ, ಅವರು ಹಣ ಕಟ್ಟಿರಲಿಲ್ಲ. ಹೀಗಾಗಿ ಮುನಿವೆಂಕಟರಾಮ ಹಣ ಹಿಂತಿರುಗಿಸುವಂತೆ ಹೇಳಿದ್ದರು. ಇದರಿಂದ ಅಕ್ರೋಶಗೊಂಡ ಮಗಳು ಗಂಗಾವತಿ, ಪತಿಯೊಂದಿಗೆ ಸೇರಿ ತಂದೆಯ ಮೇಲೆಯೇ ಹಲ್ಲೆ ನಡೆಸಿ ರೂಂನಲ್ಲಿ 5 ದಿನ ಕೂಡಿ ಅನ್ನ ನೀರು ನೀಡದೆ ಚಿತ್ರ ಹಿಂಸೆ ಕೊಟ್ಟಿದ್ದಾಳೆ. ಇದೀಗ ಮಗಳು ಗಂಗಾವತಿ ಹಾಗೂ ಆಕೆಯ ಪತಿ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







